ETV Bharat / bharat

ತೆಲಂಗಾಣದ ಜನರು ಅಭಿವೃದ್ಧಿಗೆ ಬದಲಾವಣೆ ಬಯಸಿದ್ದಾರೆ: ಡಿಸಿಎಂ ಡಿ ಕೆ ಶಿವಕುಮಾರ್​ - Telangana Assembly Election 2023

Telangana Assembly Election 2023: ತೆಲಂಗಾಣದಲ್ಲಿ ಕಾಂಗ್ರೆಸ್​ ಮುನ್ನಡೆ ಸಾಧಿಸುತ್ತಿದ್ದು, ಕರ್ನಾಟಕ ರಾಜ್ಯದ ಕಾಂಗ್ರೆಸ್​ನ ಪ್ರಮುಖ​ ನಾಯಕರು ತೆಲಂಗಾಣದಲ್ಲಿ ಬೀಡುಬಿಟ್ಟಿದ್ದಾರೆ

DCM DK Shivakumar and Minister Sharanprakash Rudrappa Patil
ಡಿಸಿಎಂ ಡಿಕೆಶಿ ಹಾಗೂ ಸಚಿವ ಶರಣಪ್ರಕಾಶ್​ ರುದ್ರಪ್ಪ ಪಾಟೀಲ್
author img

By ETV Bharat Karnataka Team

Published : Dec 3, 2023, 1:43 PM IST

ಹೈದರಾಬಾದ್: ತೆಲಂಗಾಣದ ಜನರು ರಾಜ್ಯದ ಪ್ರಗತಿ ಹಾಗೂ ಅಭಿವೃದ್ಧಿಗಾಗಿ ಬದಲಾವಣೆ ಆಗಬೇಕು ಎಂದು ನಿರ್ಧರಿಸಿದ್ದಾರೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಹೇಳಿದ್ದಾರೆ.

  • #WATCH | Hyderabad, Telangana: Karnataka Deputy CM DK Shivakumar says, "The people of Telangana have decided that there must be change, there must be change for progress, and development. He (Revanth Reddy) is the PCC president. He is the team leader. Our party will take the… pic.twitter.com/PGQn7W9YUk

    — ANI (@ANI) December 3, 2023 " class="align-text-top noRightClick twitterSection" data=" ">

ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆ ಹೈದರಾಬಾದ್​ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕ ರೇವಂತ್​ ರೆಡ್ಡಿ ಅವರು ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷ, ಟೀಮ್​ ಲೀಡರ್​ ಆಗಿದ್ದಾರೆ. ಮುಖ್ಯಮಂತ್ರಿ ಯಾರು ಎನ್ನುವುದರ ಬಗ್ಗೆ ನಮ್ಮ ಪಕ್ಷ ನಿರ್ಧಾರ ತೆಗೆದುಕೊಳ್ಳಲಿದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಗೆಲುವಿಗಾಗಿ ಹೋರಾಡಲಾಗಿದೆ. ನಾನು ಕೆಸಿಆರ್​ ಅಥವಾ ಕೆಟಿಆರ್ ಬಗ್ಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ತೆಲಂಗಾಣದ ಜನತೆ ಅವರಿಗೆ ಉತ್ತರ ನೀಡಿದ್ದಾರೆ ಎಂದು ಹೇಳಿದರು.​

  • #WATCH | Hyderabad, Telangana: Karnataka Minister and Congress leader Sharanprakash Rudrappa Patil says, "Congress is forming the govt and we are probably winning more than 70 seats. Congress is united and with the collective efforts, Congress has come back to power in… pic.twitter.com/qGmqvZi951

ಹೈದರಾಬಾದ್​ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಕಾಂಗ್ರೆಸ್​ ಮುಖಂಡ ಹಾಗೂ ಕರ್ನಾಟಕ ಸಚಿವ ಶರಣಪ್ರಕಾಶ್​ ರುದ್ರಪ್ಪ ಪಾಟೀಲ್ "ತೆಲಂಗಾಣದಲ್ಲಿ 70ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಕಾಂಗ್ರೆಸ್​ ಸರ್ಕಾರ ರಚಿಸುತ್ತದೆ. ಕಾಂಗ್ರೆಸ್​ ಒಗ್ಗಟ್ಟಾಗಿದ್ದು, ಸಾಮೂಹಿಕ ಪ್ರಯತ್ನದಿಂದ ತೆಲಂಗಾಣದಲ್ಲಿ ಕಾಂಗ್ರೆಸ್​ ಮತ್ತೆ ಅಧಿಕಾರಕ್ಕೆ ಬಂದಿದೆ" ಎಂದು ​ಅಭಿಪ್ರಾಯಪಟ್ಟಿದ್ದಾರೆ.

"ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್​ಗೆ ಹಿನ್ನಡೆಯಾಗಿದೆ. ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ನಂತರ ಕಾಂಗ್ರೆಸ್​ ಹೈಕಮಾಂಡ್​ ಶಾಸಕರೊಂದಿಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳಲಿದೆ" ಎಂದು ತಿಳಿಸಿದರು.

ಇದನ್ನೂ ಓದಿ: 'ನಮಗೆ ಯಾವ ಆಪರೇಷನ್ ಭೀತಿಯೂ ಇಲ್ಲ': ಹೈದರಾಬಾದ್​ನಲ್ಲಿ ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.