ETV Bharat / bharat

ದೇಶದ ಅಭಿವೃದ್ಧಿಗೆ ಬಜೆಟ್​ ಪೂರಕ, ರೈತರ ಆದಾಯ ದ್ವಿಗುಣಕ್ಕೆ ಆದ್ಯತೆ: ಕೇಂದ್ರ ಬಜೆಟ್​ ಮೆಚ್ಚಿದ ಮೋದಿ - PM Modi addressed nation

ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

PM Modi
PM Modi
author img

By

Published : Feb 1, 2021, 3:43 PM IST

ನವದೆಹಲಿ: 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಮಾತುಗಳನ್ನಾಡಿದ್ದು, ಈ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದಿದ್ದಾರೆ.

ಬಜೆಟ್​ ಬಗ್ಗೆ ಪ್ರಧಾನಿ ಮೋದಿ ಮಾತು

ಬಜೆಟ್​ನಲ್ಲಿ ಎಲ್ಲ ಕ್ಷೇತ್ರಗಳಿಗೂ ಒತ್ತು ನೀಡಲಾಗಿದ್ದು, ಎಲ್ಲ ರಾಜ್ಯಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದೆ ಎಂದಿದ್ದಾರೆ. ಬಜೆಟ್​ನಲ್ಲಿ ದಕ್ಷಿಣದ ರಾಜ್ಯಗಳಿಂದ ಉತ್ತರದವರೆಗೆ ಅಭಿವೃದ್ಧಿಗೆ ಪಣ ಇಟ್ಟುಕೊಳ್ಳಲಾಗಿದ್ದು, ಆರೋಗ್ಯ, ಕುಡಿವ ನೀರು, ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ ಎಂದರು.

ಇದನ್ನೂ ಓದಿ: ಬಜೆಟ್​ನಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ: ಪೆಟ್ರೋಲ್​, ಡೀಸೆಲ್​ ದರ ಮತ್ತಷ್ಟು ಗಗನಮುಖಿ!

ಬಜೆಟ್​ನಿಂದ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದ್ದು, ಆತ್ಮನಿರ್ಭರ​ ಭಾರತಕ್ಕೆ ಬಜೆಟ್​ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದಿದ್ದಾರೆ. ಜನ ಸಾಮಾನ್ಯರಿಗೂ ಪೂರಕವಾಗುವ ರೀತಿಯಲ್ಲಿ ಬಜೆಟ್ ಮಂಡನೆ ಮಾಡಿರುವ ನಿರ್ಮಲಾ ಸೀತಾರಾಮನ್​ ತಂಡಕ್ಕೆ ಅಭಿನಂದನೆಗಳು ಎಂದು ನಮೋ ತಿಳಿಸಿದ್ದಾರೆ. ಇಂದಿನ ಬಜೆಟ್​ ಭಾರತದ ಆತ್ಮವಿಶ್ವಾಸ ತೋರಿಸಿದ್ದು, ಜಗತ್ತಿನಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಬಜೆಟ್ ಸ್ವಾವಲಂಬನೆಯ ದೃಷ್ಟಿ ಹೊಂದಿದ್ದು, ಪ್ರತಿಯೊಂದು ವರ್ಗಕ್ಕೂ ಮೀಸಲಿದೆ ಎಂದಿದ್ದಾರೆ.

ರೈತರ ಆದಾಯ ದ್ವಿಗುಣಗೊಳಿಸಲು ಬಜೆಟ್​ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅದಕ್ಕಾಗಿ ಕೆಲವೊಂದು ಮಹತ್ವದ ಯೋಜನೆ ಹಾಕಿಕೊಳ್ಳಲಾಗಿದೆ. ಬ್ಯಾಂಕ್​ಗಳಿಂದ ಸುಲಭವಾಗಿ ಸಾಲ ಪಡೆದುಕೊಳ್ಳುವ ಉದ್ದೇಶದಿಂದ ಹೆಚ್ಚಿನ ಸಾಲ ಅನುದಾನ ನೀಡಲಾಗಿದೆ ಎಂದರು. ತೆರಿಗೆ ಬಾರ ಕೆವಲ ಸಾಮಾನ್ಯ ಜನರ ಮೇಲೆ ಹಾಕಲಾಗುತ್ತದೆ ಎಂದು ಹಲವರು ಹೇಳುತ್ತಿದ್ದರು. ಆದರೆ, ಈ ಸಲ ಪಾರದರ್ಶಕ ಬಜೆಟ್ ಮಂಡನೆ ಮಾಡಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.