ಬೆತುಲ್(ಮಧ್ಯಪ್ರದೇಶ): ಒಂದು ವಾರದ ಹಿಂದೆ ಬೆತುಲ್ನಲ್ಲಿ ನಡೆದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿ ಖದೀಮರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಎಸ್‌ಪಿ ಸಿಮಲ ಪ್ರಸಾದ್, "ಮೇ 31 ರಂದು ಚಿಂದ್ವಾರ ನಿವಾಸಿ ರಾಜಕುಮಾರ ಸೋನಿ ಎಂಬವರಿಂದ 2.5 ಲಕ್ಷ ರೂ. ನಗದು ಮತ್ತು 2 ಲಕ್ಷ ರೂ. ಮೌಲ್ಯದ ಐದು ವಜ್ರಗಳನ್ನು ಖದೀಮರು ದೋಚಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅದರ ಸಹಾಯದಿಂದ ಪೊಲೀಸರು ಜಾರ್ಖಂಡ್ನ ಅಮ್ಡೋ ನಿವಾಸಿ ಕರಣ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗಿದೆ ಎಂದರು.
ಕರಣ್ ಬಂಧನದ ಬಳಿಕ ಹಮ್ಲಾಪುರ ನಿವಾಸಿ ಪಿಂಟು ನಾಗ್ಲೆ, ಶುಭಮ್ ಗಾಯಕ್ವಾಡ್, ಪಂಕಜ್ ಕಾವ್ಡೆ, ಕಲಾಪಥ ನಿವಾಸಿ ಹೃತಿಕ್ ಚಂದ್ರಹಾಸ್, ದುರ್ಗಾ ವಾರ್ಡ್ ನಿವಾಸಿ ರೋಹಿತ್ ಮಾರ್ಕಮ್ ಸೇರಿದಂತೆ ಇತರ ಇಬ್ಬರನ್ನು ಬಂಧಿಸಿದ್ದಾರೆ.
ಐದು ಉತ್ತಮ ಗುಣಮಟ್ಟದ ವಜ್ರಗಳು ಮತ್ತು ಕಡಿಮೆ ಗುಣಮಟ್ಟದ ವಜ್ರಗಳ 250 ತುಂಡುಗಳು, 2 ದೇಶೀ ನಿರ್ಮಿತ ಪಿಸ್ತೂಲ್, 2 ಲೈವ್ ಕಾರ್ಟ್ರಿಜ್ಗಳು, 15 ಸಾವಿರ ರೂಪಾಯಿ ನಗದು ಮತ್ತು 55 ಲಕ್ಷ ರೂ.ಗಳ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.