ETV Bharat / bharat

ವೆಂಕಯ್ಯ ನಾಯ್ಡು ಕಾರ್ಯವೈಖರಿ ಬಗ್ಗೆ ಪ್ರಧಾನಿ ಮೋದಿ ಗುಣಗಾನ

ರಾಜ್ಯಸಭಾ ಅಧ್ಯಕ್ಷ, ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರ ಅಧಿಕಾರವಧಿ ಇಂದಿಗೆ ಕೊನೆಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಧನ್ಯವಾದ ಸಲ್ಲಿಸಿದರು. ಲೋಕಸಭೆಯಲ್ಲಿ ಕಾಮನ್​ವೆಲ್ತ್​ ವೀರರ ಸಾಧನೆಗೆ ಪ್ರಶಂಸೆ ವ್ಯಕ್ತವಾಯಿತು.

prime-minister-modi-praise-venkaiah-naidu
ವೆಂಕಯ್ಯನಾಯ್ಡು ಕಾರ್ಯವೈಖರಿ ಬಗ್ಗೆ ಪ್ರಧಾನಿ ಮೋದಿ ಗುಣಗಾನ
author img

By

Published : Aug 8, 2022, 12:03 PM IST

ನವದೆಹಲಿ: ರಾಜ್ಯಸಭಾ ಅಧ್ಯಕ್ಷ, ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರ ಅಧಿಕಾರವಧಿ ಇಂದಿಗೆ ಮುಗಿಯಲಿದ್ದು, ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದರು.

"ನಾವೆಲ್ಲರೂ ರಾಜ್ಯಸಭಾಧ್ಯಕ್ಷ ಮತ್ತು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಧನ್ಯವಾದ ಹೇಳಲು ಇಲ್ಲಿ ಸೇರಿದ್ದೇವೆ. ಇದು ಸದನಕ್ಕೆ ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ. ಸದನದ ಹಲವಾರು ಐತಿಹಾಸಿಕ ಕ್ಷಣಗಳು ವೆಂಕಯ್ಯ ನಾಯ್ಡು ಅವರ ಉಪಸ್ಥಿತಿಯಲ್ಲಿ ಘಟಿಸಿವೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

"ರಾಜಕೀಯದಿಂದ ಅವರು ದೂರವಿದ್ದರೂ, ಸಾರ್ವಜನಿಕ ಜೀವನದಿಂದ ದೂರು ಉಳಿಯಲ್ಲ ಎಂದು ಅವರು ಈ ಹಿಂದೆ ಹಲವು ಬಾರಿ ಹೇಳಿದ್ದಾರೆ. ಇದು ಅವರ ದೃಢತೆ, ಜನಪರ ಕಾಳಜಿಯನ್ನು ತೋರಿಸುತ್ತದೆ. ಅವರ ಹಿರಿತನ, ಅನುಭವ ಸಾರ್ವಜನಿಕ ಆಡಳಿತ ನಮ್ಮ ಪ್ರಯೋಜನಕ್ಕೆ ಬರಲಿದೆ" ಎಂದು ಬಣ್ಣಿಸಿದರು.

ಲೋಕಸಭೆಯಲ್ಲಿ ಪದಕವೀರರಿಗೆ ಬಹುಪರಾಕ್​: ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಭಾರತೀಯ ಕ್ರೀಡಾಪುಟಗಳ ಸಾಧನೆ ಬಗ್ಗೆ ಲೋಕಸಭೆಯಲ್ಲಿ ಗುಣಗಾನ ಮಾಡಲಾಯಿತು. ನಮ್ಮ ಆಟಗಾರರ ಪ್ರದರ್ಶನ ದೇಶದ ಕೀರ್ತಿ ಪತಾಕೆ ಹಾರಿಸಿದೆ. 18 ಚಿನ್ನದ ಪದಕ, 15 ಬೆಳ್ಳಿ ಮತ್ತು 22 ಕಂಚಿನ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸದನದ ಗಮನಕ್ಕೆ ತಂದರು. ಸದನದ ಪರವಾಗಿ ಎಲ್ಲಾ ಪದಕ ವಿಜೇತರಿಗೆ ಸಭಾಧ್ಯಕ್ಷರು ಅಭಿನಂದನೆ ಸಲ್ಲಿಸಿದರು.

ಓದಿ: ಕ್ರಿಕೆಟ್‌ನಲ್ಲಿ ಪಡೆದ ಮೊಟ್ಟ ಮೊದಲ ಕಾಮನ್​ವೆಲ್ತ್​ ಪದಕ ಯಾವಾಗಲೂ ವಿಶೇಷ: ಆಟಗಾರರನ್ನು ಅಭಿನಂದಿಸಿದ ಪ್ರಧಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.