ETV Bharat / bharat

RBI Schemes- ಆರ್​ಬಿಐನ ಹೊಸ ಯೋಜನೆಗಳಿಗೆ ಪಿಎಂ ಮೋದಿ ಚಾಲನೆ - ಆರ್​ಬಿಐ ಗವರ್ನರ್​ ಶಕ್ತಿಕಾಂತ ದಾಸ್

ರಿಟೇಲ್​ ಡೈರೆಕ್ಟ್ ಹಾಗೂ ಇಂಟಿಗ್ರೇಟೆಡ್ ಒಂಬುಡ್ಸಮನ್ ಎಂಬ ಆರ್​ಬಿಐನ ಎರಡು ನೂತನ ಯೋಜನೆಗಳಿಗೆ ಪಿಎಂ ಮೋದಿ ಚಾಲನೆ ನೀಡಿದ್ದಾರೆ.

RBI Schemes
RBI Schemes
author img

By

Published : Nov 12, 2021, 12:28 PM IST

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ (Reserve Bank of India)ನ ಎರಡು ಗ್ರಾಹಕ-ಕೇಂದ್ರಿತ ಯೋಜನೆಗಳಾದ - ರಿಟೇಲ್​ ಡೈರೆಕ್ಟ್ ​(Retail Direct Scheme) ಮತ್ತು ​ಇಂಟಿಗ್ರೇಟೆಡ್ ಒಂಬುಡ್ಸಮನ್​ ಯೋಜನೆಗಳಿಗೆ ( Integrated Ombudsman Scheme) ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ ನೀಡಿದರು.

ಸರ್ಕಾರಿ ಭದ್ರತೆಯೊಂದಿಗೆ ನೇರ ಹೂಡಿಕೆ

ರಿಟೇಲ್​ ಡೈರೆಕ್ಟ್ ಯೋಜನೆ - ಇದು ಚಿಲ್ಲರೆ ಹೂಡಿಕೆದಾರರಿಗೆ ಸರ್ಕಾರಿ ಭದ್ರತೆಯೊಂದಿಗೆ ಮಾರುಕಟ್ಟೆಗೆ ಪ್ರವೇಶ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿದ ಭದ್ರತೆಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಇದು ಅವರಿಗೆ ಹೊಸ ಮಾರ್ಗ ನೀಡುತ್ತದೆ. ಹೂಡಿಕೆದಾರರು ಆರ್‌ಬಿಐನಲ್ಲಿ ತಮ್ಮ ಸರ್ಕಾರಿ ಭದ್ರತೆಗಳ ಖಾತೆಯನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ತೆರೆಯಲು ಮತ್ತು ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ.

'ಒಂದು ರಾಷ್ಟ್ರ - ಒಂದು ಒಂಬುಡ್ಸ್‌ಮನ್'

ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಸ್ಕೀಮ್- ಇದು ಆರ್‌ಬಿಐನಿಂದ ನಿಯಂತ್ರಿಸಲ್ಪಡುವ ಘಟಕಗಳ ವಿರುದ್ಧ ಗ್ರಾಹಕರ ದೂರುಗಳನ್ನು, ಕುಂದುಕೊರತೆಗಳನ್ನು ಪರಿಹರಿಸುವ ಕಾರ್ಯವಿಧಾನವನ್ನು ಇನ್ನಷ್ಟು ಸುಧಾರಿಸುವ ಗುರಿ ಹೊಂದಿದೆ.

'ಒಂದು ರಾಷ್ಟ್ರ-ಒಂದು ಒಂಬುಡ್ಸ್‌ಮನ್' ಅನ್ನು ಈ ಯೋಜನೆ ಆಧರಿಸಿದ್ದು, ಗ್ರಾಹಕರು ಒಂದೇ ಪೋರ್ಟಲ್, ಒಂದೇ ಇಮೇಲ್ ಮತ್ತು ಒಂದೇ ವಿಳಾಸದೊಂದಿಗೆ ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ. ಗ್ರಾಹಕರು ತಮ್ಮ ದೂರುಗಳನ್ನು ಸಲ್ಲಿಸಲು, ದಾಖಲೆಗಳನ್ನು ಸಲ್ಲಿಸಲು, ಅದನ್ನು ಟ್ರ್ಯಾಕ್ ಮಾಡಲು ಮತ್ತು ಪ್ರತಿಕ್ರಿಯೆ ನೀಡಲು ಒಂದೇ ಪಾಯಿಂಟ್ ಆಫ್ ರೆಫೆರೆನ್ಸ್ ಇರುತ್ತದೆ. ಬಹು-ಭಾಷಾ ಟೋಲ್ - ಫ್ರೀ ಸಂಖ್ಯೆಯು ದೂರುಗಳನ್ನು ಸಲ್ಲಿಸಲು ಸಹಾಯ ಮಾಡುವ ಎಲ್ಲ ಸಂಬಂಧಿತ ಮಾಹಿತಿಯನ್ನು ಒದಗಿಸುತ್ತದೆ.

ಇದನ್ನೂ ಓದಿ: Gold Price.. ಏರಿಕೆಯತ್ತ ಮುಖ ಮಾಡಿದ ಚಿನ್ನ-ಬೆಳ್ಳಿ: ಬೆಂಗಳೂರಿನಲ್ಲೂ ತುಟ್ಟಿಯಾದ ಬಂಗಾರ

ನೂತನ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪಿಎಂ ಮೋದಿ, ಹಣಕಾಸು ವ್ಯವಸ್ಥೆ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಬಹು ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಈ ಯೋಜನೆಗಳು ದೇಶದಲ್ಲಿ ಹೂಡಿಕೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ ಮತ್ತು ಹೂಡಿಕೆದಾರರಿಗೆ ಬಂಡವಾಳ ಮಾರುಕಟ್ಟೆಗಳಿಗೆ ಪ್ರವೇಶ ಸುಲಭ ಮತ್ತು ಹೆಚ್ಚು ಸುರಕ್ಷಿತಗೊಳಿಸುತ್ತದೆ ಎಂದು ಹೇಳಿದರು.

ಹಣಕಾಸು ವ್ಯವಸ್ಥೆಗೆ ಉತ್ತೇಜನ

ಇನ್ನು ಈ ಬಗ್ಗೆ ಮಾತನಾಡಿದ ಆರ್​ಬಿಐ ಗವರ್ನರ್​ ಶಕ್ತಿಕಾಂತ ದಾಸ್ (RBI Governor Shaktikanta Das) , ಆರ್‌ಬಿಐ ತನ್ನ ಸೇವೆಗಳ ದಕ್ಷತೆಯನ್ನು ಹೆಚ್ಚಿಸಲು ತಂತ್ರಜ್ಞಾನ ಮತ್ತು ನಾವೀನ್ಯತೆಗಳನ್ನು ಬಳಸಿಕೊಳ್ಳುತ್ತಿದೆ. ಆರ್‌ಬಿಐನ ಅಭಿವೃದ್ಧಿಯ ಪಾತ್ರವು ಆರ್ಥಿಕತೆ ಮತ್ತಷ್ಟು ಗಟ್ಟಿಗೊಳಿಸುವುದರ ಮೇಲೆ ಕೇಂದ್ರೀಕೃತವಾಗಿದೆ ಮತ್ತು ಜನಕೇಂದ್ರಿತ ಉಪಕ್ರಮಗಳನ್ನು ತಾವು ಕೈಗೊಳ್ಳುತ್ತಿದ್ದೇವೆ. ಈ ಯೋಜನೆಗಳು ಸ್ಪಂದಿಸುವ ಹಣಕಾಸು ವ್ಯವಸ್ಥೆಗೆ ಉತ್ತೇಜನ ನೀಡುತ್ತವೆ ಎಂದು ಅವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.