ETV Bharat / bharat

ಕಾಂಗ್ರೆಸ್​ಗೆ ಗೋಡ್ಸೆ ಆರಾಧಕ ಬಾಬುಲಾಲ್ ಚೌರಾಸಿಯಾ ಸೇರ್ಪಡೆ - ಕಾಂಗ್ರೆಸ್​ಗೆ ಗೋಡ್ಸೆ ಹಿಂಬಾಲಕ ಬಾಬುಲಾಲ್ ಚೌರಾಸಿಯಾ ಸೇರ್ಪಡೆ

ನಾಥುರಾಮ್ ಗೋಡ್ಸೆ ಪುತ್ಥಳಿ ಅನಾವರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾದ ಬಾಬುಲಾಲ್ ಚೌರಾಸಿಯಾ ಅವರು ಮತ್ತೆ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಮಧ್ಯಪ್ರದೇಶದಲ್ಲಿ ರಾಜಕೀಯ ವಿವಾದವೊಂದು ಹುಟ್ಟಿಕೊಂಡಿದೆ.

Babulal Chaurasia
Babulal Chaurasia
author img

By

Published : Feb 28, 2021, 9:50 AM IST

ಭೋಪಾಲ್: ಹಿಂದೂ ಮಹಾಸಭಾ ನಾಯಕ ಹಾಗೂ ಮಹಾತ್ಮಾ ಗಾಂಧಿ ಅವರ ಹಂತಕ ನಾಥುರಾಮ್ ಗೋಡ್ಸೆ ಸಂದೇಶವನ್ನು ಜನರಿಗೆ ಹಂಚುವುದಾಗಿ ಪ್ರತಿಜ್ಞೆ ಮಾಡಿದ್ದ ಬಾಬುಲಾಲ್ ಚೌರಾಸಿಯಾ ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನವೇ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಸೇರಿದ್ದಾರೆ.

6 ವರ್ಷದ ಹಿಂದೆ ಚೌರಾಸಿಯಾ ಕಾಂಗ್ರೆಸ್ ತ್ಯಜಿಸಿದ್ದರು. ಇದೀಗ ರಾಜ್ಯ ಕಾಂಗ್ರೆಸ್ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ನೇತೃತ್ವದಲ್ಲಿ ಮತ್ತೆ ಬಾಬುಲಾಲ್ ಚೌರಾಸಿಯಾ ಅವರು ಪಕ್ಷಕ್ಕೆ ಸೇರ್ಪಡೆಯಾದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಬುಲಾಲ್ ಚೌರಾಸಿಯಾ, ಈ ಹಿಂದೆ ನಾನು ಕಾಂಗ್ರೆಸ್‌ನಲ್ಲಿದ್ದೆ. ಈಗ ನನ್ನ ಕುಟುಂಬ (ಕಾಂಗ್ರೆಸ್)ವನ್ನು ಮತ್ತೆ ಸೇರಿದ್ದೇನೆ ಎಂದಿದ್ದಾರೆ.

ಕಾಂಗ್ರೆಸ್​ನ ಕೆಲವು ನಾಯಕರು ಚೌರಾಸಿ ಸೇರ್ಪಡೆ ಬಗ್ಗೆ ಶ್ಲಾಘಿಸಿದರೆ, ಇನ್ನೂ ಕೆಲವರು ಗೋಡ್ಸೆ ಹಿಂಬಾಲಕನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.