ETV Bharat / bharat

ಜುಲೈ 4ಕ್ಕೆ ಆಂಧ್ರಕ್ಕೆ ಪ್ರಧಾನಿ ಮೋದಿ ಭೇಟಿ: ನಟ ಚಿರಂಜೀವಿಗೆ ಪ್ರತ್ಯೇಕ ಆಹ್ವಾನ - ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂ

ಭೀಮಾವರಂನಲ್ಲಿ ನಡೆಯುವ ಸೀತಾರಾಮರಾಜು 125ನೇ ಜಯಂತಿ ಉತ್ಸವದಲ್ಲಿ ಕೇಂದ್ರದ ಮಾಜಿ ಸಚಿವರೂ ಆದ ನಟ ಚಿರಂಜೀವಿ ಅವರಿಗೆ ಕೇಂದ್ರ ಸಚಿವ ಕಿಶನ್​ ರೆಡ್ಡಿ ಪ್ರತ್ಯೇಕವಾದ ಆಹ್ವಾನವನ್ನು ನೀಡಿದ್ದಾರೆ.

prime-minister-modi-will-visit-andhra-pradesh-on-july-4th
ಜುಲೈ 4ಕ್ಕೆ ಆಂಧ್ರಕ್ಕೆ ಪ್ರಧಾನಿ ಮೋದಿ ಭೇಟಿ: ನಟ ಚಿರಂಜೀವಿಗೆ ಪ್ರತ್ಯೇಕ ಆಹ್ವಾನ
author img

By

Published : Jun 28, 2022, 11:01 PM IST

ಅಮರಾವತಿ (ಆಂಧ್ರಪ್ರದೇಶ): ಜುಲೈ 4ರಂದು ಪ್ರಧಾನಿ ನರೇಂದ್ರ ಮೋದಿ ಆಂಧ್ರಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಭಾಗವಹಿಸುವ ಕಾರ್ಯಕ್ರಮವೊಂದಕ್ಕೆ ಖ್ಯಾತ ಚಿತ್ರನಟ ಚಿರಂಜೀವಿ ಅವರಿಗೆ ಪ್ರತ್ಯೇಕವಾದ ಆಹ್ವಾನ ನೀಡಲಾಗಿದೆ.

ಜು.4ರಂದು ವಿಜಯವಾಡಕ್ಕೆ ಬೆಳಗ್ಗೆ 10.10ಕ್ಕೆ ಪ್ರಧಾನಿ ಮೋದಿ ಬಂದಿಳಿಯಲಿದ್ದಾರೆ. ನಂತರ ಹೆಲಿಕಾಪ್ಟರ್​ ಮೂಲಕ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂಗೆ ಪ್ರಧಾನಿ ತೆರಳಲಿದ್ದಾರೆ. ಇಲ್ಲಿ ಆಜಾದಿ ಕಾ ಅಮೃತ್​ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ಅಲ್ಲೂರಿ ಸೀತಾರಾಮರಾಜು 125ನೇ ಜಯಂತಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೇ, 30 ಅಡಿ ಎತ್ತರದ ಸೀತಾರಾಮರಾಜು ಅವರ ವಿಗ್ರಹವನ್ನೂ ಪ್ರಧಾನಿ ಉದ್ಘಾಟಿಸಲಿದ್ದಾರೆ.

ನಟ ಚಿರಂಜೀವಿ ಅವರಿಗೆ ಕೇಂದ್ರ ಸಚಿವ ಕಿಶನ್​ ರೆಡ್ಡಿ ಬರೆದ ಪತ್ರ

ಭೀಮಾವರಂನಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಕೇಂದ್ರದ ಮಾಜಿ ಸಚಿವರೂ ಆದ ನಟ ಚಿರಂಜೀವಿ ಅವರಿಗೆ ಕೇಂದ್ರ ಸಚಿವ ಕಿಶನ್​ ರೆಡ್ಡಿ ಪ್ರತ್ಯೇಕವಾದ ಆಹ್ವಾನವನ್ನು ನೀಡಿದ್ದಾರೆ. ಸೀತಾರಾಮರಾಜು 125ನೇ ಜಯಂತಿ ಉತ್ಸವದಲ್ಲಿ ಭಾಗವಹಿಸುವಂತೆ ಕಿಶನ್​ ರೆಡ್ಡಿ ಅವರಿಗೆ ಕೇಂದ್ರ ಸಚಿವರು ಮನವಿ ಮಾಡಿದ್ದಾರೆ.

ಇನ್ನು, ಈ ಜಯಂತಿ ಉತ್ಸವ ಕಾರ್ಯಕ್ರಮದ ನಂತರ ಪ್ರಧಾನಿ ಬಹಿರಂಗ ಸಭೆಯನ್ನೂ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು ಒಂದು ಗಂಟೆ ಕಾಲ ಅವರು ಪಾಲ್ಗೊಳ್ಳಲಿದ್ದಾರೆ. ನಂತರ ಮಧ್ಯಾಹ್ನ 1.10ಕ್ಕೆ ಮರಳಿ ದೆಹಲಿಗೆ ಪ್ರಯಾಣಿಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಇಬ್ಬರು ಮಕ್ಕಳೊಂದಿಗೆ ಹಿರಿಯ ನಟ ಮೋಹನ್​ ಬಾಬು ಕೋರ್ಟ್​ಗೆ ಹಾಜರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.