ETV Bharat / bharat

ಆಮ್ಲಜನಕ ಕೊರತೆಯಿಂದ ಸಾವನಪ್ಪಿದ ‘ಪರಮ್ ವೀರ್ ಚಕ್ರ’ ಪಡೆದ ಯೋಧನ ಪುತ್ರ - ಅಬ್ದುಲ್ ಹಮೀದ್ 2ನೇ ಪುತ್ರ ಅಲಿ ಹಸನ್

ಅಲಿ ಹಸನ್ ಕಳೆದ ಮೂರ್ನಾಲ್ಕು ದಿನದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ಎಲ್​ಎಲ್​​ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಆಮ್ಲಜನಕದ ಅವಶ್ಯಕತೆ ಅವರಿಗಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದರು. .

param-vir-chakra-recipients-son-dies-due-to-lack-of-oxygen-in-kanpur
‘ಪರಮ್ ವೀರ್ ಚಕ್ರ’ ಪಡೆದ ಯೋಧನ ಪುತ್ರ
author img

By

Published : Apr 24, 2021, 4:49 PM IST

Updated : Apr 24, 2021, 4:56 PM IST

ಕಾನ್ಪುರ್​ (ಉತ್ತರ ಪ್ರದೇಶ): 1965ರ ಇಂಡೋ-ಪಾಕ್​​​​ ಯುದ್ಧದಲ್ಲಿ ಪಾಲ್ಗೊಂಡು ‘ಪರಮ್ ವೀರ್ ಚಕ್ರ’ ಪ್ರಶಸ್ತಿ ಪಡೆದಿದ್ದ ಹುತಾತ್ಮ ಯೋಧ ಅಬ್ದುಲ್ ಹಮೀದ್ ಅವರ ಎರಡನೇ ಪುತ್ರ ಆಮ್ಲಜನಕ ಕೊರತೆಯಿಂದ ಸಾವನಪ್ಪಿದ್ದಾರೆ.

ಅಬ್ದುಲ್ ಹಮೀದ್ 2ನೇ ಪುತ್ರ ಅಲಿ ಹಸನ್​ (61) ಇಲ್ಲಿನ ಲಾಲಾ ಲಜಪತ್​ ರಾಯ್​​​​​​​ ಆಸ್ಪತ್ರೆಗೆ ದಾಖಲಾಗಿದ್ದರೂ ಅವರಿಗೆ ಕೋವಿಡ್​​ ಪರೀಕ್ಷೆ ನಡೆಸಲು ಆಸ್ಪತ್ರೆ ಸಿಬ್ಬಂದಿ ಮುಂದಾಗಲಿಲ್ಲಾ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ನನ್ನ ತಂದೆ ಸಾವನಪ್ಪಿದ್ದಾರೆ ಎಂದು ಮೃತಪಟ್ಟ ಅಲಿ ಹಸನ್​ ಪುತ್ರ ಆರೋಪಿಸಿದ್ದಾರೆ. ಅಲಿ ಹಸನ್ ಕಳೆದ ಮೂರ್ನಾಲ್ಕು ದಿನದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ಎಲ್​ಎಲ್​​ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ವೇಳೆ ಅವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಆಮ್ಲಜನಕದ ಅವಶ್ಯಕತೆ ಅವರಿಗಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದರು. ಆದರೆ, ಆಮ್ಲಜನಕ ಮಟ್ಟ ಇಳಿಕೆಯಾಗಿ ಉಸಿರಾಟಕ್ಕೆ ಸಮಸ್ಯೆಯಾಗಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಇದಾದ ಬಳಿಕ ಅವರ ಉಸಿರಾಟಕ್ಕೆ ಆಮ್ಲಜನಕ ನೀಡಲಾಯಿತು. ಆದರೆ, 4ಗಂಟೆ ಬಳಿಕ ಆಮ್ಲಜನಕದ ಅವಶ್ಯಕತೆ ಅವರಿಗಿಲ್ಲ, ಈಗ ಆರೋಗ್ಯ ಸ್ಥಿರವಾಗಿದೆ ಎಂದು ಸಿಬ್ಬಂದಿ ಆಮ್ಲಜನಕ ತೆಗೆದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದಾಗಿ ಕೆಲ ಹೊತ್ತಲ್ಲೇ ಅವರು ಸಾವನಪ್ಪಿದ್ದಾರೆ.

Last Updated : Apr 24, 2021, 4:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.