ನವದೆಹಲಿ : ಹನುಮ ಜಯಂತಿ ಹಿನ್ನೆಲೆ ಪ್ರಧಾನಿ ಮೋದಿ ಅವರು ಗುಜರಾತ್ನ ಮೊರ್ಬಿಯಲ್ಲಿ 108 ಅಡಿ ಎತ್ತರದ ಹನುಮಾನ್ ಪ್ರತಿಮೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪ್ರಧಾನಮಂತ್ರಿ ಕಚೇರಿ, 'ಹನುಮಾನ್ಜಿ ಚಾರ್ಧಾಮ್' ಪ್ರಾಜೆಕ್ಟ್ನ ಅಡಿಯಲ್ಲಿ ದೇಶದ ನಾಲ್ಕು ದಿಕ್ಕುಗಳಲ್ಲಿ ನಿರ್ಮಾಣ ಮಾಡಲಾಗುತ್ತಿರುವ ನಾಲ್ಕು ಹನುಮಾನ್ ಪ್ರತಿಮೆಗಳಲ್ಲಿ ಇದು ಎರಡನೇಯದು ಎಂದು ಸ್ಪಷ್ಟಪಡಿಸಿದೆ.
-
Today, we mark the special occasion of Hanuman Jayanti. In Morbi, at 11 AM, a 108 feet statue of Hanuman ji will be inaugurated. I am honoured to be getting the opportunity to be a part of this programme via video conferencing. https://t.co/qjvLIHWWiO pic.twitter.com/kbHcIxd90Z
— Narendra Modi (@narendramodi) April 16, 2022 " class="align-text-top noRightClick twitterSection" data="
">Today, we mark the special occasion of Hanuman Jayanti. In Morbi, at 11 AM, a 108 feet statue of Hanuman ji will be inaugurated. I am honoured to be getting the opportunity to be a part of this programme via video conferencing. https://t.co/qjvLIHWWiO pic.twitter.com/kbHcIxd90Z
— Narendra Modi (@narendramodi) April 16, 2022Today, we mark the special occasion of Hanuman Jayanti. In Morbi, at 11 AM, a 108 feet statue of Hanuman ji will be inaugurated. I am honoured to be getting the opportunity to be a part of this programme via video conferencing. https://t.co/qjvLIHWWiO pic.twitter.com/kbHcIxd90Z
— Narendra Modi (@narendramodi) April 16, 2022
ಕೆಲವು ವರ್ಷಗಳ ಹಿಂದೆ ಶಿಮ್ಲಾದಲ್ಲಿ ಇದೇ ರೀತಿಯ ಭವ್ಯವಾದ ಹನುಮಾನ್ ಪ್ರತಿಮೆಯನ್ನು ಅನಾವರಣಗೊಳಿಸಿದ್ದೆವು. ಎರಡನೇ ಪ್ರತಿಮೆಯನ್ನು ಇಂದು ಮೊರ್ಬಿಯಲ್ಲಿ ಸ್ಥಾಪಿಸಲಾಗಿದೆ. ರಾಮೇಶ್ವರಂ ಮತ್ತು ಪಶ್ಚಿಮ ಬಂಗಾಳದಲ್ಲಿ ಇನ್ನೂ ಎರಡು ಪ್ರತಿಮೆಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು. ಮೊರ್ಬಿಯಲ್ಲಿರುವ ಬಾಪು ಕೇಶವಾನಂದಜೀ ಅವರ ಆಶ್ರಮದಲ್ಲಿ ಪಶ್ಚಿಮದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
'ಹನುಮಾನ್ಜಿ ಚಾರ್ಧಾಮ್' ಪ್ರಾಜೆಕ್ಟ್ನ ಮೊದಲ ಪ್ರತಿಮೆಯನ್ನು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 2010ರಲ್ಲಿ ಸ್ಥಾಪಿಸಲಾಯಿತು. ಮೂರನೇ ಪ್ರತಿಮೆಯ ಕೆಲಸವು ದಕ್ಷಿಣದಲ್ಲಿ ರಾಮೇಶ್ವರಂನಲ್ಲಿ ಪ್ರಾರಂಭವಾಗಿದೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ. ರಾಮ ಕಥಾವನ್ನು ದೇಶದ ವಿವಿಧ ಭಾಗಗಳಲ್ಲಿ ಆಯೋಜಿಸಲಾಗಿದೆ.
ಯಾವುದೇ ಭಾಷೆ ಅಥವಾ ಉಪಭಾಷೆಯಾಗಿರಲಿ, ರಾಮ್ ಕಥಾದ ಆತ್ಮವು ಎಲ್ಲರನ್ನೂ ಒಂದುಗೂಡಿಸುತ್ತದೆ, ದೇವರ ಮೇಲಿನ ಭಕ್ತಿಯೊಂದಿಗೆ ಒಂದುಗೂಡಿಸುತ್ತದೆ. ಇದು ಭಾರತೀಯ ನಂಬಿಕೆಯ ಶಕ್ತಿ, ನಮ್ಮ ಆಧ್ಯಾತ್ಮಿಕತೆ, ನಮ್ಮ ಸಂಸ್ಕೃತಿ ಮತ್ತು ನಮ್ಮ ಸಂಪ್ರದಾಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್ ನಲ್ಲಿ ಪ್ರಧಾನಿ ಮೋದಿಯಿಂದ 108 ಅಡಿ ಎತ್ತರದ ಹನುಮಾನ್ ಪ್ರತಿಮೆ ಅನಾವರಣ