ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ರಾಜಕೀಯ ಗಣ್ಯರು ಹಿಂದೂ ಧರ್ಮದ ಪವಿತ್ರ ಆಷಾಢ ಏಕಾದಶಿ ಹಾಗು ಸಾಮರಸ್ಯ, ಸಮಾನತೆಗೆ ಒತ್ತು ನೀಡುವ ಮುಸ್ಲಿಮರ ಪ್ರಮುಖ ಹಬ್ಬ ಈದ್-ಉಲ್-ಅಧಾ ಅಂಗವಾಗಿ ಜನತೆಗೆ ಶುಭ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ, ಆಷಾಢ ಏಕಾದಶಿಯ ಈ ಪವಿತ್ರ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ನನ್ನ ಶುಭಾಶಯಗಳು. ಈ ವಿಶೇಷ ದಿನ ಭಗವಂತ ವಿಠಲ ನಮ್ಮೆಲ್ಲರಿಗೂ ಹೇರಳವಾದ ಸಂತೋಷ ಮತ್ತು ಉತ್ತಮ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸೋಣ. ಧಾರ್ಮಿಕ ಚಳವಳಿ ನಮ್ಮ ಉತ್ತಮ ಸಂಪ್ರದಾಯವನ್ನು ಪ್ರತಿನಿಧಿಸುತ್ತದೆ ಮತ್ತು ಸಾಮರಸ್ಯ ಹಾಗೂ ಸಮಾನತೆಗೆ ಒತ್ತು ನೀಡುತ್ತದೆ. ಹಿಂದಿನ ಮನ್ ಕಿ ಬಾತ್‌ನಲ್ಲಿ ನಾವು ದೈವಿಕತೆಯ ಬಗ್ಗೆ ಮಾತನಾಡಿದ್ದೇವೆ ಎಂದು ತಿಳಿಸಿ ಮಾಸಿಕ ರೇಡಿಯೊ ಕಾರ್ಯಕ್ರಮದ ಕ್ಲಿಪ್ ಹಂಚಿಕೊಂಡಿದ್ದಾರೆ.
-
Greetings on the sacred occasion of Ashadhi Ekadashi. May the blessings of Bhagwan Vitthal remain upon us and further spirit of happiness in our society. Sharing a snippet from an earlier #MannKiBaat in which we talked about the Warkari tradition and the divinity of Pandharpur. pic.twitter.com/HvuHqXDMwJ
— Narendra Modi (@narendramodi) July 10, 2022 " class="align-text-top noRightClick twitterSection" data="
">Greetings on the sacred occasion of Ashadhi Ekadashi. May the blessings of Bhagwan Vitthal remain upon us and further spirit of happiness in our society. Sharing a snippet from an earlier #MannKiBaat in which we talked about the Warkari tradition and the divinity of Pandharpur. pic.twitter.com/HvuHqXDMwJ
— Narendra Modi (@narendramodi) July 10, 2022Greetings on the sacred occasion of Ashadhi Ekadashi. May the blessings of Bhagwan Vitthal remain upon us and further spirit of happiness in our society. Sharing a snippet from an earlier #MannKiBaat in which we talked about the Warkari tradition and the divinity of Pandharpur. pic.twitter.com/HvuHqXDMwJ
— Narendra Modi (@narendramodi) July 10, 2022
ಮತ್ತೊಂದು ಟ್ವೀಟ್‌ನಲ್ಲಿ, ಈದ್ ಮುಬಾರಕ್, ಈದ್-ಉಲ್-ಅಧಾ ಶುಭಾಶಯಗಳು. ಈ ಹಬ್ಬವು ಮಾನವ ಕುಲದ ಒಳಿತು, ಸಾಮೂಹಿಕ ಯೋಗಕ್ಷೇಮ ಹಾಗು ಸಮೃದ್ಧಿಯ ಮನೋಭಾವವನ್ನು ಹೆಚ್ಚಿಸುವ ಕೆಲಸ ಮಾಡಲು ನಮಗೆ ಸ್ಫೂರ್ತಿ ನೀಡಲಿ ಎಂದು ಹೇಳಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಟ್ವೀಟ್ ಮಾಡಿ ಶುಭ ಕಾಮನೆ ತಿಳಿಸಿದ್ದಾರೆ.
-
Eid Mubarak! Greetings on Eid-ul-Adha. May this festival inspire us to work towards furthering the spirit of collective well-being and prosperity for the good of humankind.
— Narendra Modi (@narendramodi) July 10, 2022 " class="align-text-top noRightClick twitterSection" data="
">Eid Mubarak! Greetings on Eid-ul-Adha. May this festival inspire us to work towards furthering the spirit of collective well-being and prosperity for the good of humankind.
— Narendra Modi (@narendramodi) July 10, 2022Eid Mubarak! Greetings on Eid-ul-Adha. May this festival inspire us to work towards furthering the spirit of collective well-being and prosperity for the good of humankind.
— Narendra Modi (@narendramodi) July 10, 2022
ಈದ್-ಉಲ್-ಅಧಾ ಹಬ್ಬದ ವಿಶೇಷತೆ: ಈ ಹಬ್ಬವನ್ನು ಮುಸ್ಲಿಮರು ಮೂರು ದಿನಗಳ ಕಾಲ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಸೌದಿ ಅರೇಬಿಯಾದಲ್ಲಿರುವ ಪವಿತ್ರ ಮೆಕ್ಕಾ ತೀರ್ಥಯಾತ್ರೆಯ ಹಜ್‍ನ ಕೊನೆಯ ದಿನದಂದು ಹಬ್ಬವನ್ನು ಆಚರಿಸಲಾಗುತ್ತದೆ.
ಆಷಾಢ ಏಕಾದಶಿ ವಿಶೇಷತೆ: ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಮಹತ್ವವಿದೆ. ಏಕಾದಶಿ ತಿಥಿಯು ಭಗವಾನ್ ವಿಷ್ಣುವಿಗೆ ಸಮರ್ಪಿತ. ಈ ದಿನದಂದು ಭಗವಾನ್ ವಿಷ್ಣುವನ್ನು ನೇಮ ನಿಷ್ಠೆಯಿಂದ ಪೂಜಿಸಲಾಗುತ್ತದೆ. ಏಕಾದಶಿ ಉಪವಾಸವು ಮರಣಾನಂತರ ಮೋಕ್ಷಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ. ಅದರಲ್ಲೂ ಮಹಾರಾಷ್ಟ್ರದ ವಿಠ್ಠಲನ ಅನುಯಾಯಿಗಳು ವಿಶೇಷ ಗೌರವದಿಂದ ಆಷಾಢ ಏಕಾದಶಿ ಆಚರಿಸುವರು. ಇಂದು ಭಗವಾನ್ ವಿಠ್ಠಲ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತಿವೆ.
ಇದನ್ನೂ ಓದಿ: ವಾರ್ಷಿಕ ಪ್ರವಾಸದ ನಂತರ ನಿವಾಸಕ್ಕೆ ಮರಳಿದ ಜಗನ್ನಾಥ - ಬಲಭದ್ರ ದೇವ ಮತ್ತು ಸಹೋದರಿ ದೇವಿ ಸುಭದ್ರಾ