ಜೈಪುರ (ರಾಜಸ್ಥಾನ್): ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ 'ಪ್ಯಾಲೇಸ್ ಆನ್ ವೀಲ್ಸ್' ಎಂಬ ಪ್ರವಾಸಿ ರೈಲು,ಇದೀಗ ಅಕ್ಟೋಬರ್ 8ಕ್ಕೆ ಮತ್ತೇ ಕಾರ್ಯಾರಂಭಿಸಲಿದೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ದುರ್ಗಾಪುರದಲ್ಲಿ ರೈಲಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಅ.12ರಿಂದ ರೈಲಿನ ಅಧಿಕೃತ ಪ್ರವಾಸ ಪ್ರಾರಂಭವಾಗಲಿದೆ. ಜೈಪುರ, ಸವಾಯಿ ಮಾಧೋಪುರ್, ಚಿತ್ತೋರ್, ಉದಯಪುರ, ಬುಂದಿ ಮತ್ತು ಅಜ್ಮೀರ್‌ನಂತಹ ತಾಣಗಳಿಗೆ ಪ್ರವಾಸಿಗರನ್ನು ಹೊತ್ತೊಯ್ಯಲಿದೆ.
ಈ ಕುರಿತು ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಧರ್ಮೆಂದರ್ ರಾಠೋಡ್ ಮಾಹಿತಿ ನೀಡಿದ್ದು, ಪ್ಯಾಲೆಸ್ ಆನ್ ವೀಲ್ಸ್ ರೈಲು ಕಾರ್ಯಾಚರಣೆ ಪುನರಾರಂಭಿಸಲು ಅಕ್ಟೋಬರ್ 4 ರಂದು ರೈಲ್ವೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಒಪ್ಪಂದ ಪ್ರಕ್ರಿಯೆಗಳು ಮುಗಿದ ನಂತರ ಅ.8ರಂದು ಪ್ರವಾಸಿ ರೈಲಿಗೆ ರಾಜ್ಯದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಂಜೆ 4 ಗಂಟೆಗೆ ಚಾಲನೆ ನೀಡಲಿದ್ದಾರೆ. ಇನ್ನು ಈ ರೈಲಿಗೆ ಹೊಸರೂಪ ನೀಡಲಾಗಿದ್ದು ಅದಕ್ಕಾಗಿ 1.25 ಕೋಟಿ ರೂಪಾಯಿಯನ್ನ ಖರ್ಚು ಮಾಡಲಾಗಿದೆ ಎಂದು ಮಾಹಿತಿ ಒದಗಿಸಿದ್ದಾರೆ.
ಇದನ್ನೂ ಓದಿ: 'ಗೋಲ್ಡನ್ ಚಾರಿಯಟ್' ಐಷಾರಾಮಿ ಪ್ರವಾಸಿ ರೈಲು ಸಂಚಾರಕ್ಕೆ ಬ್ರೇಕ್ ಹಾಕಿದ ಸರ್ಕಾರ!