ಜಾರ್ಖಂಡ್: ಉಳುಮೆ ಮಾಡಲು ರೈತನೊಬ್ಬ ಟ್ರ್ಯಾಕ್ಟರ್ ಖರೀದಿಗೆ ಫೈನಾನ್ಸ್ ಕಂಪನಿಯಿಂದ ಹಣ ಪಡೆದಿದ್ದ. ಸರಿಯಾದ ಸಮಯದಲ್ಲಿ ಹಣ ಪಾವತಿಸಲು ಆ ರೈತನಿಂದ ಸಾಧ್ಯವಾಗಿಲ್ಲ. ಹಣ ಕೊಡದ ರೈತನ ಟ್ರ್ಯಾಕ್ಟರ್ ಅನ್ನೇ ಜಪ್ತಿ ಮಾಡಲು ಫೈನಾನ್ಸ್ ಕಂಪನಿ ಅಧಿಕಾರಿಗಳು ಮನೆಗೆ ಬಂದಿದ್ದರು. ಈ ವೇಳೆ ನಡೆದ ವಾಗ್ವಾದದಲ್ಲಿ ರೈತನ ಗರ್ಭಿಣಿ ಮಗಳ ಮೇಲೆ ಅದೇ ಟ್ರ್ಯಾಕ್ಟರ್ ಹತ್ತಿಸಿ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಜಾರ್ಖಂಡ್‌ನ ಹಜಾರಿಬಾಗ್‌ನಿಂದ ಈ ದುರ್ಘಟನೆ ವರದಿಯಾಗಿದೆ. ಫೈನಾನ್ಸ್ ಕಂಪನಿಯವರು ರೈತನ ಟ್ರ್ಯಾಕ್ಟರ್ ಜಪ್ತಿ ಮಾಡಲು ಮನೆಗೆ ಬಂದಾಗ, ರೈತ ಈ ವೇಳೆ ಮನೆಯಲ್ಲಿರಲಿಲ್ಲ. ಗರ್ಭಿಣಿ ಮಗಳು ಟ್ರ್ಯಾಕ್ಟರ್ ತೆಗೆದುಕೊಂಡು ಹೋಗುವುದನ್ನು ವಿರೋಧಿಸಿದ್ದಾರೆ. ಫೈನಾನ್ಸ್ನವರು ಹಣ ಕಟ್ಟಲು ಸೂಚಿಸಿದ್ದಾರೆ.
ಈ ವಿಷಯ ತಿಳಿಯದ ಆಕೆ ಟ್ರ್ಯಾಕ್ಟರ್ ಒಯ್ಯದಂತೆ ತಡೆದಿದ್ದಾರೆ. ಈ ವೇಳೆ, ಕ್ರೂರಿ ಫೈನಾನ್ಸ್ ಅಧಿಕಾರಿಗಳು ಅಡ್ಡ ಬಂದ ಆಕೆಯ ಮೇಲೆಯೇ ಟ್ರ್ಯಾಕ್ಟರ್ ಹತ್ತಿಸಿದ್ದಾರೆ. ಗರ್ಭಿಣಿಯಾಗಿದ್ದ ಆಕೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ. ತಕ್ಷಣವೇ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಮಹಿಳೆ ಉಸಿರು ಚೆಲ್ಲಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳು ಮತ್ತು ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಫೈನಾನ್ಸ್ ಕಂಪನಿ ಮೇಲೆ ಕೊಲೆ ಕೇಸ್ ದಾಖಲಿಸಿಕೊಳ್ಳಲಾಗಿದೆ. ರೈತನಿಂದ ಟ್ರ್ಯಾಕ್ಟರ್ ವಶಪಡಿಸಿಕೊಳ್ಳಲು ಸಂತ್ರಸ್ತರ ಮನೆಗೆ ಹೋಗುತ್ತಿರುವ ವಿಚಾರವನ್ನು ಫೈನಾನ್ಸಿನವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ಅಸ್ಸೋಂನ ಐಐಟಿಯಲ್ಲಿ ಕೇರಳ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು.. ಕಾರಣ ನಿಗೂಢ