ETV Bharat / bharat

ತಿರುಮಲದಲ್ಲಿ ಗೋವಿಂದಾನಂದ ಯಾತ್ರೆಗೆ ಪೊಲೀಸರ ಅಡ್ಡಿ.. ಹನುಮ ಜನ್ಮಭೂಮಿ ವಿವಾದ ಮತ್ತಷ್ಟು ಜಟಿಲ - ರಥಯಾತ್ರೆ ನಡೆಸುತ್ತಿರುವ ಗೋವಿಂದಾನಂದ ಸ್ವಾಮೀಜಿ

ಹನುಮ ಹುಟ್ಟಿದ್ದು ತಿರುಮಲದ ಅಂಜನಾದ್ರಿಯಲ್ಲ, ಹಂಪಿಯ ತಟದಲ್ಲಿರುವ ಕಿಷ್ಕಿಂದೆ ಎಂದು ಹನುಮದ್​ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ರಾಷ್ಟ್ರವ್ಯಾಪಿ ರಥಯಾತ್ರೆ ಮಾಡುತ್ತಿದೆ. ಇಂದು ತಿರುಮಲಕ್ಕೆ ರಥಯಾತ್ರೆ ಹೊರಟಿತ್ತು. ಈ ವೇಳೆ ಪೊಲೀಸರು ರಥಯಾತ್ರೆಯನ್ನು ತಡೆದಿದ್ದಾರೆ.

Saraswathi
ತಿರುಮಲದಲ್ಲಿ ಗೋವಿಂದಾನಂದ ಯಾತ್ರೆಗೆ ಪೊಲೀಸರು ಅಡ್ಡಿ
author img

By

Published : Feb 18, 2022, 10:51 PM IST

ತಿರುಮಲ(ಆಂಧ್ರಪ್ರದೇಶ): ಹನುಮ ಜನ್ಮಸ್ಥಳ ವಿವಾದ ಇನ್ನಷ್ಟು ಜಟಿಲವಾಗುತ್ತಿದೆ. ಹಂಪಿಯ ಹನುಮದ್​ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಸಂಸ್ಥಾಪಕ ಅಧ್ಯಕ್ಷ ಗೋವಿಂದಾನಂದ ಸ್ವಾಮಿಗಳು ಇಂದು ತಿರುಮಲಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪೊಲೀಸರು ತಮ್ಮನ್ನು ತಡೆದು, ಗೋವಿಂದಾನಂದ ಯಾತ್ರೆಗೆ ಅಡ್ಡಿ ಪಡಿಸಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.

ತಿರುಮಲದಲ್ಲಿ ಗೋವಿಂದಾನಂದ ಯಾತ್ರೆಗೆ ಪೊಲೀಸರು ಅಡ್ಡಿ

ಹನುಮ ಹುಟ್ಟಿದ್ದು ತಿರುಮಲದ ಅಂಜನಾದ್ರಿಯಲ್ಲ, ಹಂಪಿಯ ತಟದಲ್ಲಿರುವ ಕಿಷ್ಕಿಂದೆ ಎಂದು ಹನುಮದ್​ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ರಾಷ್ಟ್ರವ್ಯಾಪಿ ರಥಯಾತ್ರೆ ಮಾಡುತ್ತಿದೆ. ಇಂದು ತಿರುಮಲಕ್ಕೆ ರಥಯಾತ್ರೆ ಹೊರಟಿತ್ತು. ಈ ವೇಳೆ ಪೊಲೀಸರು ರಥಯಾತ್ರೆಯನ್ನು ತಡೆದಿದ್ದಾರೆ.

ಟಿಟಿಡಿಯಿಂದ ಜನರಿಗೆ ದ್ರೋಹ: ತಿರುಪತಿ ತಿರುಮಲ ದೇವಸ್ಥಾನ(ಟಿಟಿಡಿ) ಜನರಿಗೆ ಮೋಸ ಮಾಡುತ್ತಿದೆ. ಹನುಮಾನ್ ಜನ್ಮಸ್ಥಳ ಎಂಬ ಹೆಸರಿನಲ್ಲಿ ನಕಲಿ ಪುಸ್ತಕ ಮುದ್ರಿಸಿ, ಸುಳ್ಳು ಮಾಹಿತಿಯನ್ನು ಹರಡುತ್ತಿದೆ ಎಂದು ಗೋವಿಂದಾನಂದ ಸರಸ್ವತಿ ಆರೋಪಿಸಿದ್ದಾರೆ. ತಿರುಪತಿಯಲ್ಲಿ ಅಂಜನಾದ್ರಿ ಹೆಸರಿನಲ್ಲಿ ಅಂಗಡಿಗಳನ್ನು ಸ್ಥಾಪಿಸಿ ಹಣ ಮಾಡಲು ಟಿಟಿಡಿ ಮುಂದಾಗಿದೆ ಎಂದು ಟೀಕಿಸಿದರು.

1,200 ಕೋಟಿ ವೆಚ್ಚದಲ್ಲಿ ಕಿಷ್ಕಿಂಧೆಯನ್ನು ಅಭಿವೃದ್ಧಿ ಪಡಿಸುವುದಾಗಿ ಕರ್ನಾಟಕದ ಮುಖ್ಯಮಂತ್ರಿ ಘೋಷಿಸಿದ್ದಾರೆ. ಕಿಷ್ಕಿಂದೆ ಹನುಮಂತನ ಜನ್ಮಸ್ಥಳ ಎಂಬುದನ್ನು ಜನರಿಗೆ ತಿಳಿಸಲು ಹನುಮದ್​ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಆಶ್ರಯದಲ್ಲಿ 12 ವರ್ಷಗಳಿಂದ ನಾಡಿನಾದ್ಯಂತ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಓದಿ: ಮಳೆ ಬೆಳೆ ಸಂಪಾಯಿತಲೆ ಪರಾಕ್: ಮೈಲಾರದಲ್ಲಿ ಅದ್ಧೂರಿ ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದ ಭಕ್ತರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.