ETV Bharat / bharat

ಪ್ರೀತಿಯ ಹೆಸರಲ್ಲಿ ವಿದ್ಯಾರ್ಥಿನಿ ಅಪಹರಿಸಿದ ಆರೋಪಿಗಳು ಅಂದರ್​​ - ಲವ್ ಜಿಹಾದ್

ಸೆಂಟ್ರಲ್ ಮಾರ್ಕೆಟ್​​ ಕೋಚಿಂಗ್ ಸೆಂಟರ್​​ನ ವಿದ್ಯಾರ್ಥಿನಿಯನ್ನು ಸೆಂಟರ್​ನ ಮಾಲೀಕ ಮೊಹಮ್ಮದ್ ಅಮಾನ್ ಮತ್ತು ಅಮನ್ ಎಂಬ ವಿದ್ಯಾರ್ಥಿ ಒಟ್ಟಿಗೆ ಸೇರಿ ಬ್ರೈನ್ ವಾಶ್ ಮಾಡಿದ್ದಾರೆ. ಪ್ರೀತಿಯ ನೆಪದಲ್ಲಿ ಆಕೆಯನ್ನು ವಿಶ್ವಾಸದಿಂದ ಮಂಗಳವಾರ ಮಾರುಕಟ್ಟೆಗೆ ಕರೆಸಲಾಯಿತು ನಂತರ ಆಕೆಯನ್ನು ನಿಜಾಮುದ್ದೀನ್​​ಗೆ ಕರೆದೊಯ್ದಿದ್ದಾರೆಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

love jihad case in meerut
ಪ್ರೀತಿಯ ಹೆಸರಲ್ಲಿ ವಿದ್ಯಾರ್ಥಿನಿಯನ್ನು ಅಪಹರಿಸಿದ ಆರೋಪಿಗಳು ಅಂದರ್​​
author img

By

Published : Feb 3, 2021, 1:42 PM IST

Updated : Feb 3, 2021, 1:48 PM IST

ಮೀರತ್(ಉತ್ತರಪ್ರದೇಶ): ಲವ್ ಜಿಹಾದ್ ಕುರಿತು ಉತ್ತರ ಪ್ರದೇಶ ಸರ್ಕಾರದ ಕಾನೂನುಗಳ ಹೊರತಾಗಿಯೂ ಈ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದೆ.

ನೌಚಂಡಿ ಪ್ರದೇಶದಿಂದ ಮಹಿಳೆಯೋರ್ವರನ್ನು ಅಪಹರಿಸಿ ದೆಹಲಿಯ ನಿಜಾಮುದ್ದೀನ್ ಪ್ರದೇಶಕ್ಕೆ ಅನ್ಯಧರ್ಮದ ಇಬ್ಬರು ಪುರುಷರು ಕಳುಹಿಸಿದ್ದಾರೆ ಎಂದು ಆರೋಪಿಸಿರುವ ಪ್ರಕರಣ ವರದಿಯಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಿಂದೂ ಸಂಘಟನೆಗಳು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಸೆಂಟ್ರಲ್ ಮಾರ್ಕೆಟ್​​ ಕೋಚಿಂಗ್ ಸೆಂಟರ್​​ನ ವಿದ್ಯಾರ್ಥಿನಿಯನ್ನು ಸೆಂಟರ್​ನ ಮಾಲೀಕ ಮೊಹಮ್ಮದ್ ಅಮಾನ್ ಮತ್ತು ಅಮನ್ ಎಂಬ ವಿದ್ಯಾರ್ಥಿ ಒಟ್ಟಿಗೆ ಸೇರಿ ಬ್ರೈನ್ ವಾಶ್ ಮಾಡಿದ್ದಾರೆ. ಪ್ರೀತಿಯ ನೆಪದಲ್ಲಿ ಆಕೆಯನ್ನು ವಿಶ್ವಾಸದಿಂದ ಮಂಗಳವಾರ ಮಾರುಕಟ್ಟೆಗೆ ಕರೆಸಲಾಯಿತು ನಂತರ ಆಕೆಯನ್ನು ನಿಜಾಮುದ್ದೀನ್​​ಗೆ ಕರೆದೊಯ್ದಿದ್ದಾರೆಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಸಂಜೆ ಮಹಿಳೆ ಹಿಂತಿರುಗದಿದ್ದಾಗ, ಕುಟುಂಬಸ್ಥರು ಆಕೆಯ ಹುಡುಕಾಟ ನಡೆಸಿದ್ದು ನಂತರ ನೌಚಂಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿದ್ಯಾರ್ಥಿನಿ ಮೊಬೈಲ್‌ನ ಸಿಡಿಆರ್ ಅನ್ನು ಪೊಲೀಸರು ಹೊರತೆಗೆದಿದ್ದು, ಮೊಹಮ್ಮದ್ ಅಮಾನ್ ಮತ್ತು ಅಮನ್​​ರ ಮೊಬೈಲ್ ಸಂಖ್ಯೆಗಳು ಪತ್ತೆಯಾಗಿವೆ.

ಹಿಂದೂ ಸಂಘಟನೆಗಳು ಪೊಲೀಸ್​ ಠಾಣೆ ಎದುರು ಜಮಾಯಿಸಿದ್ದು, ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. ತನಿಖೆ ಬಳಿಕ ಆರೋಪಿಗಳನ್ನು ಬಂಧಿಸಲಾಗಿದ್ದು, ಆಕೆಯನ್ನು ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಇರಿಸಲಾಗಿದೆಯೆಂದು ಒಪ್ಪಿಕೊಂಡಿದ್ದಾರೆ. ಇನ್ನೂ ವಿದ್ಯಾರ್ಥಿನಿಯ ರಕ್ಷಣೆಗಾಗಿ ಪೊಲೀಸ್ ತಂಡವನ್ನು ದೆಹಲಿಗೆ ಕಳುಹಿಸಲಾಗಿದೆ.

Last Updated : Feb 3, 2021, 1:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.