ಹೈದರಾಬಾದ್: ಹುಟ್ಟುಹಬ್ಬ, ಮದುವೆ, ಗೃಹಪ್ರವೇಶ ಸೇರಿ ಶುಭ ಸಮಾರಂಭಗಳಲ್ಲಿ ಕುಟುಂಬ ಸದಸ್ಯರೊಂದಿಗೆ ಕೇಕ್ ಕತ್ತರಿಸಿ ಸಂತಸ ಪಡುವುದು ಸಾಮಾನ್ಯ. ಆದರೆ ಅದೇ ಕುಟುಂಬದ ಸದಸ್ಯರೆಲ್ಲರೂ ಕೇಕ್ ಮೇಲೆ ಗೊಂಬೆಗಳಾಗಿ ಮೂಡಿಬಂದರೆ ಎಷ್ಟು ಚೆಂದ ಅಲ್ಲವೇ. ಹೌದು ಇದೀಗ ಹಣ್ಣುಗಳು, ಹೂವುಗಳಂತಿರುವ ಕೇಕ್ಗಳೊಂದಿಗೆ ನಮ್ಮ ಕುಟುಂಬದ ಸದಸ್ಯರನ್ನೇ ಚಿತ್ರಿಸುವ ಫ್ಯಾಮಿಲಿ ಕೇಕ್ ಟ್ರೆಂಡ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
!['Family cake' of dolls that resemble family members](https://etvbharatimages.akamaized.net/etvbharat/prod-images/16101640_cake.jpg)
ಅಜ್ಜಿಯ ಹುಟ್ಟುಹಬ್ಬಕ್ಕೆ, ಕೇಕ್ನ ಮೇಲೆ ಮಕ್ಕಳು, ಮೊಕ್ಕಳನ್ನೆಲ್ಲ ಗೊಂಬೆಗಳಂತೆ ತಯಾರಿಸಿ, ಅಜ್ಜಿಗೆ ಸರ್ಪ್ರೈಸ್ ಕೊಡಬಹುದು. ಈ ಹೊಸ ಟ್ರೆಂಡ್ ಕೇಕ್ ಭಾವನೆಗಳಿಗೆ ಇನ್ನಷ್ಟು ಹತ್ತಿರವಾಗಿದ್ದು, ಹೆಚ್ಚು ಜನರು ಇಷ್ಟಪಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೇಡಿಕೆಯನ್ನೂ ಪಡೆಯುತ್ತಿವೆ.
ದೊಡ್ಡ ಕೇಕ್‌ಗಳಿಂದ ಸಣ್ಣ ಕೇಕ್‌ಗಳವರೆಗೆ: ಇದರಲ್ಲಿ ರಿಯಲಿಸ್ಟಿಕ್ ಕೇಕ್‌ಗಳಿಂದ ಪೈಂಟಿಂಗ್‌ನಂತಹ ಕೇಕ್‌ಗಳವರೆಗೆ ಹಲವು ವಿಧಗಳಿವೆ. ಅವುಗಳು ಅಗತ್ಯಕ್ಕೆ ತಕ್ಕಂತೆ ಹುಟ್ಟುಹಬ್ಬ, ಮದುವೆ, ತಾಯಂದಿರ ದಿನ, ತಂದೆಯ ದಿನ ಹಾಗೂ ಇನ್ನಿತರ ಹಬ್ಬಗಳ ಆಚರಣೆಗಳಿಗೆ ಅನುಗುಣವಾಗಿ ಅನೇಕ ವಿಷಯದ ಕೇಕ್ಗಳನ್ನು ತಯಾರಿಸಲಾಗುತ್ತದೆ. ಆದರೆ, ಈಗ ಬಂದಿರುವ ಈ ಫ್ಯಾಮಿಲಿ ಕೇಕ್ ಅವೆಲ್ಲಕ್ಕಿಂತ ವಿಭಿನ್ನವಾಗಿದೆ. ಯಾವುದೇ ಸಂದರ್ಭವಿರಲಿ ಆ ಸಂದರ್ಭವನ್ನು ಸಂತೋಷದಿಂದ ಆಚರಿಸಲು ಕುಟುಂಬ ಸದಸ್ಯರ ಮುಖವಿರುವ ಫ್ಯಾಮಿಲಿ ಪಿಕ್ಚರ್ ಕೇಕ್ ತಯಾರಾಗಿದೆ.
!['Family cake' of dolls that resemble family members](https://etvbharatimages.akamaized.net/etvbharat/prod-images/16101640_cake1.jpg)
ಇಲ್ಲಿ ಕುಟುಂಬ ಸದಸ್ಯರ ಕೇಕ್ ಅಚ್ಚುಗಳೊಂದಿಗೆ ಸಂದರ್ಭವನ್ನು ಅವಲಂಬಿಸಿ ಪ್ರತಿಯೊಂದು ಕೇಕ್ ಅನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಫೋಟೋಗಳ ಪ್ರಕಾರ ಕುಟುಂಬ ಸದಸ್ಯರ ಚಿತ್ರಗಳಿಗೆ ಹೊಂದಿಕೆಯಾಗುವಂತೆ, ಅವರೆಲ್ಲರೂ ಒಟ್ಟಿಗೆ ಕುಳಿತು ಮೋಜು ಮಾಡುತ್ತಿರುವ ಅಥವಾ ಅಕ್ಕಪಕ್ಕದಲ್ಲಿ ನಿಂತಿರುವ ರೀತಿಯಲ್ಲಿ ಕೇಕ್ ಮೇಲೆ ಇರಿಸಲಾಗುತ್ತದೆ. ಕುಟುಂಬದ ಸದಸ್ಯರು ಧರಿಸುವ ಡ್ರೆಸ್‌ಗಳಿಂದ ಹಿಡಿದು ಮುಖಭಾವದವರೆಗೆ, ಕೇಕ್‌ಗಳ ಮೇಲಿನ ಎಲ್ಲವೂ ಫೋಟೋದಲ್ಲಿರುವ ಜನರಂತೆಯೇ ಕಾಣುತ್ತವೆ.
ಸಂತೋಷದ ಕ್ಷಣವನ್ನು ಸಂಭ್ರಮದಿಂದ ಆಚರಿಸುತ್ತಿರುವಾಗ ಕುಟುಂಬದ ಯಾವುದಾದರೂ ಸದಸ್ಯರ ಅನುಪಸ್ಥಿತಿ ಇದ್ದರೆ ಆ ಸ್ಥಾನವನ್ನು ಈ ಕೇಕ್ ಮೇಲಿನ ಕುಟುಂಬ ಸದಸ್ಯರನ್ನೇ ಹೋಲುವ ಗೊಂಬೆಗಳು ತುಂಬುತ್ತವೆ.
ಇದನ್ನೂ ಓದಿ : ನಿಮ್ಮವರ ಜನ್ಮದಿನಕ್ಕೆ ಈ ಕೇಕ್ ತಯಾರಿಸಿ ಮೆಚ್ಚುಗೆ ಪಡೆಯಿರಿ..