ETV Bharat / bharat

100ಕ್ಕೂ ಹೆಚ್ಚು ಕಾರ್ಮಿಕರ ಕರೆದೊಯ್ಯುತ್ತಿದ್ದ ಟ್ರಕ್ ಸೀಜ್: ಹಸಿವೆಯಿಂದ ಬಳಲಿದ ಮಕ್ಕಳು, ಮಹಿಳೆಯರು - ಸರಕು ವಾಹನಗಳಲ್ಲಿ ಪ್ರಯಾಣಿಕರ ಸಂಚಾರ

ಕಾನ್ಪುರ ಅಪಘಾತದ ನಂತರ, ಉತ್ತರ ಪ್ರದೇಶ ಸರ್ಕಾರ ಸರಕು ವಾಹನಗಳಲ್ಲಿ ಪ್ರಯಾಣಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅದರ ನಂತರವೂ ಸರ್ಕಾರದ ಆದೇಶವನ್ನು ನಿರ್ಲಕ್ಷಿಸಿ ಟ್ರಕ್ ನಳಂದಾದಿಂದ ಬಿಹಾರದ ಪಾಟ್ನಾ ಮೂಲಕ ಉತ್ತರ ಪ್ರದೇಶದ ಸಂತ ಕಬೀರನಗರದ ಯಾವುದೋ ಭಟ್ಟಿಗೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿತ್ತು.

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಸೀಜ್: ಹಸಿವೆಯಿಂದ ಬಳಲಿದ ಮಕ್ಕಳು, ಮಹಿಳೆಯರು
police stopped 100 laborers being taken by truck in kushinagar
author img

By

Published : Nov 10, 2022, 5:26 PM IST

ಕುಶಿನಗರ: ಟ್ರಕ್‌ನಲ್ಲಿ ಕರೆದೊಯ್ಯುತ್ತಿದ್ದ ಬಿಹಾರದ 100 ಕ್ಕೂ ಹೆಚ್ಚು ಕಾರ್ಮಿಕರನ್ನು ಹಾತಾ ಕೊತ್ವಾಲಿ ಪೊಲೀಸರು ತಡೆದಿದ್ದಾರೆ. ಟ್ರಕ್ ಅನ್ನು ಸೀಲ್ ಮಾಡಲಾಗಿದೆ. ಲಾರಿ ಮಾಲೀಕರು ಹಾಗೂ ಗುತ್ತಿಗೆದಾರರ ತಪ್ಪಿನಿಂದಾಗಿ ಕೂಲಿ ಕಾರ್ಮಿಕರು ಹಾಗೂ ಅವರ ಕುಟುಂಬದವರು ಇಡೀ ರಾತ್ರಿ ರಸ್ತೆಬದಿಯಲ್ಲೇ ಕಳೆಯಬೇಕಾಯಿತು. ನಂತರ ಗುರುವಾರ ಪೊಲೀಸರು ಗುತ್ತಿಗೆದಾರನಿಗೆ ತಿಳಿಸಿ ಈ ಪ್ರಯಾಣಿಕರನ್ನು ಬಸ್ ಮೂಲಕ ಅವರು ಹೋಗಬೇಕಿದ್ದ ಸ್ಥಳಕ್ಕೆ ಕಳುಹಿಸಲಾಯಿತು.

ಕಾನ್ಪುರ ಅಪಘಾತದ ನಂತರ, ಉತ್ತರ ಪ್ರದೇಶ ಸರ್ಕಾರ ಸರಕು ವಾಹನಗಳಲ್ಲಿ ಪ್ರಯಾಣಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅದರ ನಂತರವೂ ಸರ್ಕಾರದ ಆದೇಶವನ್ನು ನಿರ್ಲಕ್ಷಿಸಿ ಟ್ರಕ್ ನಳಂದಾದಿಂದ ಬಿಹಾರದ ಪಾಟ್ನಾ ಮೂಲಕ ಉತ್ತರ ಪ್ರದೇಶದ ಸಂತ ಕಬೀರ ನಗರದ ಯಾವುದೋ ಭಟ್ಟಿಗೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿತ್ತು. ಕುಶಿನಗರದ ಹಾತಾ ಪೊಲೀಸರು ಮಂಗಳವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 28ರಲ್ಲಿ ಟ್ರಕ್ ತಡೆದು ವಶಪಡಿಸಿಕೊಂಡಿದ್ದಾರೆ.

ಈ ವೇಳೆ ಕೂಲಿ ಕಾರ್ಮಿಕ ಮಹಿಳೆಯರು, ಮಕ್ಕಳು ಹಾಗೂ ಅವರ ಕುಟುಂಬದವರು ರಾತ್ರಿಯಿಡೀ ರಸ್ತೆ ಬದಿಯಲ್ಲಿಯೇ ಇರಬೇಕಾಯಿತು. ಈ ಸಮಯದಲ್ಲಿ ಅವರು ಹಸಿವು, ಬಾಯಾರಿಕೆಯಿಂದ ಬಳಲಿದರೂ ಯಾರೂ ಕೇಳುವವರಿರಲಿಲ್ಲ. ಪೊಲೀಸರು ಟ್ರಕ್ ಅನ್ನು ಪೊಲೀಸ್ ಠಾಣೆಗೆ ತಂದು ಮಧ್ಯಾಹ್ನದಿಂದ ನಿಲ್ಲಿಸಿದರು ಎಂದು ಕಾರ್ಮಿಕರು ಹೇಳಿದರು.

ಮಧ್ಯಾಹ್ನದಿಂದಲೇ ಕಾರ್ಮಿಕರು, ಮಹಿಳೆಯರು, ಮಕ್ಕಳು ಹಸಿದಿದ್ದರೂ ಕೇಳುವವರೇ ಇಲ್ಲದಂತಾಗಿತ್ತು. ನಂತರ ಈ ವಿಷಯ ಮಾಧ್ಯಮಗಳಲ್ಲಿ ಬಂದ ನಂತರ ಗುರುವಾರ ಬೆಳಗ್ಗೆ ಪೊಲೀಸರು ಗುತ್ತಿಗೆದಾರರನ್ನು ಕೇಳಿ ಬಸ್‌ ಮೂಲಕ ಕಾರ್ಮಿಕರು ಮತ್ತು ಅವರ ಕುಟುಂಬಗಳನ್ನು ಅವರವರ ಸ್ಥಳಕ್ಕೆ ಕಳುಹಿಸಿದರು.

ಈ ಬಗ್ಗೆ ಮಾತನಾಡಿದ ಕೊತ್ವಾಲಿ ಉಸ್ತುವಾರಿ ಇನ್ಸ್‌ಪೆಕ್ಟರ್ ನಿರ್ಭಯ್ ಕುಮಾರ್ ಸಿಂಗ್, ಯಾವುದೇ ಸರಕು ಸಾಗಣೆ ವಾಹನದಿಂದ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶವಿಲ್ಲ, ಆದ್ದರಿಂದ ಟ್ರಕ್ ಅನ್ನು ಸೀಲ್ ಮಾಡಲಾಗಿದೆ ಎಂದು ಹೇಳಿದರು.

ಇದನ್ನು ಓದಿ:ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ: ಮಹಿಳೆಯರು ಸೇರಿ 20ಕ್ಕೂ ಹೆಚ್ಚು ಜನರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.