ನವದೆಹಲಿ: ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಶ್ರೀಗಂಧದಿಂದ ತಯಾರಿಸಿದ ವಿಶೇಷ 'ಗೌತಮ ಬುದ್ಧನ ಮೂರ್ತಿ'ಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಿಶಿಡಾ ಎರಡು ದಿನಗಳ ಭಾರತ ಭೇಟಿಯಲ್ಲಿದ್ದಾರೆ. ಈ ಕಲಾಕೃತಿಯು ಕರ್ನಾಟಕದ ಶ್ರೀಮಂತ ಕಲಾ ಪರಂಪರೆಯನ್ನು ಪ್ರತಿನಿಧಿಸುತ್ತದೆ.
ಗಿಫ್ಟ್ ವಿಶೇಷತೆ: ಶ್ರೀಗಂಧದ ಬುದ್ಧನ ಪ್ರತಿಮೆ ಮತ್ತು ಪೆಟ್ಟಿಗೆಯನ್ನು ಕರ್ನಾಟಕದ ಕುಶಲಕರ್ಮಿಗಳು ಕೈಗಳಿಂದಲೇ ಸುಂದರವಾಗಿ ನಿರ್ಮಿಸಿದ್ದಾರೆ. ಬುದ್ಧ ಬೋಧಿ ವೃಕ್ಷದ ಕೆಳಗೆ 'ಧ್ಯಾನ ಮುದ್ರೆ'ಯಲ್ಲಿರುವ ಭಂಗಿಯಲ್ಲಿ ಇದನ್ನು ಕೆತ್ತಲಾಗಿದೆ. ಕದಂಬ ಮರದಿಂದ ಮಾಡಿದ ಜಾಲಿ ಪೆಟ್ಟಿಗೆಯಲ್ಲಿ ಪ್ರತಿಮೆಯನ್ನು ಇರಿಸಲಾಗಿದೆ. ಕದಂಬ ಮರವನ್ನು ಭಾರತೀಯ ಸಂಸ್ಕೃತಿಯಲ್ಲಿ ಶುಭ ಎಂದು ಪರಿಗಣಿಸಲಾಗಿದೆ. ಕದಂಬ ಮರದ ಪೆಟ್ಟಿಗೆಯನ್ನು ಕೂಡಾ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನೂ ಕೂಡ ಸಾಂಪ್ರದಾಯಿಕ ಕಲಾವಿದರು ಕೈಯಿಂದಲೇ ರಚಿಸಿದ್ದಾರೆ. ಪ್ರಾಣಿ-ಪಕ್ಷಿಗಳು ಮತ್ತು ಅನೇಕ ನೈಸರ್ಗಿಕ ದೃಶ್ಯಗಳನ್ನು ಈ ಪೆಟ್ಟಿಗೆಯ ಮೇಲೆ ಅದ್ಭುತವಾಗಿ ಕೆತ್ತಿರುವುದನ್ನು ನೋಡಬಹುದು.
ಶ್ರೀಗಂಧ ಭಾರತದ ಶ್ರೇಷ್ಠ ಮರ. ಶತಮಾನಗಳಿಂದ ದೇಶದ ಶ್ರೀಮಂತ ಸಂಸ್ಕೃತಿಯ ಭಾಗ. ವಿಶ್ವದ ಅಮೂಲ್ಯ ಮರಗಳಲ್ಲಿ ಒಂದೆಂದೂ ಪರಿಗಣಿಸಲಾಗಿದೆ. ಆಯುರ್ವೇದದಲ್ಲಿಯೂ ಶ್ರೀಗಂಧ ಪ್ರಮುಖ ಸ್ಥಾನ ಹೊಂದಿದೆ. ಇದರಿಂದ ಸಾಕಷ್ಟು ಔಷಧೀಯ ಮತ್ತು ಆಧ್ಯಾತ್ಮಿಕ ಉಪಯೋಗಗಳಿವೆ. ವಿಗ್ರಹಗಳನ್ನು ತಯಾರಿಕೆ ಮತ್ತು ದೇವಾಲಯ, ಧಾರ್ಮಿಕ ಸ್ಥಳಗಳನ್ನು ಕೆತ್ತಲು ಶ್ರೀಗಂಧವನ್ನು ಅನಾದಿ ಕಾಲದಿಂದಲೂ ಬಳಸಲಾಗುತ್ತಿದೆ.
ಉಡುಗೊರೆ ನೀಡಿದ್ದು ಇದು ಮೊದಲಲ್ಲ: ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ನಾಯಕರಿಗೆ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಿದ್ದು ಇದು ಮೊದಲಲ್ಲ. ಫೆ.27 ರಂದು ನವದೆಹಲಿಗೆ ಭೇಟಿ ನೀಡಿದ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರಿಗೆ ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಶೇಶ ಸಾಂಪ್ರದಾಯಿಕ ಶಾಲು ಉಡುಗೊರೆಯಾಗಿ ನೀಡಿದ್ದರು. ಕಳೆದ ವರ್ಷ ನ.15 ಮತ್ತು 16 ರಂದು ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಭೇಟಿಯಾದ ವಿದೇಶಿ ನಾಯಕರಿಗೆ ಪ್ರಧಾನಿ ಅವರು ಗುಜರಾತ್‌ನ ಸಾಂಪ್ರದಾಯಿಕ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಿದ್ದರು. ಯುಕೆಯ ನೂತನ ಪ್ರಧಾನ ಮಂತ್ರಿ ರಿಷಿ ಸುನಕ್ ಅವರಿಗೆ ಗುಜರಾತ್‌ನಲ್ಲಿ ತಯಾರಿಸಿದ ಕೈಯಿಂದ ಮಾಡಿದ, "ಮಾತಾ ನಿ ಪಚೇಡಿ"(ಗುಜರಾತನ ಕೈಮಗ್ಗದ ಜವಳಿ) ಉಡುಗೊರೆಯಾಗಿ ಕೊಟ್ಟಿದ್ದರು.
ಇದನ್ನೂ ಓದಿ: ಜಿ 20 ಶೃಂಗಸಭೆಯಲ್ಲಿ ಜಾಗತಿಕ ನಾಯಕರಿಗೆ ಗುಜರಾತ್- ಹಿಮಾಚಲ ಪ್ರದೇಶದ ಕಲಾಕೃತಿಗಳನ್ನು ಉಡುಗೊರೆ ನೀಡಿದ ಪ್ರಧಾನಿ ಮೋದಿ
ರಾಜ್ಯ ನಾಯಕರಿಂದ ಶ್ಲಾಘನೆ: ಕರ್ನಾಟಕದ ಆಡಳಿತಾರೂಢ ಬಿಜೆಪಿ ನಾಯಕರು ಶನಿವಾರ ಟ್ವಿಟರ್‌ನಲ್ಲಿ ಜಪಾನ್ ಪ್ರಧಾನಿಗೆ ರಾಜ್ಯದ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಿದ ಪ್ರಧಾನಿಯನ್ನು ಶ್ಲಾಘಿಸಿದ್ದಾರೆ. ಭಾರತ-ಜಪಾನ್ ದ್ವಿಪಕ್ಷೀಯ ಸಂಬಂಧಗಳ ಮೇಲೆ ಕರ್ನಾಟಕ ಶ್ರೀಗಂಧದ ಸುಗಂಧವನ್ನು ಹರಡಿದ್ದಕ್ಕಾಗಿ ಪ್ರಧಾನಿಗೆ ಧನ್ಯವಾದಗಳು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದಾರೆ.
-
Thanks to PM @narendramodi ji for spreading the fragrance of Karnataka sandalwood over India-Japan bilateral relations.
— Pralhad Joshi (@JoshiPralhad) March 20, 2023 " class="align-text-top noRightClick twitterSection" data="
Modi ji has gifted a Buddha Statue made from Karnataka sandalwood to Japanese PM Fumio Kishida. The 2 nations will bloom with the soft scent of sandalwood. pic.twitter.com/fpVwk5uo5o
">Thanks to PM @narendramodi ji for spreading the fragrance of Karnataka sandalwood over India-Japan bilateral relations.
— Pralhad Joshi (@JoshiPralhad) March 20, 2023
Modi ji has gifted a Buddha Statue made from Karnataka sandalwood to Japanese PM Fumio Kishida. The 2 nations will bloom with the soft scent of sandalwood. pic.twitter.com/fpVwk5uo5oThanks to PM @narendramodi ji for spreading the fragrance of Karnataka sandalwood over India-Japan bilateral relations.
— Pralhad Joshi (@JoshiPralhad) March 20, 2023
Modi ji has gifted a Buddha Statue made from Karnataka sandalwood to Japanese PM Fumio Kishida. The 2 nations will bloom with the soft scent of sandalwood. pic.twitter.com/fpVwk5uo5o
"ಶ್ರೀಗಂಧದಿಂದ ತಯಾರಿಸಲ್ಪಟ್ಟ ಭಗವಾನ್ ಬುದ್ಧನ ಪ್ರತಿಮೆಯನ್ನು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾರಿಗೆ ಉಡುಗೊರೆಯಾಗಿ ನೀಡಿ, ಮೋದಿ ಭಾರತ ಹಾಗೂ ಜಪಾನ್ ಸಂಬಂಧವನ್ನು ಸುಗಂಧಭರಿತವಾಗಿಸಿದ್ದಾರೆ.ನಮ್ಮ ನೆಲದ ಸುಗಂಧ ಜಪಾನಿನಲ್ಲಿ ಕೂಡ ಪಸರಿಸುವಂತೆ ಮಾಡಿದ ಮೋದಿಯವರಿಗೆ ರಾಜ್ಯದ ಪರವಾಗಿ ಹೃದಯಪೂರ್ವಕ ಧನ್ಯವಾದಗಳು. ಎರಡು ದೇಶಗಳ ನಡುವಿನ ಸಂಬಂಧ ಕೂಡ ಶ್ರೀಗಂಧದ ಸುಂಗಧದಂತಿರಲಿ ಹಾಗೂ ಈ ದ್ವಿಪಕ್ಷೀಯ ಸಂಬಂಧ ಅಭೂತಪೂರ್ವ ಅಭಿವೃದ್ಧಿ ಹೊಂದಲಿ"— ಪ್ರಲ್ಹಾದ್ ಜೋಶಿ
-
Namma Karnataka's timeless artistry.
— Shobha Karandlaje (@ShobhaBJP) March 20, 2023 " class="align-text-top noRightClick twitterSection" data="
Exquisite sandalwood carvings from Karnataka feature in PM Sri @narendramodi Ji's gift to Japanese PM Fumio Kishida.
The sandalwood Buddha statue is a cultural marvel and a sign of goodwill. pic.twitter.com/hJwyOxow4O
">Namma Karnataka's timeless artistry.
— Shobha Karandlaje (@ShobhaBJP) March 20, 2023
Exquisite sandalwood carvings from Karnataka feature in PM Sri @narendramodi Ji's gift to Japanese PM Fumio Kishida.
The sandalwood Buddha statue is a cultural marvel and a sign of goodwill. pic.twitter.com/hJwyOxow4ONamma Karnataka's timeless artistry.
— Shobha Karandlaje (@ShobhaBJP) March 20, 2023
Exquisite sandalwood carvings from Karnataka feature in PM Sri @narendramodi Ji's gift to Japanese PM Fumio Kishida.
The sandalwood Buddha statue is a cultural marvel and a sign of goodwill. pic.twitter.com/hJwyOxow4O
"ನಮ್ಮ ಕರ್ನಾಟಕದ ಕಾಲಾತೀತ ಕಲಾವಂತಿಕೆ. ಜಪಾನಿನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆಯಲ್ಲಿ ಕರ್ನಾಟಕದ ಸೊಗಸಾದ ಶ್ರೀಗಂಧದ ಕೆತ್ತನೆಗಳು ಕಾಣಿಸಿಕೊಂಡಿವೆ. ಶ್ರೀಗಂಧದ ಬುದ್ಧನ ಪ್ರತಿಮೆಯು ಸಾಂಸ್ಕೃತಿಕ ಅದ್ಭುತ ಮತ್ತು ಸದ್ಭಾವನೆಯ ಸಂಕೇತವಾಗಿದೆ".—ಶೋಭಾ ಕರಂದ್ಲಾಜೆ.
ಫ್ಯೂಮಿಯೊ ಕಿಶಿಡಾ ಸೋಮವಾರ(ನಿನ್ನೆ) ಭಾರತಕ್ಕೆ ಆಗಮಿಸಿದ್ದಾರೆ. ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಬಳಿಕ ಇಬ್ಬರು ನಾಯಕರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿದೆ. ಈ ಸಂದರ್ಭದಲ್ಲಿ ಒಟ್ಟಿಗೆ ಶಸ್ತ್ರಾಸ್ತ್ರಗಳನ್ನು ನಿರ್ಮಾಣ ಮಾಡುವುದು ಸೇರಿದಂತೆ ಅನೇಕ ವಿಷಯಗಳ ಕುರಿತು ಮಾತುಕತೆ ನಡೆಸಲಾಗಿದೆ.
ಇದನ್ನೂ ಓದಿ: ದೆಹಲಿಗೆ ಜಪಾನ್ ಪ್ರಧಾನಿ ಆಗಮನ: ಪಂಚೆಯುಟ್ಟು ಸಾಂಪ್ರದಾಯಿಕವಾಗಿ ಸ್ವಾಗತಿಸಿದ ಸಚಿವ ರಾಜೀವ್ ಚಂದ್ರಶೇಖರ್