ಢಾಕಾ (ಬಾಂಗ್ಲಾದೇಶ) : ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶೇಖ್ ಹಸೀನಾ ಅವರೊಂದಿಗೆ ಇಲ್ಲಿನ ರಾಷ್ಟ್ರೀಯ ಪರೇಡ್ ಮೈದಾನಕ್ಕೆ ಆಗಮಿಸಿದ್ದಾರೆ.
ಈ ಹಿಂದೆ ಪ್ರಧಾನಿ ಮೋದಿ ಮತ್ತು ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಬಾಂಗ್ಲಾದೇಶದ ರಾಜಧಾನಿಯಲ್ಲಿ ಮಾತುಕತೆ ನಡೆಸಿದ್ದರು. ಇನ್ನು ವಿದೇಶಾಂಗ ಸಚಿವಾಲಯದ ಪ್ರಕಾರ, ಪ್ರಧಾನಿ ಮೋದಿ ಅವರು ಬಾಂಗ್ಲಾದೇಶದ ಅಲ್ಪಸಂಖ್ಯಾತರ ಪ್ರತಿನಿಧಿಗಳು, ಮುಕ್ತಿಜೋಧರುಗಳು, ಭಾರತದ ಸ್ನೇಹಿತರು ಮತ್ತು ಯುವ ಪ್ರತಿಭೆಗಳು ಸೇರಿದಂತೆ ಹಲವಾರು ಸಮುದಾಯದ ಮುಖಂಡರನ್ನು ಭೇಟಿಯಾಗಿದ್ದಾರೆ.
-
At Savar, PM @narendramodi planted an Arjuna Tree sapling. This sapling has been planted as a mark of respect for the valorous martyrs of Bangladesh. pic.twitter.com/lknP2ZllDP
— PMO India (@PMOIndia) March 26, 2021 " class="align-text-top noRightClick twitterSection" data="
">At Savar, PM @narendramodi planted an Arjuna Tree sapling. This sapling has been planted as a mark of respect for the valorous martyrs of Bangladesh. pic.twitter.com/lknP2ZllDP
— PMO India (@PMOIndia) March 26, 2021At Savar, PM @narendramodi planted an Arjuna Tree sapling. This sapling has been planted as a mark of respect for the valorous martyrs of Bangladesh. pic.twitter.com/lknP2ZllDP
— PMO India (@PMOIndia) March 26, 2021
ಬಾಂಗ್ಲಾದೇಶದ ಸ್ವಾತಂತ್ರ್ಯದ 50ನೇ ವರ್ಷಾಚರಣೆಯ ಕಾರ್ಯಕ್ರಮಕ್ಕಾಗಿ ಪಶ್ಚಿಮ ಬಂಗಾಳದ ಇಬ್ಬರು ಪ್ರಖ್ಯಾತ ಕಲಾವಿದರನ್ನು ಢಾಕಾಗೆ ಆಹ್ವಾನಿಸಲಾಗಿದೆ. ಭಾರತದೊಂದಿಗೆ 50 ವರ್ಷಗಳ ಹಳೆಯ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವ ಬಾಂಗ್ಲಾದೇಶ ಸರ್ಕಾರವು ತನ್ನ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಆಚರಣೆಯಲ್ಲಿ ಭಾಗವಹಿಸಲು ಮೋದಿಯನ್ನು ಆಹ್ವಾನಿಸಿತ್ತು.
ಹಾಗೆಯೇ ಇದೇ ವೇಳೆ ಬಾಂಗ್ಲಾದೇಶವು ತನ್ನ ರಾಷ್ಟ್ರದ ಪಿತಾಮಹ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದೆ.