ಸೇಲಂ(ತಮಿಳುನಾಡಡು): ಓಮಲೂರು ಸಮೀಪದ ಪುಲಿಯಂಪಟ್ಟಿಯಲ್ಲಿ ಓಮಲೂರು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಆಗ ದ್ವಿಚಕ್ರ ವಾಹನದಲ್ಲಿ ಸೇಲಂನಿಂದ ಬಂದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ವಶಕ್ಕೆ ಪಡೆದ ವೇಳೆ ಅವರು ವ್ಯತಿರಿಕ್ತವಾಗಿ ಪೊಲೀಸರಿಗೆ ಉತ್ತರಿಸುತ್ತಿದ್ದರು. ಅನುಮಾನಗೊಂಡ ಪೊಲೀಸ್ ಅಧಿಕಾರಿಗಳು ಅವರಲ್ಲಿದ್ದ ಬ್ಯಾಗ್ ಅನ್ನು ಪರಿಶೀಲಿಸಿದಾಗ ಮಾರಕಾಸ್ತ್ರಗಳು, ದೊಡ್ಡ ಪಿಸ್ತೂಲ್, ತಯಾರಿಕ ಹಂತದಲ್ಲಿದ್ದ ದೊಡ್ಡ ಪಿಸ್ತೂಲ್, ಚಾಕು ಸೇರಿದಂತೆ ಇತರ ವಸ್ತುಗಳು ಇದ್ದವು ಎಂದು ತಿಳಿದುಬಂದಿದೆ.
ಪೊಲೀಸರು ತಕ್ಷಣ ಇಬ್ಬರನ್ನು ಬಂಧಿಸಿ ಹೆಚ್ಚಿನ ತನಿಖೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ. ಇವರು ಸೇಲಂ ಎರುಮಾಪಾಳ್ಯಂ ಪ್ರದೇಶದ ನವೀನ್ ಚಕ್ರವರ್ತಿ ಮತ್ತು ಸಂಜಯ್ ಪ್ರತಾಪ್ ಎಂದು ತನಿಖೆಯಿಂದ ತಿಳಿದುಬಂದಿದೆ.
ಹೆಚ್ಚಿನ ತನಖೆಯಿಂದ ತಿಳಿದುಬಂದಿದ್ದು ಏನೆಂದರೆ ಅವರು ಯೂಟ್ಯೂಬ್ ಚಾನೆಲ್‌ಗಳನ್ನು ವೀಕ್ಷಿಸಿ ಬಂದೂಕು, ಗ್ರೆನೇಡ್ ಮತ್ತು ಚಾಕು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಇಬ್ಬರ ವಿರುದ್ಧ ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಸೇಲಂ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ಇದನ್ನೂ ಓದಿ: ದಲಿತರ ಕೇರಿಯಿಂದ ಬರುವ ನೀರಿಗೆ ತಡೆ: ಮನೆಗಳಿಗೆ ನುಗ್ಗಿದ ನೀರು, ದವಸ ಧಾನ್ಯ ನಾಶ