ETV Bharat / bharat

ಹಲವಾರು ಸವಾಲುಗಳ ಹೊರತಾಗಿಯೂ ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ: ಪ್ರಧಾನಿ ಮೋದಿ - ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೆಲ್

"ಪ್ರಜಾಪ್ರಭುತ್ವವು ಕೇವಲ ಒಂದು ರಚನೆಯಲ್ಲ. ಅದು ಒಂದು ಚೈತನ್ಯವೂ ಆಗಿದೆ. ಇದು ಪ್ರತಿಯೊಬ್ಬ ಮನುಷ್ಯನ ಅಗತ್ಯಗಳು ಮತ್ತು ಆಕಾಂಕ್ಷೆಗಳು ಸಮಾನವಾಗಿರುವುದು ಮುಖ್ಯವಾಗಿದೆ ಎಂಬ ನಂಬಿಕೆಯನ್ನು ಆಧರಿಸಿದೆ. ಅದಕ್ಕಾಗಿಯೇ, ಭಾರತದಲ್ಲಿ ನಮ್ಮ ಮಾರ್ಗದರ್ಶಿ ತತ್ವವೆಂದರೆ "ಸಬ್ಕಾ ಸಾಥ್, ಸಬ್ಕಾ ವಿಕಾಸ್", ಅಂದರೆ, 'ಒಟ್ಟಾಗಿ ಅಭಿವೃದ್ಧಿಗಾಗಿ ಶ್ರಮಿಸುವುದು" ಎಂದು ಯುಎಸ್ ಆಯೋಜಿಸಿರುವ ಪ್ರಜಾಪ್ರಭುತ್ವದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಆರಂಭಿಕ ಭಾಷಣದಲ್ಲಿ ಹೇಳಿದರು.

Narendra Modi and Joe Biden
ನರೇಂದ್ರ ಮೋದಿ ಹಾಗೂ ಜೋ ಬಿಡೆನ್
author img

By

Published : Mar 29, 2023, 9:21 PM IST

ನವದೆಹಲಿ: ''ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಹೊರತಾಗಿಯೂ ಭಾರತವು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯನ್ನು ಹೊಂದಿರುವ ದೇಶವಾಗಿದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಯುಎಸ್ ಆಯೋಜಿಸಿರುವ ಪ್ರಜಾಪ್ರಭುತ್ವದ ಶೃಂಗಸಭೆಯಲ್ಲಿ ಬುಧವಾರ ಆರಂಭಿಕ ಭಾಷಣ ಮಾಡಿದ ಅವರು, ''ಪ್ರಜಾಪ್ರಭುತ್ವವು ಕೇವಲ ಒಂದು ರಚನೆಯಲ್ಲ. ಅದು ಒಂದು ಚೈತನ್ಯವೂ ಆಗಿದೆ. ಇದು ಪ್ರತಿಯೊಬ್ಬ ಮನುಷ್ಯನ ಅಗತ್ಯಗಳು ಮತ್ತು ಆಕಾಂಕ್ಷೆಗಳು ಸಮಾನವಾಗಿರುವುದು ಮುಖ್ಯವಾಗಿದೆ ಎಂಬ ನಂಬಿಕೆಯನ್ನು ಆಧರಿಸಿದೆ. ಅದಕ್ಕಾಗಿಯೇ, ಭಾರತದಲ್ಲಿ ನಮ್ಮ ಮಾರ್ಗದರ್ಶಿ ತತ್ವವೆಂದರೆ "ಸಬ್ಕಾ ಸಾಥ್, ಸಬ್ಕಾ ವಿಕಾಸ್", ಅಂದರೆ ಒಟ್ಟಾಗಿ ಅಭಿವೃದ್ಧಿಗಾಗಿ ಶ್ರಮಿಸುವುದು'' ಎಂದರು.

ಭಾರತದ ಬೆಳವಣಿಗೆ ಬಗ್ಗೆ ಮೋದಿ ಮಾತು: ಭಾರತದ ಬೆಳವಣಿಗೆಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ''ಭಾರತವು ಪ್ರಜಾಪ್ರಭುತ್ವದ ತಾಯಿ ಎಂದು ಪುನರುಚ್ಚರಿಸಿದರು. ಅನೇಕ ಜಾಗತಿಕ ಸವಾಲುಗಳ ನಡುವೆಯೂ ದೇಶವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಹೊಂದಿದೆ'' ಎಂದು ಅವರು, ಜೀವನಶೈಲಿಯ ಬದಲಾವಣೆಗಳ ಮೂಲಕ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವುದು. ವಿತರಿಸಿದ ಹಾಗೂ ಸಂಗ್ರಹಿಸಿದ ನೀರನ್ನು ಸಂರಕ್ಷಿಸುವುದು. ಎಲ್ಲರಿಗೂ ಶುದ್ಧ ಅಡುಗೆ ಇಂಧನವನ್ನು ಒದಗಿಸುವುದು ನಮ್ಮ ಪ್ರಯತ್ನವಾಗಿದ್ದರೂ, ಪ್ರತಿ ಉಪಕ್ರಮವು ಭಾರತದ ನಾಗರಿಕರ ಸಾಮೂಹಿಕ ಪ್ರಯತ್ನದಿಂದ ನಡೆಸಲ್ಪಡುತ್ತದೆ'' ಎಂದು ಅವರು ಹೇಳಿದರು.

'ವಸುಧೈವ ಕುಟುಂಬಕಂ' ಎಂದ ಮೋದಿ: ''ಕೋವಿಡ್ -19 ಸಮಯದಲ್ಲಿ ಭಾರತದ ಜನರು ನೀಡಿದ ಬೆಂಬಲವನ್ನು ಮೋದಿ ಸ್ಮರಿಸಿದರು. ಆ ಸಮಯದಲ್ಲಿ 2 ಬಿಲಿಯನ್ ಡೋಸ್ ಮೇಡ್ ಇನ್ ಇಂಡಿಯಾ ಲಸಿಕೆಗಳನ್ನು ನೀಡಲು ಸಾಧ್ಯವಾಯಿತು. "ಲಸಿಕೆ ಮೈತ್ರಿ" ಉಪಕ್ರಮವು ಲಕ್ಷಾಂತರ ಲಸಿಕೆಗಳನ್ನು ಪ್ರಪಂಚದೊಂದಿಗೆ ಹಂಚಿಕೊಂಡಿದೆ ಎಂದು ಅವರು ಗಮನಸೆಳೆದರು. ಇದು "ವಸುಧೈವ ಕುಟುಂಬಕಂ" - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಪ್ರಜಾಸತ್ತಾತ್ಮಕ ಮನೋಭಾವ ಮಾರ್ಗದರ್ಶಿಯಾಗಿದೆ'' ಎಂದು ಪ್ರಧಾನಿ ಮೋದಿ ತಿಳಿಸಿದರು.

ಭಾರತವು ಪ್ರಜಾಪ್ರಭುತ್ವದ ತಾಯಿ- ಮೋದಿ: ''ಚುನಾಯಿತ ನಾಯಕರ ಕಲ್ಪನೆಯು ಪ್ರಾಚೀನ ಭಾರತದಲ್ಲಿ ಹಾಗೂ ಪ್ರಪಂಚದ ಇತರ ಭಾಗಗಳಿಗಿಂತ ಬಹಳ ಹಿಂದೆಯೇ ಇರುವ ಸಾಮಾನ್ಯ ಲಕ್ಷಣವಾಗಿದೆ ಎಂದು ಅವರು, "ನಮ್ಮ ಪ್ರಾಚೀನ ಮಹಾಕಾವ್ಯವಾದ ಮಹಾಭಾರತದಲ್ಲಿ, ನಾಗರಿಕರ ಆದ್ಯ ಕರ್ತವ್ಯವೆಂದರೆ, ಅವರ ನಾಯಕನನ್ನು ಆರಿಸುವುದು" ಎಂದರು. "ನಮ್ಮ ಪವಿತ್ರ ವೇದಗಳು, ವಿಶಾಲ-ಆಧಾರಿತ ಸಮಾಲೋಚನಾ ಸಂಸ್ಥೆಗಳಿಂದ ರಾಜಕೀಯ ಅಧಿಕಾರವನ್ನು ಚಲಾಯಿಸುವ ಬಗ್ಗೆ ಮಾತನಾಡುತ್ತವೆ. ಪ್ರಾಚೀನ ಭಾರತದಲ್ಲಿ ಗಣರಾಜ್ಯ ಮತ್ತು ರಾಜ್ಯಗಳ ಬಗ್ಗೆ ಅನೇಕ ಐತಿಹಾಸಿಕ ಉಲ್ಲೇಖಗಳಿವೆ. ಅಲ್ಲಿ ಆಡಳಿತಗಾರರು ಅನುವಂಶಿಕವಾಗಿಲ್ಲ. ಭಾರತವು ನಿಜವಾಗಿಯೂ ಪ್ರಜಾಪ್ರಭುತ್ವದ ತಾಯಿ" ಎಂದು ಮೋದಿ ತಿಳಿಸಿದರು.

ಶೃಂಗಸಭೆಯಲ್ಲಿ ಆತಿಥ್ಯ ವಹಿಸಿದ್ದ ರಾಷ್ಟ್ರಗಳ್ಯಾವವು?: ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಕೋಸ್ಟರಿಕಾ ಅಧ್ಯಕ್ಷ ರೋಡ್ರಿಗೋ ಚೇವ್ಸ್ ರೋಬಲ್ಸ್, ಜಾಂಬಿಯಾ ಅಧ್ಯಕ್ಷ ಹಕೈಂಡೆ ಹಿಚಿಲೆಮಾ, ನೆದರ್ಲೆಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೆಲ್ ಸಹ ಆತಿಥ್ಯ ವಹಿಸಿದ್ದ ಪ್ರಜಾಪ್ರಭುತ್ವದ ಎರಡನೇ ಶೃಂಗಸಭೆಯಲ್ಲಿ ಮೋದಿ ವಾಸ್ತವಿಕವಾಗಿ ಮಾತನಾಡಿದರು.

ಇದನ್ನೂ ಓದಿ: ಕಾಶ್ಮೀರಿ ಪಂಡಿತ್​ ಹತ್ಯೆ ಪ್ರಕರಣ: ಪುಲ್ವಾಮಾ ಗ್ರಾಮದಲ್ಲಿ ಎಸ್‌ಐಎ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.