ETV Bharat / bharat

ಅಬುಧಾಬಿ ಯುವರಾಜನೊಂದಿಗೆ ಕೊರೊನಾ ಸಾಂಕ್ರಾಮಿಕದ ಬಗ್ಗೆ ಪಿಎಂ ಮೋದಿ ಚರ್ಚೆ

ಭಾರತ - ಯುಎಇ ನಡುವಿನ ಸಹಭಾಗಿತ್ವ ಹೆಚ್ಚಿಸಲು ಮತ್ತು ವೈವಿಧ್ಯಗೊಳಿಸಲು ಬದ್ಧರಾಗಿದ್ದೇವೆ ಎಂದು ಪಿಎಂ ಮೋದಿ ಟ್ವೀಟ್​ ಮಾಡಿದ್ದಾರೆ.

PM Modi speaks to Abu Dhabi crown prince, discusses impact of pandemic
ಅಬುಧಾಬಿ ಯುವರಾಜನೊಂದಿಗೆ ಕೊರೊನಾ ಸಾಂಕ್ರಾಮಿಕದ ಬಗ್ಗೆ ಪಿಎಂ ಮೋದಿ ಚರ್ಚೆ
author img

By

Published : Jan 29, 2021, 9:03 AM IST

ನವದೆಹಲಿ: ಅಬುಧಾಬಿ ಯುವರಾಜ ಹಾಗೂ ಯುಎಇ ಸಶಸ್ತ್ರ ಪಡೆಗಳ ಡೆಪ್ಯೂಟಿ ಸುಪ್ರೀಂ ಕಮಾಂಡರ್​ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಕೊರೊನಾ ಸಾಂಕ್ರಾಮಿಕದ ಕುರಿತು ಚರ್ಚೆ ನಡೆಸಿದ್ದಾರೆ.

ಆರೋಗ್ಯದ ಮಹಾ -ಬಿಕ್ಕಟ್ಟಿನ ನಡುವೆಯೂ ಭಾರತ ಮತ್ತು ಸಂಯುಕ್ತ ಅರಬ್ ಸಂಸ್ಥಾನದ (ಯುನೈಟೆಡ್‌ ಅರಬ್ ಎಮಿರೇಟ್ಸ್ - ಯುಎಇ) ನಡುವಿನ ಸಹಕಾರ ಸ್ಥಗಿತಗೊಂಡಿರಲಿಲ್ಲ ಎಂದು ಇಬ್ಬರು ನಾಯಕರೂ ಸಂತೋಷ ವ್ಯಕ್ತಪಡಿಸಿದ್ದಾರೆ. ವ್ಯಾಪಾರ ಹಾಗೂ ಹೂಡಿಕೆಯನ್ನು ಹೆಚ್ಚಿಸುವ ಕುರಿತು ಚರ್ಚಿಸಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

  • Had a warm telephone conversation with my friend Sheikh @MohamedBinZayed. Thanked him for his personal attention to the well-being of Indians in UAE. Even the pandemic has not slowed India-UAE cooperation, and we agreed to continue enhancing and diversifying our partnership.

    — Narendra Modi (@narendramodi) January 28, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯವು 'ವಿಶ್ವದ ಬಹುದೊಡ್ಡ ಆಸ್ತಿ': ವಿಶ್ವಸಂಸ್ಥೆ ಬಣ್ಣನೆ

ಈ ಬಗ್ಗೆ ಟ್ವೀಟ್​ ಮಾಡಿರುವ ಪಿಎಂ ಮೋದಿ, ಯುಎಇನಲ್ಲಿರುವ ಭಾರತೀಯರ ಯೋಗ ಕ್ಷೇಮದ ಬಗ್ಗೆ ಗಮನ ನೀಡಿದ್ದಕ್ಕೆ ಶೇಖ್ ಮೊಹಮ್ಮದ್ ಅವರಿಗೆ ಧನ್ಯವಾದಗಳು. ಸಾಂಕ್ರಾಮಿಕಕ್ಕೆ ಕೂಡ ಭಾರತ - ಯುಎಇ ನಡುವಿನ ಸಹಕಾರ ಕಡಿಮೆ ಮಾಡಲು ಸಾಧ್ಯವಾಗಿಲ್ಲ. ನಮ್ಮ ಸಹಭಾಗಿತ್ವ ಹೆಚ್ಚಿಸಲು ಮತ್ತು ವೈವಿಧ್ಯಗೊಳಿಸಲು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.