ಭೋಜ್‌ಪುರ: ಬಿಹಾರದ ಭೋಜ್‌ಪುರ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಕೋಯಿಲ್ವಾರ್ ಪೊಲೀಸ್ ಠಾಣೆಯ ಬಾಬುರಾಣಿ ಘಾಟ್ ಗ್ರಾಮದಲ್ಲಿ ಕಾರಿನ ಬ್ಯಾಟರಿ ಕದ್ದ ಆರೋಪದ ಮೇಲೆ ನಾಲ್ವರು ಯುವಕರನ್ನು ಮೊದಲು ಮನಬಂದಂತೆ ಥಳಿಸಿ, ನಂತರ ಖಾಸಗಿ ಭಾಗಕ್ಕೆ ಪೆಟ್ರೋಲ್ ಸುರಿಯಲಾಗಿದೆ.
ವಿವರ
ತುಂಟುನ್ ಚೌಧರಿ ಅಲಿಯಾಸ್ ರಂಜನ್ ಚೌಧರಿ ಮತ್ತು ಆತನ ಮೂವರು ಸಹಚರರು ಕೋಯಿಲ್ವಾರ್ ನಗರ ಪಂಚಾಯತ್‌ನ ಉಪಮುಖ್ಯ ಕೌನ್ಸಿಲರ್ ಪತಿ ಸರ್ತಾಜ್ ಆಲಂ ಅಲಿಯಾಸ್ ಸೋನು ಖಾನ್ ವಾಹನದ ಬ್ಯಾಟರಿಯನ್ನು ಕದ್ದಿದ್ದಾರೆ ಎಂಬ ಆರೋಪ ಹೊರಿಸಿ, ಇವರ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಖಾಸಗಿ ಭಾಗದಲ್ಲಿ ಪೆಟ್ರೋಲ್ ಸುರಿದಿದ್ದಾರೆ.
ತುಂಟುನ್ ಚೌಧರಿ ಮತ್ತು ಆತನ ಸಹಚರರನ್ನು ಉಪಮುಖ್ಯ ಕೌನ್ಸಿಲರ್ ಪತಿ ಸರ್ತಾಜ್ ಆಲಂ ಅಲಿಯಾಸ್ ಸೋನು ಖಾನ್ ಕೋಯಿಲ್ವಾರ್-ಕುಲ್ಹರಿಯಾ ರಸ್ತೆಯಲ್ಲಿರುವ ಗೋದಾಮಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಸೋನು ಖಾನ್ ತನ್ನ ಸಹಚರರ ಜೊತೆ ಸೇರಿ ಈ ನಾಲ್ವರನ್ನು ಮನಬಂದಂತೆ ಥಳಿಸಿ, ನಂತರ ಬೆತ್ತಲೆಗೊಳಿಸಿ ಖಾಸಗಿ ಭಾಗಕ್ಕೆ ಪೆಟ್ರೋಲ್ ಸುರಿದು ಹಿಂಸಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಮಹಿಳೆಯ ಗುಪ್ತಾಂಗಕ್ಕೆ ಖಾರದ ಪುಡಿ ಸುರಿದ ದುಷ್ಕರ್ಮಿಗಳು!
ಈ ಕುರಿತು ಸಂತ್ರಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಉಪಮುಖ್ಯ ಕೌನ್ಸಿಲರ್ ಪತಿ ಸರ್ತಾಜ್ ಆಲಂ ಅಲಿಯಾಸ್ ಸೋನು ಖಾನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.