ETV Bharat / bharat

ನನ್ನ ಇಮೇಜ್ ಕೆಡಿಸಲು ಸುಪಾರಿ ಕೊಟ್ಟಿದ್ದಾರೆ: ಪ್ರಧಾನಿ ಮೋದಿ ಗಂಭೀರ ಆರೋಪ - ವಂದೇ ಭಾರತ್ ಎಕ್ಸ್‌ಪ್ರೆಸ್‌

ಭೋಪಾಲ್-ನವದೆಹಲಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ.

Vande Bharat Express
ವಂದೇ ಭಾರತ್ ಎಕ್ಸ್‌ಪ್ರೆಸ್​ಗೆ ಹಸಿರುವ ನಿಶಾನೆ ತೋರಿಸಿದ ಪ್ರಧಾನಿ ನರೇಂದ್ರ ಮೋದಿ
author img

By

Published : Apr 1, 2023, 6:23 PM IST

ಭೋಪಾಲ್ (ಮಧ್ಯಪ್ರದೇಶ): ''ನನ್ನ ಇಮೇಜ್ ಕೆಡಿಸಲು ಕೆಲವರು ನರಕಯಾತನೆ ಪಡುತ್ತಿದ್ದಾರೆ, ಜೊತೆಗೆ ಸುಪಾರಿಯನ್ನೂ ಕೊಟ್ಟಿದ್ದಾರೆ'' ಎಂದು ಪ್ರಧಾನಿ ನರೇಂದ್ರ ಮೋದಿ ದೂರಿದರು. ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ ನಂತರ, ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. "ಹಿಂದೆ, ಸರ್ಕಾರಗಳು ವೋಟ್ ಬ್ಯಾಂಕ್​ನ ಓಲೈಕೆಯಲ್ಲಿ ನಿರತವಾಗಿದ್ದವು. ಆದರೆ, ನಾವು ಜನರನ್ನು ತೃಪ್ತಿಪಡಿಸುವಲ್ಲಿ ನಿರತರಾಗಿದ್ದೇವೆ" ಎಂದು ಪ್ರಧಾನಿ ಮೋದಿ ಹೇಳಿದರು.

"ಅವರು (ಹಿಂದಿನ ಸರ್ಕಾರಗಳು) ಒಂದು ಕುಟುಂಬವನ್ನು ದೇಶದ ಮೊದಲ ಕುಟುಂಬವೆಂದು ಪರಿಗಣಿಸಿದರು. ಜೊತೆಗೆ ಬಡ ಮತ್ತು ಮಧ್ಯಮ ವರ್ಗವನ್ನೂ ಕಡೆಗಣಿಸಿದರು. ರೈಲ್ವೆ ಇದಕ್ಕೆ ಜೀವಂತ ಉದಾಹರಣೆಯಾಗಿದೆ". ''ಕೆಲವರು ತಮ್ಮ ಇಮೇಜ್ ಹಾಳು ಮಾಡಲು ನರಕಯಾತನೆ ಅನುಭವಿಸುತ್ತಿದ್ದಾರೆ. ದೇಶದೊಳಗೆ ಮತ್ತು ಹೊರಗಿನ ಜನರೊಂದಿಗೆ ಶಾಮೀಲಾಗಿದ್ದಾರೆ. ಅದಕ್ಕೆ ‘ಸುಪಾರಿ’ ಕೊಟ್ಟಿದ್ದಾರೆ'' ಎಂದು ಪ್ರಧಾನಿ ಮೋದಿ ಗಂಭೀರ ಆರೋಪ ಮಾಡಿದರು.

ನೂತನ 11ನೇ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭೋಪಾಲ್ ಮತ್ತು ನವದೆಹಲಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು. ರಾಣಿ ಕಮಲಾಪತಿ ರೈಲು ನಿಲ್ದಾಣ, ಭೋಪಾಲ್ ಮತ್ತು ನವದೆಹಲಿ ರೈಲು ನಿಲ್ದಾಣದ ನಡುವೆ ಪರಿಚಯಿಸಲಾಗುತ್ತಿರುವ ಹೊಸ ರೈಲು ದೇಶದ 11ನೇ ವಂದೇ ಭಾರತ್ ರೈಲು ಆಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ ಅನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ರೈಲು ಸೆಟ್ ಅತ್ಯಾಧುನಿಕ ಪ್ರಯಾಣಿಕ ಸೌಕರ್ಯಗಳನ್ನು ಹೊಂದಿದೆ. ಈ ರೈಲು ಪ್ರಯಾಣಿಕರಿಗೆ ವೇಗವಾದ, ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣದ ಅನುಭವವನ್ನು ನೀಡುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಹಾಗೂ ಜೊತೆಗೆ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಟ್ವೀಟ್: ಒಂದು ದಿನ ಮೊದಲೇ ವಂದೇ ಭಾರತ್ ಎಕ್ಸ್‌ಪ್ರೆಸ್​ಗೆ ಚಾಲನೆ ನೀಡಲು ಪ್ರಧಾನಿ ಮೋದಿ ಭೋಪಾಲ್ ತಲುಪಿದ್ದರು. "ಇಂದು ಭೋಪಾಲ್‌ನಲ್ಲಿ ಇರುತ್ತೇನೆ. ಬೆಳಿಗ್ಗೆ ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದೇನೆ. ನಂತರ ಭೋಪಾಲ್ ಮತ್ತು ನವದೆಹಲಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್​ಗೆ ಚಾಲನೆ ನೀಡಲಿದ್ದೇನೆ. ಈ ರೈಲು ಎಂಪಿ ಮತ್ತು ದೆಹಲಿ ನಡುವೆ ಸಂಪರ್ಕವನ್ನು ಹೆಚ್ಚಿಸುತ್ತದೆ" ಎಂದು ಪ್ರಧಾನಿ ಮೋದಿ ಈ ಹಿಂದೆ ಟ್ವೀಟ್ ಮಾಡಿದ್ದರು.

ಕಮಾಂಡರ್‌ಗಳ ಸಮ್ಮೇಳನದ ವಿಶೇಷತೆ ಏನು?: ಮೋದಿ ಅವರು ಭೋಪಾಲ್‌ನ ಕುಶಾಬೌ ಠಾಕ್ರೆ ಸಭಾಂಗಣದಲ್ಲಿ ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನ-2023ರಲ್ಲಿ ಪಾಲ್ಗೊಂಡರು. ಮಿಲಿಟರಿ ಕಮಾಂಡರ್‌ಗಳ ಮೂರು ದಿನಗಳ (ಮಾರ್ಚ್ 30ರಿಂದ ಏಪ್ರಿಲ್ 1ರವರೆಗೆ) ಸಮ್ಮೇಳನ ಜರುಗಿತು. ಸಿದ್ಧತೆ, ಪುನರುಜ್ಜೀವನ ಹಾಗೂ ಪ್ರಸ್ತತ ವಿಷಯದ ಮೇಲೆ ಆಯೋಜಿಸಲಾಗಿತ್ತು. ಸಮ್ಮೇಳನದ ಸಮಯದಲ್ಲಿ ಸಶಸ್ತ್ರ ಪಡೆಗಳಲ್ಲಿ ಜಂಟಿ ಕಾರ್ಯಾಚರಣೆ ಸೇರಿದಂತೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆದವು. ‘ಆತ್ಮನಿರ್ಭರ್ ಭಾರತ್’ ಸಾಧಿಸುವ ನಿಟ್ಟಿನಲ್ಲಿ ಸಶಸ್ತ್ರ ಪಡೆಗಳ ಸಿದ್ಧತೆ ಮತ್ತು ರಕ್ಷಣಾ ವ್ಯವಸ್ಥೆಯಲ್ಲಿನ ಪ್ರಗತಿಯನ್ನು ಸಹ ಪರಿಶೀಲಿಸಲಾಯಿತು.

ಈ ಸಮ್ಮೇಳನವು ಮೂರು ಸಶಸ್ತ್ರ ಪಡೆಗಳ ಕಮಾಂಡರ್‌ಗಳು ಮತ್ತು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ಸೈನಿಕರು, ನಾವಿಕರು ಮತ್ತು ಏರ್‌ಮೆನ್‌ಗಳೊಂದಿಗೆ ಅಂತರ್ಗತ ಮತ್ತು ಅನೌಪಚಾರಿಕ ಸಂವಾದವನ್ನು ಸಹ ಜರುಗಿತು.

ಇದನ್ನೂ ಓದಿ: ಜೈಲಿನಿಂದ ಬಿಡುಗಡೆಗೆ ಮುನ್ನವೇ ನವಜೋತ್ ಸಿಂಗ್ ಸಿಧು ಭದ್ರತೆ ಕಡಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.