ಹೈದರಾಬಾದ್: ಎಂಡಿಎಂಎ ಡ್ರಗ್ಸ್ ಪ್ರಕರಣದಲ್ಲಿ ಇಂದೋರ್ ಅಪರಾಧ ವಿಭಾಗದ ತಂಡ ನಿರಂತರವಾಗಿ ಹೈದರಾಬಾದ್‌ನಲ್ಲಿ ಕ್ಯಾಂಪಿಂಗ್ ಮಾಡುತ್ತಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗ್ತಿದೆ.
ಔಷಧ ಕಾರ್ಖಾನೆಯನ್ನು ಹೊಂದಿರುವ ಹೈದರಾಬಾದ್‌ನ ಜಲ್ವಾಯ್ ವಿಹಾರ್ ನಿವಾಸಿ ವೇದ ಪ್ರಕಾಶ್ ವ್ಯಾಸ್ ಅವರ ವಿವಿಧ ಕಂಪನಿಗಳು ಮತ್ತು ಇತರ ಸ್ಥಳಗಳಲ್ಲಿಯೂ ಈ ತಂಡ ದಾಳಿ ನಡೆಸಿದೆ.
ವ್ಯಾಸ್‌ನ ಔಷಧಾಲಯಗಳಲ್ಲಿ ಒಂದು ವಿಶೇಷ ರಾಸಾಯನಿಕ ಬಳಸಿ ಪಾರ್ಟಿ ಡ್ರಗ್ಸ್ ತಯಾರಿಸಿ ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಕಾರ್ಖಾನೆಗಳಲ್ಲಿ ತಯಾರಿಸಿದ ಔಷಧಿಗಳ ಮಾದರಿಗಳು, ವ್ಯವಸ್ಥೆಗಳ ದತ್ತಾಂಶಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಅವರ ವಿವಿಧ ಬ್ಯಾಂಕ್ ಖಾತೆಗಳ ವಿವರಗಳನ್ನು ಸಿಸಿಬಿ ತೆಗೆದುಕೊಂಡಿದೆ.