ನವದೆಹಲಿ : ಇಂದು ಬೌದ್ಧ ಧರ್ಮಗುರು ದಲೈಲಾಮ ಅವರ 86ನೇ ವರ್ಷದ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮೂಲಕ ದಲೈಲಾಮ ಅವರಿಗೆ ಶುಭಾಶಯ ತಿಳಿಸಿದ್ದಾರೆ.
"ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನ ಲಭಿಸಲಿ" ಎಂದು ಶುಭ ಹಾರೈಸಿದ್ದಾರೆ. ಇನ್ನು, ಧರ್ಮಶಾಲಾದಲ್ಲಿ 14ನೇ ದಲೈಲಾಮಾ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಪ್ರತಿ ವರ್ಷ ಅವರ ಜನ್ಮದಿನಾಚರಣೆಗಳನ್ನು ಟಿಬೆಟಿಯನ್ ಸಮುದಾಯವು ಹಬ್ಬದಂತೆ ಆಚರಣೆ ಮಾಡುತ್ತದೆ. ಪ್ರತಿ ವರ್ಷವೂ ಮೆಕ್ಲಿಯೋಡ್ಗಂಜ್ನಲ್ಲಿರುವ ಸುಗ್ಲಾಗ್ಖಾಂಗ್ನಲ್ಲಿ ಹುಟ್ಟುಹಬ್ಬ ಮಾಡಲಾಗುತ್ತದೆ.
ಆದರೆ, ಈ ಬಾರಿ ಕೊರೊನಾ ಹಿನ್ನೆಲೆ ಕೇಂದ್ರ ಟಿಬೆಟಿಯನ್ ಆಡಳಿತದ ಅತ್ಯುನ್ನತ ಕಾರ್ಯನಿರ್ವಾಹಕ ಕಚೇರಿಯಾದ ಕಶಾಗ್(ಕ್ಯಾಬಿನೆಟ್) ಯಾವುದೇ ಸಭೆಗಳನ್ನು ನಡೆಸದಂತೆ ಸಲಹೆ ನೀಡಿದೆ.