ETV Bharat / bharat

ಪ್ರಮುಖ್​​ ಸ್ವಾಮಿ ಮಹಾರಾಜರ ಜನ್ಮ ಶತಮಾನೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ - ಈಟಿವಿ ಭಾರತ ಕನ್ನಡ

ಬಿಎಪಿಎಸ್​​ ಸ್ವಾಮಿನಾರಾಯಣ ಸಂಸ್ಥಾನದ ನಾಯಕರಾದ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಶತಾಬ್ದಿ ಮಹೋತ್ಸವವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಕಾರ್ಯಕ್ರಮ ಒಂದು ತಿಂಗಳು ನಡೆಯಲಿದೆ.

pm-modi-to-attend-birth-centenary-celebration-of-pramukh-swami-maharaj-in-ahmedabad
ಪ್ರಮುಖ್​​ ಸ್ವಾಮಿ ಮಹಾರಾಜ ಜನ್ಮ ಶತಮಾನೋತ್ಸವ :ಪ್ರಧಾನಿ ಮೋದಿ ಭಾಗಿ
author img

By

Published : Dec 14, 2022, 10:56 PM IST

ಅಹಮದಾಬಾದ್(ಗುಜರಾತ್​): ಬಿಎಪಿಎಸ್​​ ಸ್ವಾಮಿನಾರಾಯಣ ಸಂಸ್ಥಾನದ ನಾಯಕರಾದ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಶತಾಬ್ದಿ ಮಹೋತ್ಸವ ಕಾರ್ಯಕ್ರಮವನ್ನು ಅಹಮದಾಬಾದ್‌ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಸ್ವಾಮಿನಾರಾಯಣ ಸಂಸ್ಥಾನದ ಮುಂದಾಳುವಾಗಿ ಪ್ರಮುಖ್ ಸ್ವಾಮಿ ಮಹಾರಾಜ್ ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ. ಇವರ ಜನ್ಮ ಶತಾಬ್ದಿ ಹಿನ್ನೆಲೆಯಲ್ಲಿ ಇಲ್ಲಿನ ಓಗಂಜ್ ಪ್ರದೇಶದಲ್ಲಿ 30 ದಿನಗಳ ಕಾಲ ಶತಾಬ್ಧಿ ಮಹೋತ್ಸವ ಆಚರಿಸಲಾಗುತ್ತಿದೆ.

ಈ ಕಾರ್ಯಕ್ರಮ ಡಿಸೆಂಬರ್ 15 ರಿಂದ 2023ರ ಜನವರಿ 15 ರವರೆಗೆ ನಡೆಯಲಿದೆ. ವಿವಿಧ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ವೈಚಾರಿಕ ಕಾರ್ಯಕ್ರಮಗಳು ನಡೆಯಲಿವೆ. ಬಿಎಪಿಎಸ್​​ ಸ್ವಾಮಿನಾರಾಯಣ ಸಂಸ್ಥಾನವನ್ನು 1907 ರಲ್ಲಿ ಶಾಸ್ತ್ರೀಜಿ ಮಹಾರಾಜ್ ಸ್ಥಾಪಿಸಿದ್ದರು. ವೇದಗಳ ಬೋಧನೆಗಳ ಆಧಾರದ ಮೇಲೆ ಮತ್ತು ಆಧ್ಯಾತ್ಮಿಕತೆಯ ಆಧಾರ ಸ್ತಂಭಗಳ ಮೇಲೆ ಇದು ಸ್ಥಾಪಿತವಾಗಿದೆ.

ಇದನ್ನೂ ಓದಿ : ಸಿಬಿಐನಲ್ಲಿ 1,673 ಹುದ್ದೆಗಳು ಖಾಲಿ: ಲೋಕಸಭೆಗೆ ಕೇಂದ್ರ ಸರ್ಕಾರದ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.