ಕೊಯಮತ್ತೂರು : ಕೊಯಮತ್ತೂರಿನಲ್ಲಿ ನಡೆದ ಕಾರ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚೆನ್ನೈನ ನಾಲ್ಕು ಕಡೆ ದಿಢೀರ್ ದಾಳಿ ನಡೆಸಿದ್ದಾರೆ. ನಿಷೇಧಿತ ಸಂಘಟನೆ ಜೊತೆಗಿನ ನಂಟಿನ ಹಿನ್ನೆಲೆ ಈ ದಾಳಿ ನಡೆಸಲಾಗಿದೆ.
ಕೊಯಮತ್ತೂರಿನ ಕಾರ್ ಸ್ಫೋಟ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ನವೆಂಬರ್ 10ರಂದು ವಿಶೇಷವಾಗಿ ಎನ್ಐಎ, ಚೆನ್ನೈ ಮತ್ತು ಕೊಯಮತ್ತೂರಿನ 43 ಕಡೆ ದಾಳಿ ನಡೆಸಿದೆ. ಈ ದಾಳಿ ವೇಳೆ ಪ್ರಮುಖ ದಾಖಲೆಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಈ ನಡುವೆ ನಿಷೇಧಿತ ಸಂಘಟನೆಗೆ ನಕಲಿ ಪಾಸ್ಪೋರ್ಟ್ ಮತ್ತು ಸಿಮ್ ಕಾರ್ಡ್ ನೀಡಿದವರ ಸಂಬಂಧ ಕೇಂದ್ರ ಗೃಹ ಸಚಿವಾಲಯ ಪಟ್ಟಿ ತಯಾರಿಸಿದೆ. ಈ ಪಟ್ಟಿಯಲ್ಲಿ ಚೆನ್ನೈನಲ್ಲಿ ನಿಷೇಧಿತ ಹೋರಾಟದ ಭಾಗವಾಗಿದ್ದ 18 ಮಂದಿ ಹೆಸರು ಕೂಡ ಇದೆ.
ಚನ್ನೈನ ನಾಲ್ಕು ಕಡೆ ದಾಳಿ ಬಳಿಕ ಕೊಡುಂಕೈಯುರ್ನ ವೆಲ್ಲುವರ್ ರಸ್ತೆಯಲ್ಲಿನ ಮೊಹಮ್ಮದ್ ತಪ್ರಾಸ್ ಮನೆಯಲ್ಲಿ ಶೋಧ ನಡೆಸಲಾಗಿದೆ. ನಿಷೇಧಿತ ಸಂಘಟನೆಗೆ ಹಣ ವರ್ಗಾವಣೆ ನಡೆಸಿದ ಆರೋಪದ ಮೇಲೆ ಮೊಹ್ಮದ್ ಮೇಲೆ ಪ್ರಕರಣ ಇದೆ.
ಸಿರಿಯಾ ಮತ್ತು ಇರಾಕ್ ಭಯೋತ್ಪಾದಕರಿಗೆ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ತೊಫಿಕ್ ಅಹ್ಮದ್ ಎಂಬಾತನನ್ನು ಯುಪಿಎ ಕಾಯ್ದೆ ಅಡಿ ಬಂಧಿಸಲಾಗಿದೆ. ನಿಷೇಧಿತ ಸಂಘಟನೆಗೆ ಸಿಮ್ ಕಾರ್ಡ್ ಮಾರಾಟ ಮಾಡಿದ ಪ್ರಕರಣ ಹರೂನ್ ರಶೀದ್ ಮೇಲೆ ಪ್ರಕರಣ ಬಾಕಿ ಇದೆ.
ಮೂರು ವ್ಯಕ್ತಿಗಳ ಬಂಧನದ ಬಳಿಕ ಅಂಗಪ್ಪನ್ ನಯಕ್ಕರ್ ಸ್ಟ್ರೀಟ್ ನಿವಾಸಿ ಮೊಹ್ಮದ್ ಮುಸ್ತಾಫನನ್ನು ಬಂಧಿಸಲಾಗಿದೆ. ಈತ ನಿಷೇಧಿತ ಸಂಘಟನೆಗೆ ನಕಲಿ ಪಾಸ್ಪೋರ್ಟ್ ಮಾಡಿಕೊಡುತ್ತಿದ್ದ ಎನ್ನಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಎನ್ಐಎ ನಡೆಸುತ್ತಿದೆ.
ಇದನ್ನು ಓದಿ: ಕೊಲೆಮಾಡಿ ತಿಂಗಳವರೆಗೂ ಶ್ರದ್ಧಾಳ ಇನ್ಸ್ಟಾ ಅಕೌಂಟ್ ಚಾಲನೆಯಲ್ಲಿಟ್ಟಿದ್ದ ಅಫ್ತಾಬ್!