ETV Bharat / bharat

"ಮಹಿಳಾ ಸಬಲೀಕರಣದತ್ತ ಮೋದಿ ಸರ್ಕಾರದ ಚಿತ್ತ": ಸಚಿವೆ ಶೋಭಾ ಕರಂದ್ಲಾಜೆ ಜೊತೆ 'ಈಟಿವಿ ಭಾರತ' ಸಂದರ್ಶನ - ನವದೆಹಲಿ

ಕರ್ನಾಟಕದಿಂದ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರು, ಪ್ರಧಾನಿ ನರೇಂದ್ರ ಮೋದಿಯವರ ಕ್ಯಾಬಿನೆಟ್​ನಲ್ಲಿ ಸ್ಥಾನ ಪಡೆದಿದ್ದಾರೆ. ಇದೀಗ ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

Etv Bharat
ಸಚಿವೆ ಶೋಭಾ ಕರಂದ್ಲಾಜೆ ಜೊತೆ ಈಟಿವಿ ಭಾರತ ಸಂದರ್ಶನ
author img

By

Published : Jul 8, 2021, 1:25 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕ್ಯಾಬಿನೆಟ್​ಗೆ ಮೀನಾಕ್ಷಿ ಲೇಖಿ, ಶೋಭಾ ಕರಂದ್ಲಾಜೆ ಮತ್ತು ಅನುಪ್ರಿಯಾ ಸಿಂಗ್ ಪಟೇಲ್ ಸೇರಿದಂತೆ 11 ಮಹಿಳೆಯರು ಸೇರಿದ್ದಾರೆ. ಕರ್ನಾಟಕದಿಂದ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ನಾರಿಶಕ್ತಿ ಸೇರಿದ್ದು, ಇದೀಗ ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಸಚಿವೆ ಶೋಭಾ ಕರಂದ್ಲಾಜೆ ಜೊತೆ ಈಟಿವಿ ಭಾರತ ಸಂದರ್ಶನ

"ಪ್ರಧಾನಿ ನರೇಂದ್ರ ಮೋದಿ ಮಹಿಳಾ ಸಬಲೀಕರಣದತ್ತ ಗಮನಹರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮಹಿಳೆಯರಿಗೆ ಸ್ಥಾನಗಳನ್ನು ಕಾಯ್ದಿರಿಸುವ ಮೂಲಕ ರಾಜಕೀಯದಲ್ಲಿನ ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸುತ್ತಿದ್ದಾರೆ. ರಾಜಕೀಯದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಇದು ಮಹಿಳೆಯರ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ" ಎಂದು ಹೇಳಿದರು.

"ಬಿಜೆಪಿ ಸರ್ಕಾರದಲ್ಲಿ ಮಾತ್ರ ಮಹಿಳೆಯರು ಹಣಕಾಸು ಮತ್ತು ಬಾಹ್ಯ ವ್ಯವಹಾರಗಳಂತಹ ಪ್ರಮುಖ ಸಚಿವ ಸ್ಥಾನಗಳನ್ನು ಪಡೆಯಲು ಸಾಧ್ಯ. ಮಹಿಳೆಯರ ಸುಧಾರಣೆಗಾಗಿ ಅನೇಕ ಕಾನೂನುಗಳನ್ನು ಸಹ ತರಲಾಗಿದೆ" ಎಂದರು.

"ನಾನು ದಕ್ಷಿಣ ರಾಜ್ಯದಿಂದ ಬಂದವಳಾಗಿದ್ದರೂ, ಒಟ್ಟಾರೆ ಭಾರತದ ಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ. ದಕ್ಷಿಣದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ" ಎಂದು ಸಚಿವೆ ಶೋಭಾ ಕರಂದ್ಲಾಜೆ ಭರವಸೆಯ ಮಾತುಗಳನ್ನಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.