ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನುದ್ದೇಶಿಸಿ ಮನ್ ಕೀ ಬಾತ್ನ 75ನೇ ಆವೃತ್ತಿಯಲ್ಲಿ ಮಾತನಾಡಲಿದ್ದು, ಯಾವೆಲ್ಲ ವಿಷಯದ ಬಗ್ಗೆ ಮಾತನಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಬೆಳಗ್ಗೆ 11ಗಂಟೆಗೆ ನಮೋ ಮನ್ ಕೀ ಬಾತ್ನಲ್ಲಿ ಮಾತನಾಡಲಿದ್ದು, ಭಾರತ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ನಮೋ ಮಾತು ಹೆಚ್ಚು ಕುತೂಹಲ ಮೂಡಿಸಿದೆ. 75ನೇ ಆವೃತ್ತಿ ಮನ್ ಕೀ ಬಾತ್ನಲ್ಲಿ ಯಾವೆಲ್ಲ ವಿಷಯದ ಬಗ್ಗೆ ಮಾತನಾಡಬೇಕು ಎಂಬುದರ ಬಗ್ಗೆ ನಮೋ ಈಗಾಗಲೇ ಜನರ ಬಳಿ ಅಭಿಪ್ರಾಯ ಕೇಳಿದ್ದು, ಜೀವನದ ಸ್ಪೂರ್ತಿದಾಯಕ ಸಂಗತಿ, ಆಲೋಚನೆ ಹಚ್ಚಿಸಿಕೊಳ್ಳಲು ಮನವಿ ಮಾಡಿದ್ದಾರೆ.
ಫೆ. 28ರಂದು ಈ ಹಿಂದೆ ಮನ್ ಕೀ ಬಾತ್ನ 74ನೇ ಆವೃತ್ತಿ ಪ್ರಸಾರಗೊಂಡಿತ್ತು. ಈ ವೇಳೆ ಮಾತನಾಡಿದ್ದ ನಮೋ, ನಿಮ್ಮ ನಿಮ್ಮ ಅಭಿಪ್ರಾಯ ಹಂಚಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಆಡಳಿತಕ್ಕೆ ಬಂದಾಗಿನಿಂದಲೂ ತಿಂಗಳ ಕೊನೆಯ ಭಾನುವಾರ ನಮೋ ಮನ್ ಕೀ ಬಾತ್ನಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದಾರೆ. ವಿಶೇಷವೆಂದರೆ ದೇಶ 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿರುವ ಸಂದರ್ಭದಲ್ಲೇ ನಮೋ 75ನೇ ಆವೃತ್ತಿ ಮನ್ ಕೀ ಬಾತ್ನಲ್ಲಿ ಭಾಗಿಯಾಗುತ್ತಿದ್ದು, ಮಹತ್ವದ ವಿಚಾರ ಶೇರ್ ಮಾಡಿಕೊಳ್ಳುವ ಸಾಧ್ಯತೆ ಇದೆ.