ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ 71ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ(BJP) ವಿಶೇಷವಾಗಿ ನೆಚ್ಚಿನ ನಾಯಕನ ಹುಟ್ಟುಹಬ್ಬ ಆಚರಣೆ ಮಾಡಲು ಭರ್ಜರಿಯಾಗಿ ತಯಾರಿ ಮಾಡಿಕೊಂಡಿದೆ.
ಪ್ರಮುಖವಾಗಿ 20 ದಿನಗಳ ಕಾಲ ಬೃಹತ್ ಅಭಿಯಾನ ನಡೆಸಲು ನಿರ್ಧಾರ ಮಾಡಿರುವ ಬಿಜೆಪಿ, ಬರೋಬ್ಬರಿ 14 ಕೋಟಿ ಪಡಿತರ ಚೀಲ ವಿತರಣೆಗೆ ಮುಂದಾಗಿದೆ. ಪ್ರಮುಖವಾಗಿ ಕಾಶಿಯ ಭಾರತ ಮಾತಾ ದೇವಸ್ಥಾನದಲ್ಲಿ 71 ಸಾವಿರ ಮಣ್ಣಿನ ದೀಪ ಬೆಳಗಿಸಲು ಕ್ರಮ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ 'ಧನ್ಯವಾದ ಮೋದೀಜಿ' ಎಂದು ಮುದ್ರಣ ಮಾಡಿರುವ 14 ಕೋಟಿ ಪಡಿತರ ಚೀಲ ವಿತರಣೆ ಮಾಡಲಿದೆ.
ಇದರ ಜೊತೆಗೆ ಪ್ರಧಾನಿ ಮೋದಿಯವರ ಫೋಟೋ ಇರುವ 5 ಕೋಟಿ ಪೋಸ್ಟ್ ಕಾರ್ಡ್ ದೇಶಾದ್ಯಂತ ಅಂಚೆ ಕಚೇರಿಗಳಿಂದ ಮೇಲ್ ಮಾಡಲಾಗುತ್ತಿದ್ದು, ಇದರ ಜೊತೆಗೆ ರಕ್ತದಾನ ಶಿಬಿರ, ನದಿಗಳಲ್ಲಿ ಸ್ವಚ್ಛತಾ ಅಭಿಯಾನ ಸೇರಿದಂತೆ ಅನೇಕ ಕಾರ್ಯಕ್ರಮ ಆಯೋಜಿಸಿದೆ. ಪ್ರಮುಖವಾಗಿ 20 ದಿನಗಳ ಮೆಗಾ ಅಭಿಯಾನ ಸೇವಾ ಔರ್ ಸಮರ್ಪನ್ ಆರಂಭಗೊಳ್ಳಲಿದ್ದು, ಅಕ್ಟೋಬರ್ 7ರಂದು ಇಂದು ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: ತಿರುವಿನಲ್ಲಿ ಅಪಾಯಕಾರಿ ಓವರ್‌ಟೇಕ್: ಬಸ್‌ನಡಿ ಬಿದ್ದೆದ್ದು, ಬದುಕಿಬಂದ ಬೈಕ್ ಸವಾರ! ವಿಡಿಯೋ
ಮೋದಿ ಸ್ವೀಕಾರ ಮಾಡಿರುವ ಸ್ಮರಣಿಕೆ, ಉಡುಗೊರೆ ಇ-ಹರಾಜು
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಸ್ವೀಕಾರ ಮಾಡಿರುವ ವಿವಿಧ ಉಡುಗೊರೆ ಮತ್ತು ಸ್ಮರಣಿಕೆಗಳನ್ನು ನಾಳೆಯಿಂದ ಇ-ಹರಾಜು ಹಾಕಲು ಕೇಂದ್ರ ಸಂಸ್ಕೃತಿ ಇಲಾಖೆ ನಿರ್ಧಾರ ಕೈಗೊಂಡಿದೆ. http://pmmementos.gov.in ವೆಬ್ಸೈಟ್ ಮೂಲಕ ಇ-ಹರಾಜಿನಲ್ಲಿ ಭಾಗಿಯಾಗಬಹುದು.
ದೇಶಾದ್ಯಂತ ಕೋವಿಡ್ ವ್ಯಾಕ್ಸಿನೇಷನ್
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ನಾಳೆ ದೇಶಾದ್ಯಂತ ದಾಖಲೆ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಹಾಕಲು ಕೇಂದ್ರ ಸರ್ಕಾರ ತಯಾರಿ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ರಾಜ್ಯಗಳಿಗೂ ಮಾಹಿತಿ ನೀಡಲಾಗಿದೆ. ಹೀಗಾಗಿ ದಾಖಲೆ ಮೀರಿ ವ್ಯಾಕ್ಸಿನ್ ಡೋಸ್ ನೀಡುವ ಸಾಧ್ಯತೆ ಇದೆ.
ಮೂರು ಸಲ ಗುಜರಾತ್ನ ಮುಖ್ಯಮಂತ್ರಿ ಹಾಗೂ ಎರಡು ಅವಧಿಗೆ ದೇಶದ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ಅನೇಕ ಅಭಿವೃದ್ಧಿಪರ ಯೋಜನೆ ಜಾರಿಗೆ ತಂದಿದ್ದು, ಅವುಗಳ ಬಗ್ಗೆ ಬಿಜೆಪಿ ಜನರಿಗೆ ಮನವರಿಕೆ ಮಾಡಿಕೊಡಲು ಮುಂದಾಗಿದೆ.
ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಪ್ರಮುಖವಾಗಿ ಆರ್ಟಿಕಲ್ 370 ರದ್ಧು, ಜನಧನ್ ಯೋಜನೆ, ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದಿದ್ದಾರೆ. ಇದರ ಜೊತೆಗೆ ಕೃಷಿ ಕಾಯ್ದೆ ಯೋಜನೆಯಲ್ಲಿ ಹೆಚ್ಚಿನ ವಿರೋಧಕ್ಕೂ ಗುರಿಯಾಗಿದ್ದಾರೆ.