ಪಾಟ್ನಾ: ವಿಶೇಷ ವಿಮಾನದ ಮೂಲಕ ಶನಿವಾರ ಹೊಸ ಬ್ಯಾಚ್‌ನ ಲಸಿಕೆ ಪಾಟ್ನಾಕ್ಕೆ ಬಂದಿದೆ. ಇದನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಕಳುಹಿಸಲಾಗಿದ್ದು, ಇಂದಿನಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಕಾರ್ಯ ಪ್ರಾರಂಭವಾಗಲಿದೆ.
18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಇಂದಿನಿಂದ ಲಸಿಕೆ ನೀಡಲಾಗುವುದು. ವ್ಯಾಕ್ಸಿನೇಷನ್ಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಹಾಗಾಗಿ, ಲಸಿಕೆ ತೆಗೆದುಕೊಳ್ಳುವಂತೆ ಆರೋಗ್ಯ ಸಚಿವರು ಜನರನ್ನು ಕೋರಿದ್ದಾರೆ.
ಇದಕ್ಕಾಗಿ ವಿವಿಧ ಸರ್ಕಾರಿ ಮತ್ತು ಇತರ ಸ್ಥಳಗಳನ್ನು ಗುರುತಿಸಲಾಗುತ್ತಿದೆ. ಮೊದಲ ಬ್ಯಾಚ್ ಲಸಿಕೆ ಪಾಟ್ನಾ ತಲುಪಿದ ನಂತರ, ಅದನ್ನು ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಮೇ ತಿಂಗಳಲ್ಲಿ ಸುಮಾರು 16.01 ಲಕ್ಷ ಲಸಿಕೆ ಪ್ರಮಾಣವನ್ನು ಬಿಹಾರಕ್ಕೆ ಹಂಚಿಕೆ ಮಾಡಲಾಗಿದೆ.
ಇದನ್ನೂ ಓದಿ: ಕೊರೊನಾ ಸಂಕಷ್ಟ... ಭಾರತದ ಇಂದಿನ ದುಃಸ್ಥಿತಿಗೆ ಮೋದಿ ಸರ್ಕಾರದ ನೀತಿಗಳೇ ಕಾರಣ: ಲ್ಯಾನ್ಸೆಟ್ ವರದಿ
ವ್ಯಾಕ್ಸಿನೇಷನ್ಗಾಗಿ ನೋಂದಣಿ ಅಗತ್ಯವಾಗಿದೆ. ನೋಂದಣಿಯಲ್ಲಿ ನೀಡಿರುವ ದಿನಾಂಕದ ಪ್ರಕಾರ ಲಸಿಕಾ ಕೇಂದ್ರಕ್ಕೆ ಆಗಮಿಸಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಹಾಗು ಸೂಚಿಸಲಾದ ದಾಖಲೆಯ ಫೋಟೋ ನಕಲನ್ನು ಸಲ್ಲಿಸಬೇಕಾಗುತ್ತದೆ.
ಬಿಹಾರದ ಜನಸಂಖ್ಯೆಯು ಸುಮಾರು 14 ಕೋಟಿ 58 ಲಕ್ಷ 26 ಸಾವಿರ ಇದೆ. ಇದರಲ್ಲಿ, 18 ವರ್ಷದಿಂದ 44 ವರ್ಷದವರೆಗಿನ ಜನರ ಸಂಖ್ಯೆ 5 ಕೋಟಿ 47 ಲಕ್ಷ ಸಮೀಪದಲ್ಲಿದೆ. ರಾಜ್ಯಕ್ಕೆ ಸುಮಾರು 10 ಕೋಟಿ 69 ಲಕ್ಷ ಡೋಸ್‌ಗಳಷ್ಟು ಲಸಿಕೆ ಅವಶ್ಯಕತೆ ಇದೆ.