ETV Bharat / bharat

ಪ್ರವಾಸಿ ಭಾರತೀಯ ದಿವಸ್: ಹೆಮ್ಮೆಪಡುವ 10 ಅನಿವಾಸಿ ಭಾರತೀಯರಿವರು!

ಸುಂದರ್ ಪಿಚೈ, ಸತ್ಯ ನಾಡೆಲ್ಲಾ, ಮನು ಪ್ರಕಾಶ್ ಹಾಗೂ ನರಿಂದರ್ ಸಿಂಗ್ ಕಪಾನಿ ಹೀಗೆ ನೂರಾರು ಹೆಸರು ಬರುತ್ತವೆ. ಇವರೆಲ್ಲಾ ಭಾರತದ ಹೆಮ್ಮೆಯ ಸುಪುತ್ರರು. ಇಲ್ಲಿ ಹುಟ್ಟಿ ಇಂದು ದೇಶ ವಿದೇಶಗಳಲ್ಲಿ ತಮ್ಮ ಸೇವೆಯಿಂದ ಎಲ್ಲರೂ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ.

author img

By

Published : Jan 9, 2021, 6:00 AM IST

Pravasi Bharatiya Divas 09th January
ಹೆಮ್ಮೆಪಡುವ 10 ಅನಿವಾಸಿ ಭಾರತೀಯರಿವರು!

ಭಾರತವನ್ನು ವಿಶ್ವದ ಗುರು ಎಂದು ಕರೆಯಲು ಸಾಕಷ್ಟು ಕಾರಣಗಳಿವೆ. ಯಾಕೆಂದರೆ ಭಾರತಾಂಬೆಯ ಮಡಿಲಲ್ಲಿ ಜನಿಸಿದ ಮಕ್ಕಳು ಇಂದು ಪ್ರಪಂಚದಾದ್ಯಂತ ತಮ್ಮದೇ ಆದ ದೊಡ್ಡ ಕೊಡುಗೆಯನ್ನು ನೀಡುತ್ತಿದ್ದಾರೆ. ಈ ಮುಖಾಂತರ ಭಾರತದ ಕೀರ್ತಿ ಪತಾಕೆಯನ್ನು ಭೂಮಿಯ ಪ್ರತಿ ಮೂಲೆ ಮೂಲೆಯಲ್ಲೂ ಹಾರಿಸುತ್ತಿದ್ದಾರೆ. ಅಂಥವರಲ್ಲಿ ಪ್ರಮುಖರ ಬಗೆಗಿನ ಮಾಹಿತಿ ಇಲ್ಲಿದೆ.

ಸುಂದರ್ ಪಿಚೈ:

ಸುಂದರ್ ಪಿಚೈ ಗೂಗಲ್‌ನ ಸರ್ಚ್ ಎಂಜಿನ್​ನ ಸಿಇಒ ಆಗಿದ್ದಾರೆ. ಭಾರತದಲ್ಲಿ ಜನಿಸಿದ ವಿಶ್ವ ದರ್ಜೆಯ ವ್ಯಕ್ತಿ ಇವರು. ಸುಂದರ್ ಪಿಚೈ ಅವರ ಒಟ್ಟು ವೇತನವು 2018 ರಲ್ಲಿ ಸುಮಾರು 8 1,881,066 ಆಗಿತ್ತು. ಭಾರತದ ಚೆನ್ನೈನಲ್ಲಿ ಜನಿಸಿದ ಪಿಚೈ ಮೆಟಲರ್ಜಿಕಲ್ ಎಂಜಿನಿಯರಿಂಗ್‌ನಲ್ಲಿ ಐಐಟಿ ಖರಗ್‌ಪುರದಿಂದ ಪದವಿ ಪಡೆದರು.

ಸತ್ಯ ನಾಡೆಲ್ಲಾ:

ಮೈಕ್ರೋಸಾಫ್ಟ್​ನ ಸಿಇಒ ಆಗಿರುವ ಇವರು ಹೈದರಾಬಾದ್​ಲ್ಲಿ ಜನಿಸಿದರು. 1992 ರಲ್ಲಿ ಮೈಕ್ರೋಸಾಫ್ಟ್​ ಸೇರುವ ಮೊದಲು ಸನ್ ಮೈಕ್ರೋಸಿಸ್ಟಮ್​ನಲ್ಲಿ​ ಅದರ ತಂತ್ರಜ್ಞಾನ ಸಿಬ್ಬಂದಿಯ ಸದಸ್ಯರಾಗಿ ಕೆಲಸ ಮಾಡಿದ್ದರು. ಕ್ಲೌಡ್ ಮತ್ತು ಎಂಟರ್ಪ್ರೈಸ್ ಗ್ರೂಪ್​ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿಯೂ ತಮ್ಮ ಸೇವೆ ಸಲ್ಲಿಸಿದ್ದಾರೆ. ಸಿಇಒ ಆಗುವ ಮುನ್ನ ಮೈಕ್ರೋಸಾಫ್ಟ್ ಕಾರ್ಪೊರೇಶನ್​ನಲ್ಲಿ ಸರ್ವರ್ ಮತ್ತು ಪರಿಕರಗಳ ಅಧ್ಯಕ್ಷರಾಗಿದ್ದರು.

ಮನು ಪ್ರಕಾಶ್:

ಇವರು ಉತ್ತರ ಪ್ರದೇಶದ ಮೀರತ್‌ನಲ್ಲಿ ಜನಿಸಿದರು. ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಮುಗಿಸಿದ ಇವರು ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪದವಿಗಾಗಿ ಯುನೈಟೆಡ್ ಸ್ಟೇಟ್ಸ್‌ಗೆ ತೆರಳಿದರು. ಪ್ರಸ್ತುತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಜೈವಿಕ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಮನು, ತಮ್ಮ ಸೂಪರ್ ಕೂಲ್ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿದ್ದಾರೆ. ಆವಿಷ್ಕಾರಗಳಲ್ಲಿ ಫೋಲ್ಡ್‌ಸ್ಕೋಪ್ ಎಂಬ ಮಡಿಸಬಹುದಾದ ಮೈಕ್ರೊಸೋಪ್ ಕೂಡ ಪ್ರಮುಖವಾದದ್ದು, ಈ ಸೂಕ್ಷ್ಮದರ್ಶಕದ ಬೆಲೆ 50 ಸೆಂಟ್ಸ್ (30 ರೂ.) ಮಾತ್ರ. ಹಾಗೆಯೇ ಇತ್ತೀಚೆಗೆ ವಾಟರ್​ ಪ್ರೂಪ್​ ಕಂಪ್ಯೂಟರ್ ಅನ್ನು ಸಹ ಕಂಡುಹಿಡಿದಿದ್ದಾರೆ.

ನರಿಂದರ್ ಸಿಂಗ್ ಕಪಾನಿ:

ಪಂಜಾಬ್ ಮೂಲದ ಇವರು ಫೈಬರ್ ಆಪ್ಟಿಕ್ಸ್ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ. ಇರರ ಸೇವೆ ಗುರುತಿಸಿದ ಫಾರ್ಚೂನ್ ನಿಯತಕಾಲಿಕೆಯು ‘ಉದ್ಯಮಿಗಳ ಶತಮಾನದ’ ಸಂಚಿಕೆಯಲ್ಲಿ ಏಳು‘ಅನ್ಸಂಗ್ ಹೀರೋಸ್’ ಪಟ್ಟಿಯಲ್ಲಿ ಇವರ ಸಾಧನೆಯನ್ನೂ ಸೇರಿಸಲಾಗಿದೆ. ಇವರನ್ನು ಫೈಬರ್ ಆಪ್ಟಿಕ್ಸ್‌ನ ಸಂಸ್ಥಾಪಕರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.

ಸಲ್ಮಾನ್ ರಶ್ದಿ:

ಮುಂಬೈನಲ್ಲಿ ಜನಿಸಿದ ಇವರಿಗೆ ಈಗ 67 ವರ್ಷ. ಕಾಶ್ಮೀರಿ ಭಾರತೀಯ ಲೇಖಕರಾದ ಇವರು ಇಂಗ್ಲಿಷ್ ಸಾಹಿತ್ಯಕ್ಕೆ ನೀಡಿದ ಕೊಡುಗೆಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅವರ ಎರಡನೆಯ ಕಾದಂಬರಿ, ಮಿಡ್ನೈಟ್ಸ್ ಚಿಲ್ಡ್ರನ್ 1981 ರಲ್ಲಿ ಬೂಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಅದೇ ಕಾದಂಬರಿಗಾಗಿ 1993 ರಲ್ಲಿ ಅವರು ‘ಬುಕರ್ ಆಫ್ ಬುಕರ್ಸ್’ ಬಹುಮಾನವನ್ನೂ ಪಡೆದುಕೊಂಡಿದ್ದಾರೆ.

1945 ರಿಂದೀಚೆಗೆಗಿನ 50 ಶ್ರೇಷ್ಠ ಬ್ರಿಟಿಷ್ ಬರಹಗಾರರ ಪಟ್ಟಿಯಲ್ಲಿ 13 ನೇ ಸ್ಥಾನವನ್ನು 2008 ರಲ್ಲಿ ದಿ ಟೈಮ್ಸ್ ನೀಡಿದೆ. ಇನ್ನು ತಮ್ಮ ವೃತ್ತಿಜೀವನವನ್ನು ಕಾಪಿ ರೈಟರ್ ಆಗಿ ಜಾಹೀರಾತು ಸಂಸ್ಥೆ ಒಗಿಲ್ವಿ & ಮ್ಯಾಥರ್ ಅವರೊಂದಿಗೆ ಪ್ರಾರಂಭಿಸಿದರು.

ವಿನೋದ್ ಖೋಸ್ಲಾ:

ಫೋರ್ಬ್ಸ್ ನಿಯತಕಾಲಿಕೆಯ ಪಟ್ಟಿಯಲ್ಲಿನ ಬಿಲಿಯನೇರ್​ಗಳಲ್ಲಿ ಇವರೂ ಪ್ರಮುಖರು. ಇವರು ಖೋಸ್ಲಾ, ಜಾವಾ ಪ್ರೋಗ್ರಾಮಿಂಗ್ ಭಾಷೆ ಮತ್ತು ನೆಟ್‌ವರ್ಕ್ ಫೈಲ್ ಸಿಸ್ಟಮ್ ಅನ್ನು ರಚಿಸಿದ ಸನ್ ಮೈಕ್ರೋಸಿಸ್ಟಮ್ಸ್ ಕಂಪನಿಯ ಸಹ-ಸಂಸ್ಥಾಪಕರಲ್ಲಿ ಒಬ್ಬರು. ಈ ಸಂಸ್ತೆಯ ನಂತರ ಖೋಸ್ಲಾ ವೆಂಚರ್ಸ್ ಎಂಬ ಸ್ವಂತ ಕಂಪನಿಯನ್ನೂ ರಚಿಸಿದರು. ದೆಹಲಿಯಲ್ಲಿ ಜನಿಸಿದ ಅವರು ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಂಗ ಮಾಡಿದ್ದಾರೆ.

ಪಾನ್ ನಳಿನ್

ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ ಮತ್ತು ಸಾಕ್ಷ್ಯಚಿತ್ರ ತಯಾರಕರಾದ ಇವರು ಗುಜರಾತ್‌ನಲ್ಲಿ ಜನಿಸಿದರು. ಸಂಸಾರ, ವ್ಯಾಲಿ ಆಫ್ ಫ್ಲವರ್ಸ್ ಮತ್ತು ಆಯುರ್ವೇದ: ಆರ್ಟ್ ಆಫ್ ಬೀಯಿಂಗ್‌ನಂತಹ ಅದ್ಭುತ ಮತ್ತು ಪ್ರಶಸ್ತಿ ವಿಜೇತ ಚಿತ್ರಗಳನ್ನು ಪರಿಚಯಿಸಿದ ಕೀರ್ತಿ ಇವರದು. ಅವರ ಮೊದಲ ಚಿತ್ರ ಸಂಸಾರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅವರು ಅಂತಾರಾಷ್ಟ್ರೀಯ ಪ್ರಶಂಸೆಯನ್ನು ಪಡೆದರು. ಈ ಚಿತ್ರ 30 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿತು. ಅವರ ಇತರ ಚಲನಚಿತ್ರವಾದ ವ್ಯಾಲಿ ಆಫ್ ಫ್ಲವರ್ಸ್ ಅನ್ನು 35 ದೇಶಗಳಲ್ಲಿ ಮಾರಾಟ ಮಾಡಲಾಯಿತು ಮತ್ತು ಇತಿಹಾಸದಲ್ಲಿ ಭೂಗತ ಹಿಟ್ ಎಂದು ಈ ಘಟನೆಯನ್ನು ಪರಿಗಣಿಸಲಾಗಿದೆ.

ವೆಂಕಟರಮಣ ರಾಮಕೃಷ್ಣನ್:

ತಮಿಳುನಾಡಿನ ಚಿದಂಬರಂನಲ್ಲಿ ಜನಿಸಿದ ಈ ರಚನಾತ್ಮಕ ಜೀವಶಾಸ್ತ್ರಜ್ಞ 2009 ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಥಾಮಸ್ ಎ. ಸ್ಟೀಟ್ಜ್ ಮತ್ತು ಅದಾ ಇ. ಯೋನಾಥ್ ಅವರೊಂದಿಗೆ "ರೈಬೋಸೋಮ್​ನ ರಚನೆ ಮತ್ತು ಕಾರ್ಯಗಳ ಅಧ್ಯಯನಕ್ಕಾಗಿ ಪಡೆದುಕೊಂಡಿದ್ದಾರೆ. ಯು.ಎಸ್. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಗಣ್ಯ ಸದಸ್ಯರು ಕೂಡ ಆಗಿದ್ದಾರೆ.

ಕಲ್ಪನಾ ಚಾವ್ಲಾ:

ಭಾರತದ ಕರ್ನಾಲ್​ನಲ್ಲಿ ಜನಿಸಿದ ಇವರು, ಮೊದಲ ಭಾರತೀಯ-ಅಮೆರಿಕನ್ ಗಗನಯಾತ್ರಿ ಮತ್ತು ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ಮಹಿಳೆ. 1988 ರಲ್ಲಿ ನಾಸಾದ ಅಮೆಸ್ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಇವರು ವೃತ್ತಿಜೀವನದ ಅವಧಿಯಲ್ಲಿ ಎರಡು ಬಾಹ್ಯಾಕಾಶ ಯಾತ್ರೆಗಳನ್ನು ಮಾಡಿದ್ದಾರೆ. ಚಾವ್ಲಾ 30 ದಿನಗಳು, 14 ಗಂಟೆಗಳು ಮತ್ತು 54 ನಿಮಿಷಗಳನ್ನು ಬಾಹ್ಯಾಕಾಶದಲ್ಲಿ ಕಳೆದ ಕೀರ್ತಿ ಪಡೆದಿದ್ದಾರೆ. ದುರಂತ ಎಂದರೆ 2003 ರಲ್ಲಿ ಬಾಹ್ಯಾಕಾಶ ನೌಕೆಯ ದುರಂತದಲ್ಲಿ ಸಾವಿಗೀಡಾದರು. ಈ ವೇಳೆ ಇತರ ಆರು ಸಿಬ್ಬಂದಿ ಕೂಡ ಮೃತರಾದರು. ಭಾರತದ ಮೊದಲ ಹವಾಮಾನ ಉಪಗ್ರಹವನ್ನು ಇವರ ಗೌರವಾರ್ಥವಾಗಿ ‘ಕಲ್ಪನಾ -1’ ಎಂದು ಮರುನಾಮಕರಣ ಮಾಡಲಾಯಿತು.

ಪ್ರಣವ್ ಮಿಸ್ತ್ರಿ:

ಗುಜರಾತ್‌ನ ಪಾಲನ್‌ಪುರದ 33 ವರ್ಷದ ಕಂಪ್ಯೂಟರ್ ವಿಜ್ಞಾನಿ ಮತ್ತು ಸಂಶೋಧಕರಿವರು. ಪ್ರಸ್ತುತ ಸ್ಯಾಮ್‌ಸಂಗ್‌ನಲ್ಲಿ ಸಂಶೋಧನಾ ಉಪಾಧ್ಯಕ್ಷರಾಗಿದ್ದಾರೆ ಹಾಗೆ ಥಿಂಕ್ ಟ್ಯಾಂಕ್ ತಂಡದ ಮುಖ್ಯಸ್ಥರಾಗಿದ್ದಾರೆ.

ಇವರು ಧರಿಸಬಹುದಾದ ಕಂಪ್ಯೂಟಿಂಗ್, ಆಗ್ಮೆಂಟೆಡ್ ರಿಯಾಲಿಟಿ, ಸರ್ವತ್ರ ಕಂಪ್ಯೂಟಿಂಗ್, ಗೆಸ್ಚರಲ್ ಇಂಟರ್ಯಾಕ್ಷನ್, ಎಐ, ಮೆಷಿನ್ ವಿಷನ್, ಕಲೆಕ್ಟಿವ್ ಇಂಟೆಲಿಜೆನ್ಸ್ ಮತ್ತು ರೊಬೊಟಿಕ್ಸ್‌ನಲ್ಲಿ ಕೊಡುಗೆ ನೀಡಿದ್ದಾರೆ. ಇವರನ್ನು ವಿಶ್ವ ಆರ್ಥಿಕ ವೇದಿಕೆಯು ಯಂಗ್ ಗ್ಲೋಬಲ್ ಲೀಡರ್ 2013 ಎಂದು ಗೌರವಿಸಿದೆ. ಇವರ ಅದ್ಭುತ ತಂತ್ರಜ್ಞಾನ ‘ಸಿಕ್ಸ್ತ್​ಸೆನ್ಸ್’ ಅವರಿಗೆ ಅಂತರರಾಷ್ಟ್ರೀಯ ಪ್ರಶಂಸೆ ಗಳಿಸಿಕೊಟ್ಟಿದೆ. ಸಿಕ್ಸ್ತ್‌ಸೆನ್ಸ್ ಎನ್ನುವುದು ಮಾನವನ ಸನ್ನೆಯನ್ನು ಅರ್ಥೈಸುವ ಸಾಧನವಾಗಿದೆ ಮತ್ತು ಡೇಟಾ ಪ್ರೊಜೆಕ್ಟರ್ ಮತ್ತು ಕ್ಯಾಮೆರಾ ಎರಡನ್ನೂ ಇದು ಹೊಂದಿದೆ.

ಭಾರತದಲ್ಲಿ ಹೂಡಿಕೆ ಮಾಡಿದ ಅನಿವಾಸಿ ಭಾರತೀಯರು:

ಎಸ್​ಪಿ ಹಿಂದೂಜಾ : ಹಿಂದೂಜಾ ಅವರು ಭಾರತೀಯ ಮೂಲದ ಬ್ರಿಟಿಷ್ ಬಿಲಿಯನೇರ್ ,ಉದ್ಯಮಿ. ಪ್ರಾಥಮಿಕ ಷೇರುದಾರ ಮತ್ತು ಹಿಂದೂಜಾ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷರಾಗಿದ್ದಾರೆ. ವಿಶ್ವದ 4 ನೇ ಅತಿದೊಡ್ಡ ಬಸ್ಸುಗಳ ತಯಾರಕ ಮತ್ತು ವಿಶ್ವದಾದ್ಯಂತ ಟ್ರಕ್‌ಗಳ 16 ನೇ ಅತಿದೊಡ್ಡ ತಯಾರಕರಾಗಿದ್ದಾರೆ.

ಲಕ್ಷ್ಮಿ ಮಿತ್ತಲ್: ಇವರು ಉದ್ಯಮಿ. ವಿಶ್ವದ ಅತಿದೊಡ್ಡ ಉಕ್ಕು ತಯಾರಿಕೆ ಕಂಪನಿಯಾದ ಆರ್ಸೆಲರ್ ಮಿತ್ತಲ್ ನ ಅಧ್ಯಕ್ಷ ಮತ್ತು ಸಿಇಒ ಆಗಿದ್ದಾರೆ. ರಾಜಥಾನ್‌ನ ಸದುಲ್‌ಪುರದಲ್ಲಿ ಜನಿಸಿದ ಇವರು ಕೋಲ್ಕತ್ತಾದ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಿಂದ ಬಿ.ಕಾಂ ಮುಗಿಸಿದರು. 2007 ರಲ್ಲಿ ಯುನೈಟೆಡ್ ಕಿಂಗ್‌ಡಂನಲ್ಲಿ ಏಷ್ಯನ್ ಮೂಲದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು ಹಾಗೆ 2011 ರಲ್ಲಿ ಫೋರ್ಬ್ಸ್‌ನಿಂದ ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದರು.

2012 ರ ಫೋರ್ಬ್ಸ್ ಪಟ್ಟಿಯಲ್ಲಿ 47 ನೇ “ಅತ್ಯಂತ ಶಕ್ತಿಶಾಲಿ ವ್ಯಕ್ತಿ” ಮತ್ತು “ 2007 ರಲ್ಲಿ ಟೈಮ್ ಅವರಿಂದ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪೈಕಿ ಇವರೂ ಒಬ್ಬರಾಗಿದ್ದರು. ಭಾರತೀಯ ಕ್ರೀಡಾಪಟುಗಳಿಗೆ ಬೆಂಬಲ ನೀಡಲು ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ಸ್ಥಾಪಿಸಿ ತಮ್ಮದೇ ಸೇವೆ ನೀಡುತ್ತಿದ್ದಾರೆ.

ಶಪೂರ್ ಪಲ್ಲೊಂಜಿ ಮಿಸ್ತ್ರಿ: ಶಪೂರ್ ಪಲ್ಲೊಂಜಿ ಮಿಸ್ತ್ರಿ ಭಾರತೀಯ ಮೂಲದ ಐರಿಶ್ ಬಿಲಿಯನೇರ್. ಶಪೂರ್ಜಿ ಪಲ್ಲೊಂಜಿ ಗ್ರೂಪ್‌ನ ಅಧ್ಯಕ್ಷರಾಗಿದ್ದ ಇವರು ಐರಿಶ್‌ನ ಅತ್ಯಂತ ಶ್ರೀಮಂತ ವ್ಯಕ್ತಿ. ಇವರ ಕಂಪನಿಯು ಭಾರತದಲ್ಲಿ ವಿಭಿನ್ನ ಶಾಖೆಗಳನ್ನು ಹೊಂದಿದೆ.

ತಾಜ್ ಇಂಟರ್‌ಕಾಂಟಿನೆಂಟಲ್ ಹೋಟೆಲ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಟ್ಟಡ ಮತ್ತು ಎಚ್‌ಎಸ್‌ಬಿಸಿ ಕಟ್ಟಡ ಸೇರಿದಂತೆ ಅಪ್ರತಿಮ ಕಟ್ಟಡಗಳನ್ನು ನಿರ್ಮಿಸಲು ಶಪೂರ್ಜಿ ಪಲ್ಲೊಂಜಿ ಗ್ರೂಪ್​ ಪ್ರಸಿದ್ಧವಾಗಿದೆ. ಈ ಗ್ರೂಪ್​ ಮುಂಬೈನ ಬ್ರಬೋರ್ನ್ ಕ್ರೀಡಾಂಗಣ ಮತ್ತು ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣವನ್ನೂ ನಿರ್ಮಿಸಿದೆ.

ರಾಕೇಶ್ ಗಂಗ್ವಾಲ್: ಮಿಯಾಮಿ ಮೂಲದ ರಾಕೇಶ್ ಗಂಗ್ವಾಲ್, 3 ಬಿಲಿಯನ್​ಗೂ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ಅತ್ಯಂತ ಶ್ರೀಮಂತ ಭಾರತೀಯ ಅಮೆರಿಕನ್ ಇವರಾಗಿದ್ದಾರೆ. ಹಾಗೆಯೇ ಭಾರತದ ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಯಾದ ಇಂಡಿಗೊದ ಸಹ-ಸಂಸ್ಥಾಪಕರಾಗಿರುವ ರಾಕೇಶ್ ಗಂಗ್ವಾಲ್ ಯುನೈಟೆಡ್ ಸ್ಟೇಟ್ಸ್ನಲ್ಲಿ 10 ಭಾರತೀಯ ಮೂಲದ ಬಿಲಿಯನೇರ್​ಗಳಲ್ಲಿ ಇವರೂ ಪ್ರಮುಖರು ಎಂದು ಫೋರ್ಬ್ಸ್ 2018 ಬಿಲಿಯನೇಯರ್​ಗಳ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಕೋವಿಡ್​ ಪ್ರಭಾವ ವಾಯುಯಾನದ ಮೇಲಿ ಪರಿಣಾಮ ಬೀರಿದ್ದರಿಂದ ಇವರ ಸಂಸ್ಥೆಗೆ ತೀವ್ರ ಕುಸಿತ ಉಂಟಾಗಿದೆ. ಈ ಹಿನ್ನೆಲೆ ಕೋಲ್ಕತಾ ಮೂಲದ ರಾಕೇಶ್ ಗಂಗ್ವಾಲ್ ಅವರು ಫೋರ್ಬ್ಸ್ 2020 ರಲ್ಲಿ ಯುಎಸ್ ಮೂಲದ ಭಾರತೀಯ ಬಿಲಿಯನೇರ್‌ಗಳಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಪ್ರಸ್ತುತ ಆಸ್ತಿಯ ಮೌಲ್ಯ 3 2.3 ಬಿಲಿಯನ್ ಆಗಿದೆ.

ಶ್ರೀಮಂತ ಭಾರತೀಯ ಅಮೆರಿಕನ್ ರಾಕೇಶ್ ಗಂಗ್ವಾಲ್ 2000 ರಲ್ಲಿ ಇಂಟರ್ ಗ್ಲೋಬ್ ಏವಿಯೇಷನ್ ​​ಲಿಮಿಟೆಡ್ ಮತ್ತು 2006 ರಲ್ಲಿ ಇಂಡಿಗೊವನ್ನು ಸ್ಥಾಪಿಸಿದರು. ಇಂದು ಇಂಡಿಗೊ ದೇಶೀಯ ಮಾರುಕಟ್ಟೆ ಪಾಲಿನ ವಿಷಯದಲ್ಲಿ ಭಾರತದ ಅತಿದೊಡ್ಡ ಹಾಗೂ ಕಡಿಮೆ ವೆಚ್ಚದಲ್ಲಿ ಸಂಚಾರ ಮಾಡುವ ಯಾನವಾಗಿದೆ.

ಬಿ.ಆರ್. ಶೆಟ್ಟಿ: ಮಾಜಿ ಫಾರ್ಮಾ ಮಾರಾಟಗಾರ ಶೆಟ್ಟಿ ಅವರು ಆರೋಗ್ಯ ಕ್ಷೇತ್ರದಲ್ಲಿ ಭಾರೀ ಕೊಡುಗೆ ನೀಡಿದ್ದಾರೆ. ಶೆಟ್ಟಿ ದಕ್ಷಿಣ ಭಾರತದ ಕರ್ನಾಟಕದಿಂದ 1973 ರಲ್ಲಿ ಅಬುಧಾಬಿಗೆ ವಲಸೆ ಹೋದರು. ಅವರ ಅತಿದೊಡ್ಡ ಆಸ್ತಿ ಎನ್ಎಂಸಿ ಹೆಲ್ತ್, ಇದು ಯುಎಇಯ ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದಾಗಿದೆ.

ಶೆಟ್ಟಿ ಭಾರತದಲ್ಲಿಯೂ ಸಹ ತಮ್ಮ ಸೇವೆ ಸಲ್ಲಿಸಿದ್ದಾರೆ. ಆರೋಗ್ಯ ಸಂಸ್ಥೆ ಬಿಆರ್ ಲೈಫ್ ಅನ್ನು ಸ್ಥಾಪಿಸಿರುವ ಇವರು ಭಾರತ, ನೇಪಾಳ, ಆಫ್ರಿಕಾ ಮತ್ತು ಕೊಲ್ಲಿ ಪ್ರದೇಶದಲ್ಲಿ ಇದು ಕರ್ತವ್ಯ ನಿರ್ವಹಿಸುತ್ತಿದೆ. ಮುಂದಿನ 10 ವರ್ಷಗಳಲ್ಲಿ ಭಾರತದಲ್ಲಿ 20,000 ಹಾಸಿಗೆಗಳ ಆಸ್ಪತ್ರೆ ತೆರೆಯುವ ಯೋಜನೆಯ ಭಾಗವಾಗಿ ಶೆಟ್ಟಿ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಲು ಮುಂದಾಗಿದ್ದಾರೆ.

ಸುಂದರ್ ಪಿಚೈ : ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಅವರು ಭಾರತಕ್ಕೆ 5 ಕೋಟಿ ರೂ. ನೀಡಿದ್ದಾರೆ.

ಭಾರತ್ ದೇಸಾಯಿ: ​​ಯುಎಸ್ ಮೂಲದ ಕಂಪನಿ ಸಿಂಟೆಲ್​ನ ಅಧ್ಯಕ್ಷ ಹಾಗೂ ಬಿಲಿಯನೇರ್. ದೇಸಾಯಿ ಅವರು ತಮ್ಮ ಅಲ್ಮಾ ಮ್ಯಾಟರ್​ಗೆ 1 ಮಿಲಿಯನ್ ದೇಣಿಗೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.