ಪೂರ್ವ ಗೋದಾವರಿ(ಆಂಧ್ರಪ್ರದೇಶ): ಮೀನುಗಾರಿಕೆ ಮಾಡುವ ವೇಳೆ ವಿಚಿತ್ರ ಮತ್ತು ಆಶ್ಚರ್ಯಕರ ಮೀನುಗಳು ಬಲೆಗೆ ಬೀಳುವುದು ಸರ್ವೇ ಸಾಮಾನ್ಯ. ಆದರೆ, ಇದೀಗ ಮತ್ತಷ್ಟು ವಿಚಿತ್ರ ಎನ್ನಲಾಗಿರುವ ವಿಷಕಾರಿ ಮೀನೊಂದು ಬಲೆಗೆ ಬಿದ್ದಿದೆ.
ಮನುಷ್ಯರ ಮುಖದಂತೆ ಕಾಣುವ ಈ ಅಪರೂಪದ ಮೀನನ್ನು ಬೈಸನ್ ಫಿಶ್ ಎಂದು ಕರೆಯಲಾಗುತ್ತದೆ. ಇದಕ್ಕೆ ಸಾಮಾನ್ಯವಾಗಿ ಪಫರ್ ಫಿಶ್, ಬಲೂನ್ ಫಿಶ್ ಅಥವಾ ಗ್ಲೋಬ್ ಫಿಶ್ ಎಂದು ಕರೆಯಲಾಗುತ್ತದೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಉಪ್ಪಲಗುಪ್ತ ವಲಯದ ವಸಲತಿಪ್ಪದಲ್ಲಿ ಮೀನುಗಾರಿಕೆ ಮಾಡ್ತಿದ್ದ ವೇಳೆ ಈ ವಿಚಿತ್ರ ಮೀನು ಬಲೆಗೆ ಬಿದ್ದಿದೆ.
ಇದನ್ನೂ ಓದಿರಿ: ಉತ್ತರಾಖಂಡದಲ್ಲಿ ಕಾಂಗ್ರೆಸ್ ಸೋಲು.. ನೈತಿಕ ಹೊಣೆ ಹೊತ್ತು ರಾಜ್ಯ ಉಸ್ತುವಾರಿ ರಾಜೀನಾಮೆ
ವಿಶ್ವದ ಎರಡನೇ ಅತ್ಯಂತ ವಿಷಕಾರಿ ಮೀನು ಎಂದು ಹೇಳಲಾಗ್ತಿದ್ದು, ಮನುಷ್ಯನನ್ನೇ ಕೊಲ್ಲುವಷ್ಟು ವಿಷ ಇದರಲ್ಲಿ ಇದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿ ಗೋಪಾಲಕೃಷ್ಣ ವಿವರಿಸಿದ್ದಾರೆ. ಈ ಹಿಂದೆ ಕೂಡ ಮೀನುಗಾರರ ಬಲೆಗೆ ಹಾರುವ ಮೀನು, ದುಬಾರಿ ಬೆಲೆಯ ಮೀನು ಸೇರಿದಂತೆ ಕೋಟ್ಯಂತರ ರೂ. ಮೌಲ್ಯದ ಮೀನುಗಳು ಸಿಕ್ಕಿವೆ.