ETV Bharat / bharat

ನಟಿ ಪೂನಮ್ ಪಾಂಡೆ ಮೇಲೆ ಹಲ್ಲೆ: ಪತಿ ಸ್ಯಾಮ್​ ಬಾಂಬೆಯನ್ನು ಬಂಧಿಸಿದ ಮುಂಬೈ ಪೊಲೀಸ್​

author img

By

Published : Nov 9, 2021, 2:24 AM IST

ಸಾಮಾಜಿಕ ಜಾಲಾತಾಣದಲ್ಲಿ ಪ್ರಸಿದ್ಧಿ ಪಡೆದಿರುವ ಪೂನಮ್ ಪಾಂಡೆ ನಶಾ, ದಿ ಜರ್ನಿ ಆಫ್​ ಕರ್ಮ , ಮಾಲಿನಿ ಅಂಡ್ ಕಂಪನಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕಳೆದ ತಿಂಗಳು ಸ್ಯಾಮ್ ಬಾಂಬೆಯನ್ನು ವಿವಾಹವಾಗಿದ್ದರು.

Poonam Pandey's husband arrested for assault case
ಪೂನಮ್ ಪಾಂಡೆ ಪತಿ ಸ್ಯಾಮ್ ಬಾಂಬೆ ಬಂಧನ

ಮುಂಬೈ: ಬಾಲಿವುಡ್ ನಟಿ ಪೂನಮ್ ಪಾಂಡೆ ತಮ್ಮ ಪತಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ದೂರು ನೀಡಿದ ಬೆನ್ನಲ್ಲೇ ಮುಂಬೈ ಪೊಲೀಸರು ಭಾನುವಾರ ಸ್ಯಾಮ್ ಬಾಂಬೆಯನ್ನು ಬಂಧಿಸಿದ್ದಾರೆ. ನಟಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.

ಮಾದಕ ನಟಿ ತಮ್ಮ ಪತಿ ಮೇಲೆ ದೂರು ನೀಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ತಮ್ಮ ಪತಿ ವಿರುದ್ಧ ಕಿರುಕುಳ, ಬೆದರಿಕೆ ಮತ್ತು ಹಲ್ಲೆ ಆರೋಪ ಮಾಡಿದ್ದರು. ಆ ಸಂದರ್ಭದಲ್ಲಿ ಬಂಧಿತನಾಗಿದ್ದ ನಿರ್ಮಾಪಕ ಸ್ಯಾಮ್ ಬಾಂಬೆ ಗೋವಾ ಹೈಕೋರ್ಟ್​ನಿಂದ ಷರತ್ತುಬದ್ಧ ಜಾಮೀನು ಪಡೆದು ಹೊರಬಂದಿದ್ದರು.

  • Maharashtra | Actress Poonam Pandey's husband Sam Bombay was arrested yesterday in Mumbai after the actress complained that he assaulted her. Poonam Pandey was admitted to a hospital: Mumbai Police

    — ANI (@ANI) November 8, 2021 " class="align-text-top noRightClick twitterSection" data=" ">

Maharashtra | Actress Poonam Pandey's husband Sam Bombay was arrested yesterday in Mumbai after the actress complained that he assaulted her. Poonam Pandey was admitted to a hospital: Mumbai Police

— ANI (@ANI) November 8, 2021

ಈ ಘಟನೆ ದಕ್ಷಿಣ ಗೋವಾದ ಕನಕೋನಾ ಎಂಬಲ್ಲಿ ನಡೆದಿದ್ದು, ಪಾಂಡೆ ನೀಡಿದ ದೂರಿನನ್ವಯ ಬಾಂಬೆಯನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ಐಪಿಸಿ ಸೆಕ್ಷನ್​ 353(ಹಲ್ಲೆ ಮತ್ತು ಅವಮಾನ), 506 (ಬೆದರಿಕೆ)ಮತ್ತು 354 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಸಾಮಾಜಿಕ ಜಾಲಾತಾಣದಲ್ಲಿ ಪ್ರಸಿದ್ಧಿ ಪಡೆದಿರುವ ಪೂನಮ್ ಪಾಂಡೆ ನಶಾ, ದಿ ಜರ್ನಿ ಆಫ್​ ಕರ್ಮ , ಮಾಲಿನಿ ಅಂಡ್ ಕಂಪನಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕಳೆದ ತಿಂಗಳು ಸ್ಯಾಮ್ ಬಾಂಬೆಯನ್ನು ವಿವಾಹವಾಗಿದ್ದರು.

ಇದನ್ನು ಓದಿ:ಆತಂಕ ಹುಟ್ಟಿಸಿದ ಪೊಲೀಸ್‌ ಕಂಟ್ರೋಲ್‌ ರೂಂಗೆ ಬಂದ ಕರೆ: ಮುಕೇಶ್‌ ಅಂಬಾನಿ ನಿವಾಸಕ್ಕೆ ಭದ್ರತೆ ಹೆಚ್ಚಳ

ಮುಂಬೈ: ಬಾಲಿವುಡ್ ನಟಿ ಪೂನಮ್ ಪಾಂಡೆ ತಮ್ಮ ಪತಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ದೂರು ನೀಡಿದ ಬೆನ್ನಲ್ಲೇ ಮುಂಬೈ ಪೊಲೀಸರು ಭಾನುವಾರ ಸ್ಯಾಮ್ ಬಾಂಬೆಯನ್ನು ಬಂಧಿಸಿದ್ದಾರೆ. ನಟಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.

ಮಾದಕ ನಟಿ ತಮ್ಮ ಪತಿ ಮೇಲೆ ದೂರು ನೀಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ತಮ್ಮ ಪತಿ ವಿರುದ್ಧ ಕಿರುಕುಳ, ಬೆದರಿಕೆ ಮತ್ತು ಹಲ್ಲೆ ಆರೋಪ ಮಾಡಿದ್ದರು. ಆ ಸಂದರ್ಭದಲ್ಲಿ ಬಂಧಿತನಾಗಿದ್ದ ನಿರ್ಮಾಪಕ ಸ್ಯಾಮ್ ಬಾಂಬೆ ಗೋವಾ ಹೈಕೋರ್ಟ್​ನಿಂದ ಷರತ್ತುಬದ್ಧ ಜಾಮೀನು ಪಡೆದು ಹೊರಬಂದಿದ್ದರು.

  • Maharashtra | Actress Poonam Pandey's husband Sam Bombay was arrested yesterday in Mumbai after the actress complained that he assaulted her. Poonam Pandey was admitted to a hospital: Mumbai Police

    — ANI (@ANI) November 8, 2021 " class="align-text-top noRightClick twitterSection" data=" ">

ಈ ಘಟನೆ ದಕ್ಷಿಣ ಗೋವಾದ ಕನಕೋನಾ ಎಂಬಲ್ಲಿ ನಡೆದಿದ್ದು, ಪಾಂಡೆ ನೀಡಿದ ದೂರಿನನ್ವಯ ಬಾಂಬೆಯನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ಐಪಿಸಿ ಸೆಕ್ಷನ್​ 353(ಹಲ್ಲೆ ಮತ್ತು ಅವಮಾನ), 506 (ಬೆದರಿಕೆ)ಮತ್ತು 354 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಸಾಮಾಜಿಕ ಜಾಲಾತಾಣದಲ್ಲಿ ಪ್ರಸಿದ್ಧಿ ಪಡೆದಿರುವ ಪೂನಮ್ ಪಾಂಡೆ ನಶಾ, ದಿ ಜರ್ನಿ ಆಫ್​ ಕರ್ಮ , ಮಾಲಿನಿ ಅಂಡ್ ಕಂಪನಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕಳೆದ ತಿಂಗಳು ಸ್ಯಾಮ್ ಬಾಂಬೆಯನ್ನು ವಿವಾಹವಾಗಿದ್ದರು.

ಇದನ್ನು ಓದಿ:ಆತಂಕ ಹುಟ್ಟಿಸಿದ ಪೊಲೀಸ್‌ ಕಂಟ್ರೋಲ್‌ ರೂಂಗೆ ಬಂದ ಕರೆ: ಮುಕೇಶ್‌ ಅಂಬಾನಿ ನಿವಾಸಕ್ಕೆ ಭದ್ರತೆ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.