ಹೂಗ್ಲಿ (ಪಶ್ಚಿಮ ಬಂಗಾಳ) : ಪ್ಯಾರಿಸ್‌ನಿಂದ ಪಾಂಡುವವರೆಗೆ ಪ್ರೀತಿಯೇ ಹುಡುಕಿಕೊಂಡು ಬಂದಿದೆ. ಈಗ ಪೆಟ್ರೀಷಿಯಾ ಹಾಗೂ ಕುಂತಲ್ ಅವರ ‘ಪ್ರೀತಿ’ ಸಾಗರಗಳನ್ನೇ ದಾಟಿದೆ.
ಕೆಲವು ತಿಂಗಳ ಹಿಂದೆ ಈ ಪ್ರೀತಿ ಪ್ರೇಮ ಆರಂಭವಾಗಿದೆ. ಡೇಟಿಂಗ್ ಸೈಟ್‌ನಲ್ಲಿ ಕುಂತಲ್ ಭಟ್ಟಾಚಾರ್ಯ ಅವರು ಪೆಟ್ರೀಷಿಯಾ ಬರೋಟಾ ಅವರೊಂದಿಗೆ ಮಾತನಾಡುತ್ತಾರೆ. ನಂತರ ವಿಡಿಯೋ ಚಾಟ್‌ನಲ್ಲಿ ಮೊದಲ ಭೇಟಿಯಾಗುತ್ತದೆ. ಅಲ್ಲಿಂದ ಇಬ್ಬರ ನಡುವೆ ಪ್ರೀತಿ ಹುಟ್ಟಿದೆ.
ಪ್ರೀತಿಯ ಭಾಷೆ ಅರ್ಥಮಾಡಿಕೊಳ್ಳಲು ಯಾವುದೇ ತೊಂದರೆ ಇರಲಿಲ್ಲ, ಆದರೆ, ಮಾತನಾಡುವ ಭಾಷೆ ಇವರಿಗೆ ಅಡ್ಡಿಯಾಗಿತ್ತು. ಅದಕ್ಕೆ ಗೂಗಲ್ ಭಾಷಾಂತರಕಾರ ಇವರ ಪ್ರೇಮಕ್ಕೆ ಸಾಕ್ಷಿಯಾಗಿದ್ದಾನೆ. ಪೆಟ್ರೀಷಿಯಾ ತನ್ನ ಪ್ಯಾರಿಸ್‌ನಿಂದ ಪಾಂಡುವಾಗೆ ನೇರವಾಗಿ ಬಂದಿದ್ದಾಳೆ. ಇದನ್ನು ಕಂಡು ಕುಂತಲ್ ಆಘಾತಕ್ಕೊಳಗಾಗುವುದರ ಜೊತೆ ಪ್ರೇಮಿಯನ್ನು ಕಂಡು ಸಂತೋಷಗೊಂಡಿದ್ದಾನೆ.
ಜುಲೈ 13 ರಂದು ಪೆಟ್ರೀಷಿಯಾ ಭಾರತಕ್ಕೆ ಬಂದಿರುವುದಾಗಿ ಫೋನ್ ನಲ್ಲಿ ಹೇಳಿದ್ದಳಂತೆ. ಮೊದಲು ದೆಹಲಿಯ ಮೂಲಕ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಅವರ ಮನೆಗೆ ತಲುಪಿದ್ದಾರೆ. ಪ್ರಸ್ತುತ, ಈ ಜೋಡಿ ಚುಟಿಯೆಯಲ್ಲಿ ವಾಸಿಸುತ್ತಿದೆ. ಶೀಘ್ರದಲ್ಲೇ ಇವರು ಮದುವೆಯಾಗಲಿದ್ದಾರೆ.
ಇದನ್ನೂ ಓದಿ: ನೀರಿಲ್ಲದೇ ಸೆಕೆಂಡುಗಳಲ್ಲಿ ಬಟ್ಟೆ ಒಗೆಯುವ ವಾಷಿಂಗ್ ಮಷಿನ್.. ಡಿಟರ್ಜೆಂಟೂ ಬೇಕಿಲ್ಲ