ETV Bharat / bharat

ವಶಪಡಿಸಿಕೊಂಡ ಗಾಂಜಾ ಇಲಿಗಳು ತಿಂದಿವೆಯಂತೆ.. ಹೀಗಂತಾ ಕೋರ್ಟ್​ಗೆ ಉತ್ತರ ನೀಡಿದ ಪೊಲೀಸರು! - ವಶಪಡಿಸಿಕೊಂಡ ಗಾಂಜಾ ಇಲಿಗಳು ತಿಂದಿವೆಯಂತೆ

ಚೆನ್ನೈ ನ್ಯಾಯಾಲಯದಲ್ಲಿ ಡ್ರಗ್ಸ್ ದಂಧೆ ಪ್ರಕರಣದ ವಿಚಾರಣೆ - ಬಲವಾದ ಸಾಕ್ಷ್ಯವನ್ನು ಒದಗಿಸಲು ವಿಫಲವಾದ ಕೋಯಂಬೇಡು ಪೊಲೀಸರು - ಠಾಣೆಯಲ್ಲಿ ಇಲಿಗಳ ಸಂಖ್ಯೆ ಹೆಚ್ಚಗಿದ್ದು ಗಾಂಜಾವನ್ನು ತಿಂದಿವೆ ಎಂದು ನ್ಯಾಯಾಲಯಕ್ಕೆ ಉತ್ತರ ಕೊಟ್ಟ ಪೊಲೀಸರು.

after police said rats eat up seized ganja
ವಶಪಡಿಸಿಕೊಂಡ ಗಾಂಜಾವನ್ನು ಇಲಿಗಳು ತಿಂದಿವೆ ಎಂದು ಉಡಾಫೆ ಉತ್ತರ ನೀಡಿದ ಪೊಲೀಸರು!
author img

By

Published : Jan 9, 2023, 11:02 PM IST

ಚೆನ್ನೈ(ತಮಿಳುನಾಡು): ಅಪರಾಧಿಗಳ ಶಿಕ್ಷೆಯನ್ನು ಖಚಿತಪಡಿಸಲು ಪೊಲೀಸರು ನ್ಯಾಯಾಲಯದಲ್ಲಿ ಬಲವಾದ ಸಾಕ್ಷ್ಯವನ್ನು ಒದಗಿಸುತ್ತಾರೆ. ಆದರೆ ಚೆನ್ನೈ ನ್ಯಾಯಾಲಯದಲ್ಲಿ ಡ್ರಗ್ಸ್ ದಂಧೆ ಪ್ರಕರಣದ ವಿಚಾರಣೆ ವೇಳೆ ಪೊಲೀಸರು ವಿಚಿತ್ರ ರೀತಿಯಲ್ಲಿ ವರ್ತಿಸಿದ್ದಾರೆ. ಅವರ ವಿಚಿತ್ರವಾದ ಸಾಕ್ಷ್ಯ ಸಲ್ಲಿಕೆಯಿಂದ ಇಬ್ಬರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಆರೋಪಿಗಳಾದ ಸೇಲಂ ಮೂಲದ ಕಲ್ಪನಾ ಮತ್ತು ವಿಶಾಖಪಟ್ಟಣದ ಕುಮಾರಿ ಮತ್ತು ನಾಗಮಣಿ ಅವರನ್ನು 2018ರಲ್ಲಿ ಚೆನ್ನೈ ಕೋಯಂಬೇಡು ಬಸ್ ನಿಲ್ದಾಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದ್ದು, ಅವರಿಂದ 30 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಕೋಯಂಬೇಡು ಪೊಲೀಸರು ತಿಳಿಸಿದ್ದರು.

ಆದರೆ, ಶನಿವಾರ ಪೊಲೀಸರು ವಶಪಡಿಸಿಕೊಂಡ ಗಾಂಜಾವನ್ನು ಮಾದಕವಸ್ತು ಕಳ್ಳಸಾಗಣೆ ವ್ಯವಹರಿಸುವ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದಾಗ, ನ್ಯಾಯಾಧೀಶರು ಎದ್ದುಕಾಣುವ ಅಸಂಗತತೆಯನ್ನು ಗಮನಿಸಿದರು. ಇಬ್ಬರು ಆರೋಪಿಗಳಿಂದ 30 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ನಮೂದಿಸಿರುವ ಎಫ್‌ಐಆರ್‌ಗೆ ವ್ಯತಿರಿಕ್ತವಾಗಿ ಪೊಲೀಸರು ನ್ಯಾಯಾಲಯಕ್ಕೆ 19 ಕೆಜಿ ಗಾಂಜಾವನ್ನು ಮಾತ್ರ ಸಲ್ಲಿಸಿದ್ದಾರೆ.

30 ಕೆಜಿಯಿಂದ 19 ಕೆಜಿಗೆ ಗಾಂಜಾ ಪ್ರಮಾಣ ಹೇಗೆ ಕಡಿಮೆಯಾಯಿತು ಎಂದು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ನ್ಯಾಯಾಧೀಶರು ಕೇಳಿದಾಗ, ತನಿಖಾಧಿಕಾರಿಗಳು ವಿಚಿತ್ರವಾದ ಪ್ರತಿಕ್ರಿಯೆಯನ್ನು ನೀಡಿದರು. ವಶಪಡಿಸಿಕೊಂಡ ಗಾಂಜಾವನ್ನು ಪರೀಕ್ಷೆಗಾಗಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಆದರೆ, ಮಳೆಯಿಂದಾಗಿ ಪೊಲೀಸ್ ಠಾಣೆಯ ಸ್ಥಿತಿ ಸ್ವಲ್ಪಮಟ್ಟಿಗೆ ಹದಗೆಟ್ಟಿದೆ, ಇಲಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಗಾಂಜಾವನ್ನು ತಿಂದು 30 ಕೆಜಿಯಿಂದ 19 ಕೆಜಿಗೆ ಇಳಿಸಿವೆ ಎಂದು ಉತ್ತರ ನೀಡಿದ್ದಾರೆ.

ವಿವರಣೆಯೊಂದಿಗೆ ಮನವರಿಕೆಯಾಗದ ನ್ಯಾಯಾಧೀಶರು ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ, ಅವರ ವಿರುದ್ಧ ಬಲವಾದ ಸಾಕ್ಷ್ಯವನ್ನು ನೀಡಲು ಪೊಲೀಸರು ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.

ಹಿಂದೆ ಉತ್ತರ ಪ್ರದೇಶದಲ್ಲಿ ಇಂತಹದ್ದೇ ಘಟನೆ ನಡೆದಿತ್ತು: 2018 ರಲ್ಲಿ ಉತ್ತರ ಪ್ರದೇಶದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಮಥುರಾ ಪೊಲೀಸರು ಕಳ್ಳಸಾಗಣೆದಾರರಿಂದ ಅಂದಾಜು 60 ಲಕ್ಷ ರೂಪಾಯಿ ಮೌಲ್ಯದ 581 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಗಾಂಜಾವನ್ನು ಶೇರ್ಕರ್ ಮತ್ತು ಹೆದ್ದಾರಿ ಪೊಲೀಸ್ ಠಾಣೆಗಳ ಗೋದಾಮುಗಳಲ್ಲಿ ಸಂಗ್ರಹಿಸಲಾಗಿದೆ. ಆದರೆ, ಮಥುರಾ ಜಿಲ್ಲಾ ಪೊಲೀಸರು ವಶಪಡಿಸಿಕೊಂಡ ಗಾಂಜಾವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ವಿಫಲರಾಗಿದ್ದು, ಇಲಿಗಳು 581 ಕೆಜಿ ಗಾಂಜಾವನ್ನು ತಿಂದಿವೆ ಎಂದು ವಾದಿಸಿದ್ದರು.

ಗುವಾಹಟಿಯಲ್ಲಿ ಐಐಟಿ ವಿದ್ಯಾರ್ಥಿ ಸಾವು: ಗುವಾಹಟಿಯ ಐಐಟಿಯಲ್ಲಿ ಮತ್ತೊಂದು ಮನಕಲಕುವ ಘಟನೆ ನಡೆದಿದೆ. ಸೋಮವಾರ ಸಂಜೆ 4.10ರ ಸುಮಾರಿಗೆ ಸಂಸ್ಥೆಯ ಡೆಹಿಂಗ್ ಹಾಸ್ಟೆಲ್‌ನ 337ನೇ ಕೊಠಡಿಯಲ್ಲಿ ವಿದ್ಯಾರ್ಥಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಗುವಾಹಟಿಯ ಐಐಟಿ ವೈದ್ಯರು ಸ್ಥಳಕ್ಕಾಗಮಿಸಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮೃತ ವಿದ್ಯಾರ್ಥಿಯನ್ನು ಮಹಾರಾಷ್ಟ್ರದ ನಾಗ್ಪುರ ಮೂಲದ ಹೃತಿಕ್ ಸಂಜಯ್ ಭವಾನಿ ಎಂದು ಗುರುತಿಸಲಾಗಿದೆ.

ಹೃತಿಕ್ ಸಂಜಯ್ ಭವಾನಿ ಐಐಟಿ ಗುವಾಹಟಿಯಲ್ಲಿ ಅಂತಿಮ ವರ್ಷದ ಬಿಟೆಕ್ ವಿದ್ಯಾರ್ಥಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ವಿದ್ಯಾರ್ಥಿನಿ ಸಾವಿಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಘಟನೆ ಕುರಿತು ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ:ಗನ್​ ತೋರಿಸಿ ಸಾಮಾಜಿಕ ಕಾರ್ಯಕರ್ತೆ ಮೇಲೆ ರೇಪ್​; ಟ್ಯೂಷನ್​ಗೆ ಹೋಗುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ: ಹುಡುಗಿ ಕುತ್ತಿಗೆಗೆ ಚಾಕು ಇಟ್ಟು ತಲೆಗೆ ಸಿಂಧೂರವಿಟ್ಟ ಭೂಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.