ನವದಹೆಲಿ: ದೇಶದಲ್ಲಿ ಕೋವಿಡ್ 3ನೇ ಅಲೆ ಹರಡುವ ಸಾಧ್ಯತೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದೆ. ಸಾಮೂಹಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಕೋವಿಡ್ ನಿರ್ಬಂಧಗಳ ವಿಷಯದಲ್ಲಿ ಜನರು ಹಾಗೂ ಸರ್ಕಾರಗಳು ವಿಫಲವಾಗುತ್ತಿವೆ ಎಂದು ಇದೇ ವೇಳೆ ಕಳವಳ ವ್ಯಕ್ತಪಡಿಸಿದೆ. ಇಂತಹ ಘಟನೆಗಳಿಂದ ಕೋವಿಡ್ 3ನೇ ಅಲೆ ವ್ಯಾಪಿಸುವ ಸಾಧ್ಯತೆ ಬಲವಾಗಿದೆ ಎಂದು ಐಎಂಎ ಎಚ್ಚರಿಕೆ ನೀಡಿದೆ.
ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವುದು, ತೀರ್ಥಯಾತ್ರೆ ಮಾಡುವುದು ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಗತ್ಯವಿದ್ದರೂ, ಇನ್ನೂ ಕೆಲವು ತಿಂಗಳುಗಳ ಮಟ್ಟಿಗೆ ಅವೆಲ್ಲವನ್ನೂ ನಿಲ್ಲಿಸಿದರೆ ಒಳ್ಳೆಯದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್ ಆರ್ಭಟ ಮುಂದುವರಿದಿರುವುದನ್ನು ಗಮನಿಸಿದರೆ 3ನೇ ಅಲೆ ಬಂದೇ ಬರುತ್ತದೆ. ಇದು ಏಕಾಏಕಿ ಸಮೀಪಿಸುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಜಾಗರೂಕರಾಗಿರಿಬೇಕು ಎಂದು ಎಚ್ಚರಿಸಿದೆ.
ಇದನ್ನೂ ಓದಿ: ಈ ದೇಶದಲ್ಲಿ ಕೋವಿಡ್ ಲಸಿಕೆ ಪಡೆದವರಿಗೆ ಸೆಕ್ಸ್ ಬ್ಯಾನ್: ಹೀಗೂ ಉಂಟಾ?
ಪುರಿಯಲ್ಲಿ ಜಗನ್ನಾಥ ರಥಯಾತ್ರೆ ಆರಂಭ ಸೇರಿದಂತೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ನಲ್ಲಿ ಕನ್ವರ್ ಯಾತ್ರೆಗೆ ಅನುಮತಿ ಕುರಿತು ಮಾತುಕತೆ ನಡೆಯುತ್ತಿದ್ದು ಐಎಂಎ ಈ ಎಚ್ಚರಿಕೆ ನೀಡಿದೆ. ಸಾಮೂಹಿಕ ಕಾರ್ಯಕ್ರಮಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರಗಳಿಗೆ ಮನವಿಯನ್ನೂ ಮಾಡಿದೆ.