ಹೈದರಾಬಾದ್: ಅಕ್ರಮವಾಗಿ ಭಾರತವನ್ನ ಪ್ರವೇಶಿಸಿ ಹೈದರಾಬಾದ್ನಲ್ಲಿ ನೆಲೆಸಿದ್ದ ಪಾಕಿಸ್ತಾನಿ ಯುವಕ ಫಯಾಜ್ ಮೊಹಮ್ಮದ್ನನ್ನು ಕಳೆದ ತಿಂಗಳು ಪೊಲೀಸರು ಬಂಧಿಸಿದ್ದರು. ಕಳೆದ ಒಂದು ವರ್ಷದಿಂದ ಆತ ನಗರದಲ್ಲಿ ನೆಲೆಸಿರುವುದಾಗಿ ಪೊಲೀಸರು ಪತ್ತೆ ಹಚ್ಚಿದ್ದರು. ಈ ಪ್ರಕಣದ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಇದೀಗಾ ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದೆ. ಪಾಕಿಸ್ತಾನ ಮೂಲದ ಅಳಿಯ ಫಯಾಜ್ನನ್ನು ಹೈದರಬಾದ್ನಲ್ಲಿ ನೆಲೆಸಿರುವ ಆತನ ಮಾವನೇ ಇಲ್ಲಿಗೆ ಬರುವಂತೆ ಕರೆದಿದ್ದಾನೆ. ಒಂದು ವರ್ಷದ ನಂತರ ಫೈಯಾಜ್ ಬಳಿ ಹಣ ಖಾಲಿಯಾದ ಕೂಡಲೇ ಆತ ನೆಲೆಸಿರುವ ಬಗ್ಗೆ ಮಾವನೇ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದುಬಂದಿದೆ.
ಫಯಾಜ್ ಮೊಹಮ್ಮದ್ ಯುನೇಟೆಡ್ ಅರಬ್ಸ್ನ ಶಾರ್ಜಾದಲ್ಲಿ ಗಾರ್ಮೆಂಟ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅಲ್ಲೇ ಕೆಲಸ ಮಾಡುತ್ತಿದ್ದ ಹೈದರಾಬಾದ್ ಮೂಲದ ಹುಡುಗಿ ನೇಹಾ ಫಾತಿಮಾ ಎಂಬ ಯುವತಿಯ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಸ್ನೇಹ ಶುರುವಾಗಿ ಪ್ರೀತಿಗೆ ತಿರುಗಿ ಮದುವೆಗೆ ಕಾರಣವಾಯಿತು. ಅನಾರೋಗ್ಯದ ಕಾರಣ ಕಳೆದ ವರ್ಷ ಫಾತಿಮಾ ಹೈದರಾಬಾದ್ಗೆ ಹಿಂತಿರುಗಿದ್ದಳು. ಬಳಿಕ ಮಗುವಿನ ಜನನವಾಗಿತ್ತು. ಶಾರ್ಜಾದಲ್ಲಿರುವ ತನ್ನ ಅಳಿಯ ಉತ್ತಮ ಸಂಪಾದನೆ ಮಾಡಿರುತ್ತಾನೆ ಎಂದು ಭಾವಿಸಿದ ಮಾವ ಜುಬೇಶ್ ಶೇಖ್ ಭಾರತಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದ್ದರು. ಆದರೆ ಭಾರತದ ವೀಸಾ ಬೇಗೆ ಸಿಗಲ್ಲ ಜೊತೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ತಮ್ಮ ಅಳಿಯನಿಗೆ ನೇಪಾಳದ ವೀಸಾವನ್ನು ತೆಗೆದುಕೊಳ್ಳಲು ಸೂಚಿಸಿದ್ದರು. ನಂತರ ನೇಪಾಳ ಗಡಿಯಲ್ಲಿನ ಗಸ್ತು ಸಿಬ್ಬಂದಿಗೆ 5,000 ರೂ ಪಾವತಿಸಿ ರೈಲಿನಲ್ಲಿ ಹೈದರಾಬಾದ್ ತಲುಪಿದ್ದರು.
ನಂತರ ಆಧಾರ್ ಕಾರ್ಡ್ ಸಿಗುವವರೆಗೂ ಮನೆಯಿಂದ ಹೊರ ಬರದಂತೆ ಫಯಾಜ್ಗೆ ಮಾವ ಹೇಳಿದ್ದರು. ಈ ವರ್ಷದ ಮಾರ್ಚ್‌ನಲ್ಲಿ ಫಯಾಜ್‌ನ ಸೋದರ ಮಾವ ಮೊಹಮ್ಮದ್ ಗೌಸ್ 5 ಸಾವಿರ ರೂ ಪಾವತಿಸಿ ಜನನ ಪ್ರಮಾಣ ಪತ್ರ ತಂದಿದ್ದರು. ಅಷ್ಟೊತ್ತಿಗಾಗಲೇ ಅಳಿಯ ತಂದಿದ್ದ 4-5 ಲಕ್ಷ ರೂ.ಗಳು ಖಾಲಿಯಾಗಿದ್ದವು. ಫಯಾಜ್‌ನ ಆಧಾರ್ ಕಾರ್ಡ್ ಮಾಡಿಸಲು ಮತ್ತೆ ದುಡ್ಡು ಕೇಳಿದ್ದರು. ಈ ವೇಳೆ ಆತನ ಬಳಿ ಹಣ ಇಲ್ಲವೆಂದು ಹೇಳಿದ್ದ. ಇದರಿಂದ ಕೋಪಗೊಂಡ ಮಾವ ಅಕ್ರಮವಾಗಿ ಅಳಿಯ ನೆಲೆಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಳೆದ ತಿಂಗಳು ದಕ್ಷಿಣ ವಲಯ ಪೊಲೀಸರು ಪಾಕಿಸ್ತಾನ್ಯು ಮೂಲದ ಫಯಾಜ್ನನ್ನ ಬಂಧಿಸಿದ್ದರು.
ಇದನ್ನೂ ಓದಿ: Lesbian Marriage: ಗರ್ಭಿಣಿ ಸ್ನೇಹಿತೆಯನ್ನೇ ವಿವಾಹವಾದ ಯುವತಿ!