ನವದೆಹಲಿ: ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರವನ್ನುದ್ದೇಶಿಸಿ ತಮ್ಮ ಚೊಚ್ಚಲ ಭಾಷಣ ಮಾಡಿದರು. ದೇಶ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲ ಭಾರತೀಯರಿಗೆ ಒಂದು ದಿನ ಮುಂಚಿತವಾಗಿ ಸ್ವಾತಂತ್ರ್ಯೋತ್ಸವದ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು.
ಪ್ರಜಾಪ್ರಭುತ್ವದ ನಿಜವಾದ ಸಾಮರ್ಥ್ಯವನ್ನು ಕಂಡುಹಿಡಿಯಲು ಜಗತ್ತಿಗೆ ಸಹಾಯ ಮಾಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಪ್ರಜಾಪ್ರಭುತ್ವವು ಈ ದೇಶದ ಮಣ್ಣಿನ ಬೇರುಗಳಲ್ಲಿ ಬೆಳೆದಿದ್ದು ಮಾತ್ರವಲ್ಲ, ಅದನ್ನು ಶ್ರೀಮಂತಗೊಳಿಸಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ಹೇಳಿದರು.
-
In celebrating Independence Day, we celebrate our ‘Bharatiyata’. India is full of diversity. But, we all also have something in common. It is this common thread that binds us together & inspires us to walk together with the spirit of 'Ek Bharat, Shreshtha Bharat': President Murmu pic.twitter.com/ew7bvQ45gt
— ANI (@ANI) August 14, 2022 " class="align-text-top noRightClick twitterSection" data="
">In celebrating Independence Day, we celebrate our ‘Bharatiyata’. India is full of diversity. But, we all also have something in common. It is this common thread that binds us together & inspires us to walk together with the spirit of 'Ek Bharat, Shreshtha Bharat': President Murmu pic.twitter.com/ew7bvQ45gt
— ANI (@ANI) August 14, 2022In celebrating Independence Day, we celebrate our ‘Bharatiyata’. India is full of diversity. But, we all also have something in common. It is this common thread that binds us together & inspires us to walk together with the spirit of 'Ek Bharat, Shreshtha Bharat': President Murmu pic.twitter.com/ew7bvQ45gt
— ANI (@ANI) August 14, 2022
ದೇಶದ ಬೆಳವಣಿಗೆಯು ಹೆಚ್ಚು ಅಂತರ್ಗತವಾಗುತ್ತಿದೆ. ಪ್ರಾದೇಶಿಕ ಅಸಮಾನತೆಗಳೂ ಕಡಿಮೆಯಾಗುತ್ತಿವೆ. ಜೊತೆಗೆ ಲಿಂಗ ಅಸಮಾನತೆಯೂ ಕಡಿಮೆಯಾಗುತ್ತಿದೆ. ಮಹಿಳೆಯರು ಅನೇಕ ಕಟ್ಟುಪಾಡುಗಳಿಂದ ಹೊರ ಬರುತ್ತಿದ್ದಾರೆ. ನಮ್ಮ ಹೆಣ್ಣುಮಕ್ಕಳು ರಾಷ್ಟ್ರದ ದೊಡ್ಡ ಭರವಸೆಯಾಗಿದ್ದಾರೆ ಎಂದು ತಿಳಿಸಿದರು.
ಸ್ವಾತಂತ್ರ್ಯ ದಿನವನ್ನು ಆಚರಿಸುವಾಗ ನಾವು ನಮ್ಮ ‘ಭಾರತೀಯತೆ’ಯನ್ನು ಆಚರಿಸುತ್ತೇವೆ. ಭಾರತವು ವೈವಿಧ್ಯತೆಯಿಂದ ಕೂಡಿದೆ. ಸಾಮಾನ್ಯ ನೂಲು ನಮ್ಮನ್ನು ಒಟ್ಟಿಗೆ ಬಂಧಿಸುತ್ತದೆ ಮತ್ತು 'ಏಕ್ ಭಾರತ್, ಶ್ರೇಷ್ಠ ಭಾರತ್' ಎಂಬ ಮನೋಭಾವದೊಂದಿಗೆ ಒಟ್ಟಾಗಿ ನಡೆಯಲು ಪ್ರೇರೇಪಿಸುತ್ತದೆ ಎಂದು ರಾಷ್ಟ್ರಪತಿ ಹೇಳಿದರು.
-
Many heroes & their struggles were forgotten, especially among peasants & tribals. Govt's decision to observe November 15 as ‘Janajatiya Gaurav Divas’ is welcome as our tribal heroes aren't merely local or regional icons but inspire entire nation: President Droupadi Murmu pic.twitter.com/NM5EEAWcZa
— ANI (@ANI) August 14, 2022 " class="align-text-top noRightClick twitterSection" data="
">Many heroes & their struggles were forgotten, especially among peasants & tribals. Govt's decision to observe November 15 as ‘Janajatiya Gaurav Divas’ is welcome as our tribal heroes aren't merely local or regional icons but inspire entire nation: President Droupadi Murmu pic.twitter.com/NM5EEAWcZa
— ANI (@ANI) August 14, 2022Many heroes & their struggles were forgotten, especially among peasants & tribals. Govt's decision to observe November 15 as ‘Janajatiya Gaurav Divas’ is welcome as our tribal heroes aren't merely local or regional icons but inspire entire nation: President Droupadi Murmu pic.twitter.com/NM5EEAWcZa
— ANI (@ANI) August 14, 2022
ರಾಷ್ಟ್ರೀಯ ಶಿಕ್ಷಣ ನೀತಿಯು ಭವಿಷ್ಯದ ಪೀಳಿಗೆ ಮತ್ತು ಕೈಗಾರಿಕಾ ಕ್ರಾಂತಿಯ ಮುಂದಿನ ಹಂತಕ್ಕೆ ಸಿದ್ಧಪಡಿಸುವ ಗುರಿಯನ್ನು ಹೊಂದಿದೆ. ಈ ನೀತಿಯು ಪರಂಪರೆಯೊಂದಿಗೆ ಮರು ಸಂಪರ್ಕಿಸುತ್ತದೆ. ಜಾಗತಿಕ ಪ್ರವೃತ್ತಿಯನ್ನು ಮಣಿಸಲು ಮತ್ತು ಆರ್ಥಿಕತೆಯ ಏಳಿಗೆಗೆ ಸಹಾಯ ಮಾಡಿದ ಕೀರ್ತಿಗೆ ಸರ್ಕಾರ ಮತ್ತು ಅದರ ನೀತಿ ನಿರೂಪಕರು ಅರ್ಹರು ಎಂದು ಮುರ್ಮು ಅಭಿಪ್ರಾಯಪಟ್ಟರು.
ಅನೇಕ ವೀರರು ಮತ್ತು ಅವರ ಹೋರಾಟಗಳನ್ನು ಮರೆತಿದ್ದೇವೆ. ವಿಶೇಷವಾಗಿ ರೈತರು ಮತ್ತು ಬುಡಕಟ್ಟು ಜನರ ಹೋರಾಟ ಮರೆತುಹೋಗಿವೆ. ನಮ್ಮ ಬುಡಕಟ್ಟು ನಾಯಕರು ಕೇವಲ ಸ್ಥಳೀಯ ಅಥವಾ ಪ್ರಾದೇಶಿಕ ಐಕಾನ್‌ಗಳಾಗಿರದೆ ಇಡೀ ರಾಷ್ಟ್ರಕ್ಕೆ ಸ್ಫೂರ್ತಿಯಾಗಿದ್ದಾರೆ. ಆದ್ದರಿಂದ ಸರ್ಕಾರ ನವೆಂಬರ್ 15ರನ್ನು 'ಜನಜಾತಿಯ ಗೌರವ್ ದಿವಸ್' ಎಂದು ಆಚರಿಸಲು ನಿರ್ಧಾರ ಮಾಡಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ನಾಳೆ 9ನೇ ಬಾರಿಗೆ ಪ್ರಧಾನಿ ಮೋದಿ ಭಾಷಣ: ಡ್ರೋನ್ ನಿಗ್ರಹ ವ್ಯವಸ್ಥೆ