ಅನಂತಪುರ (ಆಂಧ್ರಪ್ರದೇಶ): ಸಾಮಾನ್ಯವಾಗಿ ನಾವು ನೀವೆಲ್ಲಾ ಎಷ್ಟೇ ಬೆಲೆ ಬಾಳುವ ಪೆನ್ನು ಖರೀದಿಸಿದ್ರೂ, ಅದು ಖಾಲಿಯಾದ ತಕ್ಷಣ ಬಿಸಾಡುತ್ತೇವೆ. ಆದರೆ, ಇಲ್ಲೊಂದು ಪೆನ್ನನ್ನು ನಾವು ಖಾಲಿಯಾದ ಬಳಿಕ ಬಿಸಾಡಿದರೆ, ಅದರಿಂದ ಮೂರು ಬಗೆಯ ಗಿಡಗಳು ಹುಟ್ಟುತ್ತವೆ. ಆಂಧ್ರಪ್ರದೇಶದ ಅನಂತಪುರ ನಗರದ ಎಜಿಎಸ್ ಟ್ರಸ್ಟ್ ಆಶ್ರಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಈ ಪೆನ್ಗಳನ್ನು ವಿತರಿಸಲಾಗುತ್ತಿದೆ.
ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆ ಪರಿಸರಕ್ಕೆ ಅನುಕೂಲವಾಗುವಂತೆ ಪೆನ್ನುಗಳನ್ನು ವಿಶೇಷವಾಗಿ ತಯಾರಿಸಲಾಗಿದೆ. ಈ ಪೆನ್ಗಳನ್ನು ಕಾಗದದಿಂದ ತಯಾರಿಸಲಾಗಿದ್ದು, ಇದರ ಒಂದು ಬದಿಯಲ್ಲಿ ಬರೆಯಲು ಬೇಕಾಗುವ ಪೆನ್ನಿನ ಕಡ್ಡಿ ಇರುತ್ತದೆ. ಮತ್ತೊಂದು ಬದಿಯಲ್ಲಿ (ಮೇಲಿನ ಭಾಗ) ಮಣ್ಣಿನಲ್ಲಿ ಬೆರೆಯುವ ಗುಣ ಹೊಂದಿರುವ ಕ್ಯಾಪ್ಸೂಲ್ ಇದೆ.
ಇದನ್ನೂ ಓದಿ: ಧೂಳಿನ ಕಣ ಪತ್ತೆ ಟೆಕ್ನಾಲಜಿ ಜೊತೆ ಹೊಸ ಕಾರ್ಡ್ಲೆಸ್ ವ್ಯಾಕ್ಯೂಮ್ ಪರಿಚಯಿಸಿದ ಡೈಸನ್ !
ಮೆಣಸಿನಕಾಯಿ, ಬದನೆ, ಟೊಮೇಟೊ ಬೀಜಗಳನ್ನು ಅದರಲ್ಲಿ ಇಟ್ಟಿರಲಾಗಿರುತ್ತದೆ. ಪೆನ್ನಿನ ಇಂಕ್ ಖಾಲಿಯಾದ ತಕ್ಷಣ ಅದನ್ನು ಬಿಸಾಡಿದ್ರೆ, ಅದರೊಳಗಿನ ಮೇಲಿನ ಬೀಜಗಳು ಮಣ್ಣಿನೊಂದಿಗೆ ಬೆರೆತು ಸಸ್ಯಗಳು ಹುಟ್ಟುತ್ತವೆ. ಸೋಮವಾರ ಅನಂತಪುರ ನಗರದಲ್ಲಿ ಸುಮಾರು 5 ಸಾವಿರ ಪೆನ್ನುಗಳನ್ನು ವಿತರಿಸಲಾಗಿದೆ.