ಪಂಢರಪುರ (ಸೋಲಾಪುರ) : ವಿದ್ಯಾಭ್ಯಾಸಕ್ಕೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ವೃದ್ಧರೊಬ್ಬರು ಸಾಬೀತುಪಡಿಸಿದ್ದಾರೆ. ಸಂಕಷ್ಟಗಳನ್ನು ನೆಪವಾಗಿಟ್ಟುಕೊಂಡು ವಿದ್ಯಾಭ್ಯಾಸ ತ್ಯಜಿಸುವವರಿಗೆ ಇವರು ಮಾದರಿಯಾಗಿದ್ದಾರೆ.
92ರ ಹರೆಯದಲ್ಲಿ ಪಿಹೆಚ್‌ಡಿ ಪದವಿ ಪಡೆಯುವುದು ಕನಸಿನ ಮಾತು. ಆದರೆ, ಸಂಗೋಳ ತಾಲೂಕಿನ ಸೋನಂದ ಗ್ರಾಮದ 92 ವರ್ಷದ ಲಾಲಾ ಸಾಹೇಬ್ ಬಾಬರ್ ಅವರಿಗೆ ಈ ಕನಸು ನನಸಾಗಿದೆ.
ಕಾಮನ್‌ವೆಲ್ತ್ ವೊಕೇಶನಲ್ ಯೂನಿವರ್ಸಿಟಿ ಬಾಬರ್‌ಗೆ ಅವರ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕೆಲಸಗಳಿಗಾಗಿ ಪಿಹೆಚ್‌ಡಿ ಪದವಿ ನೀಡಿ ಗೌರವಿಸಿದೆ.
ಸೊಲ್ಲಾಪುರ ಜಿಲ್ಲೆಯ ಸಂಗೋಳ ತಾಲೂಕಿನ ಸೋನಂದ ಎಂಬ ಪುಟ್ಟ ಹಳ್ಳಿಯಲ್ಲಿ ಕುಟುಂಬ ಸಮೇತ ವಾಸವಾಗಿರುವ ಲಾಲಾ ಸಾಹೇಬ್ ಬಾಬರ್ ಕಷ್ಟಗಳಿಂದ ಶಿಕ್ಷಣದಿಂದ ವಂಚಿತರಾಗಿರುವ ಯುವಕರ ಪಾಲಿಗೆ ಈಗ ಐಕಾನ್ ಆಗಿದ್ದಾರೆ.
ಜೀವನ : ಬಾಬರ್ ಜನವರಿ 1, 1930ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದರು. ಅವರ ತಂದೆ ಮಾಧವರಾವ್ ಬಾಬರ್ ಗ್ವಾಲಿಯರ್‌ನ ಸಿಂಧಿಯಾ (ಶಿಂಧೆ) ಸಂಸ್ಥಾನದಲ್ಲಿ ಹಟ್ಟಿಖಾನಾ ಮತ್ತು ಕುದುರೆ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿದ್ದರು.
ಅವರು ಸೋನಂದದ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು ಮತ್ತು ಅವರು ತಮ್ಮ ಬಾಲ್ಯದಿಂದಲೂ ಶಿಕ್ಷಣದ ಮಹತ್ವವನ್ನು ತಿಳಿದಿದ್ದರು. ಅವರಿಂದಲೇ ಅವರು ತಮ್ಮ ಜೀವನವನ್ನು ಗಾಂಧಿ ಸಿದ್ಧಾಂತಕ್ಕೆ ಮುಡಿಪಾಗಿಟ್ಟಿದ್ದರು.
ಲಾಲಾ ಸಾಹೇಬ್ ಬಾಬರ್ ಅವರು 1946 ರಿಂದ 1947ರವರೆಗೆ ಪ್ರಾಥಮಿಕ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಅವರ ಶಿಕ್ಷಕ ವೃತ್ತಿಯು ಮನೆಗಾಂವ್‌ನ ಶಾಲೆಯಿಂದ ಪ್ರಾರಂಭವಾಗಿತ್ತು. 1950ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಅವರು, ಸಮಾಜಸೇವೆಗೆ ತಮ್ಮ ಸಮಯವನ್ನು ಮೀಸಲಿಟ್ಟಿದ್ದರು. ನಂತರ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು ಗ್ರಾಮದ ಸರಪಂಚ್ ಸಹ ಆಗಿದ್ದರು.
ಇದನ್ನೂ ಓದಿ: ಖಲಿಸ್ತಾನ್ ಗಲಾಟೆ: ಕುಮಾರ್ ವಿಶ್ವಾಸ್ ಆರೋಪ ತಳ್ಳಿಹಾಕಿದ ಕೇಜ್ರಿವಾಲ್
ತಂತಮುಕ್ತಿ ಗಾಂವ್ ಅಭಿಯಾನ : 1952ರಲ್ಲಿ ಸೋನಂದ ಗ್ರಾಮ ಪಂಚಾಯತ್‌ನಲ್ಲಿ ತಂತಮುಕ್ತಿ ಗಾಂವ್ ಅಭಿಯಾನ ಯೋಜನೆ ಜಾರಿಗೊಳಿಸಲಾಯಿತು. ತಂತಮುಕ್ತಿ ಗಾಂವ್ ಅಭಿಯಾನ ಯೋಜನೆ ಅಂದರೆ ಜಗಳವಿಲ್ಲದ ಗ್ರಾಮ ಎಂದರ್ಥ.
ಅನೇಕ ನ್ಯಾಯಾಲಯದ ಪ್ರಕರಣಗಳು ಮತ್ತು ದೂರುಗಳನ್ನು ಯಾರೂ ಪೊಲೀಸ್ ಠಾಣೆಗೆ ಹೋಗದೆ ಗ್ರಾಮದಲ್ಲಿಯೇ ವಿಲೇವಾರಿ ಮಾಡಲು ಇವರು ಪ್ರಯತ್ನಿಸಿದರು. ಗ್ರಾಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಗ್ರಾಮ ಭದ್ರತಾ ಪಡೆ ಸ್ಥಾಪಿಸಿದರು. ಗ್ರಾಮವನ್ನು ಸ್ವಚ್ಛಗೊಳಿಸುವ ಗಾಡ್ಗೆಬಾಬಾ ಅವರ ಕಲ್ಪನೆಯನ್ನು ಎಲ್ಲೆಡೆ ಹರಡಿದರು ಮತ್ತು ಪ್ರಚಾರ ಮಾಡಿದರು.
ಕಡ್ಡಾಯ ಶಿಕ್ಷಣಕ್ಕೆ ಒತ್ತು : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರರಿಂದ ಹದಿನಾಲ್ಕು ವರ್ಷದೊಳಗಿನ ಎಲ್ಲ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದ ಅವರು, ಪಾಲಕರಿಗೆ ಶಿಕ್ಷಣದ ಮಹತ್ವ ತಿಳಿಸಿ, ಎಲ್ಲ ವಿದ್ಯಾವಂತ ಯುವಕರನ್ನು ಪ್ರಾಥಮಿಕ ಶಿಕ್ಷಕರನ್ನಾಗಿ ನೇಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
70 ದಶಕದಲ್ಲಿ ಲಾಲಾ ಸಾಹೇಬ್ ಬಾಬರ್ ತಮ್ಮ ಜಿಲ್ಲೆಯ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದ್ರು. ರಾಜಕೀಯದ ಜೊತೆಗೆ ಸಮಾಜಮುಖಿ ಕೆಲಸಗಳಿಗೆ ಬದ್ಧರಾಗಿದ್ದ ಅವರು, ಗ್ರಾಮೀಣ ಭಾಗದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಗ್ರಾಮೀಣ ಪ್ರದೇಶದಿಂದ ಶಿಕ್ಷಕರಾಗಿ ಆರಂಭವಾದ ಲಾಲಾ ಸಾಹೇಬ ಬಾಬರ್ ಅವರ ಪಯಣ ಪಿಹೆಚ್‌ಡಿ ಪಡೆಯುವತ್ತ ಬೆರಗು ಮೂಡಿಸಿದೆ.