ETV Bharat / bharat

ವಿದ್ಯಾರ್ಥಿನಿ ಮೇಲೆ ರೇಪ್​: ಪ್ರಾಂಶುಪಾಲನಿಗೆ ಮರಣದಂಡನೆ ವಿಧಿಸಿದ ಕೋರ್ಟ್! - ಪಾಟ್ನಾ ಸಿವಿಲ್​ ಕೋರ್ಟ್​ ನ್ಯೂಸ್​

2018ರಲ್ಲಿ ನಡೆದ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿರುವ ಪಾಟ್ನಾ ಸಿವಿಲ್​ ಕೋರ್ಟ್​ನಿಂದ ಮಹತ್ವದ ತೀರ್ಪು ಹೊರಬಿದ್ದಿದ್ದು, ಅತ್ಯಾಚಾರ ಆರೋಪಿಗೆ ಮರಣದಂಡನೆ ವಿಧಿಸಿ ಆದೇಶ ಹೊರಹಾಕಿದೆ.

rape case
rape case
author img

By

Published : Feb 15, 2021, 10:07 PM IST

ಪಾಟ್ನಾ(ಬಿಹಾರ): 11 ವರ್ಷದ ಶಾಲಾ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್​ ಶಾಲಾ ಪ್ರಾಂಶುಪಾಲನಿಗೆ ಮರಣದಂಡನೆ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.

ಪಾಟ್ನಾ ಸಿವಿಲ್​ ಕೋರ್ಟ್​ನಿಂದ ಈ ಮಹತ್ವದ ತೀರ್ಪು ಹೊರಬಿದ್ದಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೋರ್ವ ಶಿಕ್ಷಕ ಅಭಿಷೇಕ್​ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಓದಿ: ಕಂದಕಕ್ಕೆ ಉರುಳಿ ಬಿದ್ದ ವಾಹನ: ಮಗು ಸೇರಿ ಆರು ಮಂದಿ ದುರ್ಮರಣ

ಅರವಿಂದ್​ ಕುಮಾರ್​ ಶಿಕ್ಷೆಗೊಳಗಾಗಿರುವ ಪ್ರಾಂಶುಪಾಲನಾಗಿದ್ದು, ನ್ಯೂ ಸೆಂಟ್ರಲ್​ ಪಬ್ಲಿಕ್​ ಸ್ಕೂಲ್​ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 2018ರ ಸೆಪ್ಟೆಂಬರ್​ ತಿಂಗಳಲ್ಲಿ ಬಾಲಕಿ ಗರ್ಭಿಣಿಯಾಗಿದ್ದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಇದಾದ ಬಳಿಕ ಬಾಲಕಿ ಪೋಷಕರು ಪೊಕ್ಸೋ ಕಾಯ್ದೆಯಡಿ ಪ್ರಾಂಶುಪಾಲ ಹಾಗೂ ಸಹ ಶಿಕ್ಷಕನ ವಿರುದ್ಧ ದೂರು ದಾಖಲು ಮಾಡಿದ್ದರು. ಇಂದು ಕೋರ್ಟ್​ನಿಂದ ಮಹತ್ವದ ಆದೇಶ ಹೊರಬಿದ್ದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.