ETV Bharat / bharat

ಮೋದಿ ಪ.ಬಂಗಾಳ ಚುನಾವಣಾ ರ‍್ಯಾಲಿ ರದ್ದು: ಕೋವಿಡ್ ಕುರಿತು ಉನ್ನತ ಮಟ್ಟದ ಸಭೆ! - ಮೋದಿ ಪ.ಬಂಗಾಳ ಚುನಾವಣಾ ರ‍್ಯಾಲಿ ರದ್ಧು

ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್​ ಹಾವಳಿ ಹೆಚ್ಚಾಗಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ನಾಳೆಯ ಪಶ್ಚಿಮ ಬಂಗಾಳ ಪ್ರವಾಸ ರದ್ದುಗೊಳಿಸಿದ್ದು, ಕೋವಿಡ್​ ವಿಚಾರವಾಗಿ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.

PM Modi
PM Modi
author img

By

Published : Apr 22, 2021, 6:12 PM IST

Updated : Apr 22, 2021, 6:57 PM IST

ನವದೆಹಲಿ: ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿ ಬೀಸುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3 ಲಕ್ಷಕ್ಕೂ ಅಧಿಕ ಕೊರೊನಾ ಮಹಾಮಾರಿ ಪ್ರಕರಣಗಳು ದಾಖಲಾಗಿದ್ದು, ಇದು ಪ್ರಧಾನಿ ಮೋದಿ ನಿದ್ದೆಗೆಡಿಸಿದೆ.

ಈಗಾಗಲೇ ವಿವಿಧ ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಆಕ್ಸಿಜನ್​​ ಕೊರತೆ ಹಾಗೂ ಔಷಧ ಲಭ್ಯತೆ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿರುವ ಪ್ರಧಾನಿ ಮೋದಿ ನಾಳೆ ಕೂಡ ಕೋವಿಡ್​​ ವಿಚಾರವಾಗಿ ಉನ್ನತ ಮಟ್ಟದ ಸಭೆ ನಡೆಸಲು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕಾಗಿ ಪಶ್ಚಿಮ ಬಂಗಾಳ ಪ್ರವಾಸ ರದ್ದುಗೊಳಿಸಿದ್ದಾರೆ.

  • Tomorrow, will be chairing high-level meetings to review the prevailing COVID-19 situation. Due to that, I would not be going to West Bengal.

    — Narendra Modi (@narendramodi) April 22, 2021 " class="align-text-top noRightClick twitterSection" data=" ">

ಪಶ್ಚಿಮ ಬಂಗಾಳದಲ್ಲಿನ 7ನೇ ಹಂತದ ಚುನಾವಣೆಗೋಸ್ಕರ ನಾಳೆ ಪ್ರಧಾನಿ ಮೋದಿ ಪ್ರಚಾರ ಸಭೆ ನಡೆಸಬೇಕಾಗಿತ್ತು. ಆದರೆ, ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ತಮ್ಮ ಪ್ರವಾಸ ಮೊಟಕುಗೊಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಮೋ ಖುದ್ದಾಗಿ ಟ್ವೀಟ್ ಮಾಡಿದ್ದಾರೆ. ಇದೇ ಮೊದಲ ಸಲ ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರ ಪ್ರವಾಸ ರದ್ದುಗೊಳಿಸಿದ್ದಾರೆ.

  • PM Modi will review #COVID19 related situation in an internal meeting tomorrow, at 9 am. He will also interact with CMs of high burden states over the prevailing COVID situation, at 10 am, and hold a virtual meeting with leading oxygen manufacturers in the country, at 12:30 pm pic.twitter.com/KSzehXz7qI

    — ANI (@ANI) April 22, 2021 " class="align-text-top noRightClick twitterSection" data=" ">

ಮೋದಿ ಕಾರ್ಯಕ್ರಮ ಇಂತಿವೆ: ನಾಳೆ ಬೆಳಗ್ಗೆ 9 ಗಂಟೆಗೆ ಕೋವಿಡ್​ ಸಂಬಂಧಿತ ಪರಿಸ್ಥಿತಿಗಳ ಬಗ್ಗೆ ಆಂತರಿಕ ಸಭೆ ನಡೆಸಲಿರುವ ನಮೋ, ಬೆಳಗ್ಗೆ 10 ಗಂಟೆಗೆ ಹೆಚ್ಚು ಕೋವಿಡ್​ ಸೋಂಕಿತರು ಇರುವ ಸಿಎಂಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಇದಾದ ಬಳಿಕ ಮಧ್ಯಾಹ್ನ 12:30ಕ್ಕೆ ದೇಶದ ಪ್ರಮುಖ ಆಮ್ಲಜನಕ ತಯಾರಕರೊಂದಿಗೆ ಸಭೆ ನಡೆಸಲಿದ್ದಾರೆ.

Last Updated : Apr 22, 2021, 6:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.