ಕೋಯಿಕ್ಕೋಡ್ (ಕೇರಳ): ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ವೇಳೆ ಭಾರಿ ದುರಂತ ನಡೆದಿದೆ. ಫೋಟೋಶೂಟ್ ಸಮಯದಲ್ಲಿ ನದಿಯಲ್ಲಿ ಮುಳುಗಿ ಮದುಮಗ ಮೃತಪಟ್ಟಿದ್ದು, ಮದುಮಗಳು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಕೇರಳದ ಕೋಯಿಕ್ಕೋಡ್ ಸಮೀಪದ ಕುಟ್ಟಿಯಾಡಿಯಲ್ಲಿ ಈ ಘಟನೆ ನಡೆದಿದೆ.
ಕಡಿಯಂಗಡ ಮೂಲದ ರೆಜಿಲ್ ಎಂಬಾತನೇ ಮೃತ ವ್ಯಕ್ತಿಯಾಗಿದ್ದು, ಈತನ ಪತ್ನಿ ಕಾರ್ತಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರ್ಚ್ 14ರಂದು ರೆಜಿಲ್ ಮತ್ತು ಕಾರ್ತಿಕಾ ಮದುವೆಯಾಗಿತ್ತು. ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ಗಾಗಿ ಕುಟ್ಟಿಯಾಡಿ ನದಿಗೆ ಬಂದಿದ್ದರು. ಈ ವೇಳೆ ಇಬ್ಬರೂ ನದಿಗೆ ಬಿದ್ದಿದ್ದಾರೆ.
ನದಿಗೆ ಬಿದ್ದ ಬಳಿಕ ಇಬ್ಬರ ಚೀರಾಟದ ಧ್ವನಿ ಕೇಳಿದ ಸ್ಥಳೀಯರು ದೌಡಾಯಿಸಿ ನದಿಗೆ ಹಾರಿ ಇಬ್ಬರನ್ನೂ ಹೊರತೆಗೆದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟರಲ್ಲೇ, ರೆಜಿಲ್ ಕೊನೆಯುಸಿರೆಳೆದಿದ್ದಾನೆ. ಇತ್ತ, ಅಸ್ವಸ್ಥ ಕಾರ್ತಿಕಾಳನ್ನು ಮಲಬಾರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಬಾನೆತ್ತರಕ್ಕೆ ಹಾರಿ ಚಹಾ ತೋಟದಲ್ಲಿ ಬಿದ್ದ ಕಾರು.. ಓಡಿ ಹೋಗಿ ನೋಡಿದವರಿಗೆ ಗೊತ್ತಾಯ್ತು ಅಸಲಿಯತ್ತು