ETV Bharat / bharat

ಅತ್ತಾರಿ ಗಡಿಯಲ್ಲಿ ‘ಬಾರ್ಡರ್​’ ಜನ್ಮ.. ಗಡಿಯಲ್ಲಿ ವರ್ಷಾನುಗಟ್ಟಲೇ ಜೀವನ ಸಾಗಿಸುತ್ತಿದ್ದಾರೆ ಪಾಕ್​ ಪ್ರಜೆಗಳು! - ಅತ್ತಾರಿ ಗಡಿ ಸುದ್ದಿ,

ಇಂಡೋ ಮತ್ತು ಪಾಕ್​ ಗಡಿಯಲ್ಲಿ ಹೊಸ 'ಬಾರ್ಡರ್' ಉದಯವಾಗಿದೆ. ಅದೇನಂತೀರಾ ಈ ಸ್ಟೋರಿ ಓದಿ.

Baby name is border, Pakistani woman delivers baby boy, Attari border news, ಪಾಕಿಸ್ತಾನ ಮಹಿಳಗೆ ಗಂಡು ಮಗು ಜನನ, ಅತ್ತಾರಿ ಗಡಿ ಸುದ್ದಿ, ಮಗುವಿನ ಬಾರ್ಡರ್​ ಎಂದು ನಾಮಕರಣ,
ಗಡಿಯಲ್ಲಿ ವರ್ಷಾನುಗಟ್ಟಲೇ ಜೀವನ ಸಾಗಿಸುತ್ತಿದ್ದಾರೆ ಪಾಕ್​ ಪ್ರಜೆಗಳು
author img

By

Published : Dec 6, 2021, 2:35 PM IST

ಅತ್ತಾರಿ( ಪಂಜಾಬ್​): ಡಿಸೆಂಬರ್​ 2ರಂದು ಇಂಡೋ-ಪಾಕ್​ ಗಡಿಯಲ್ಲಿ ಹೊಸ ‘ಬಾರ್ಡರ್​’ ಉದಯವಾಗಿದೆ. ಇದು ಗಡಿಭಾಗವಲ್ಲ. ಒಂದು ಮಗುವಿನ ಹೆಸರು. ಪಂಜಾಬ್ ಪ್ರಾಂತ್ಯದ ರಾಜನ್‌ಪುರ ಜಿಲ್ಲೆಗೆ ಸೇರಿದ ನಿಂಬು ಬಾಯಿ ಮತ್ತು ಬಲಮ್ ರಾಮ್ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಮತ್ತು ತೀರ್ಥಯಾತ್ರಾ ಸ್ಥಳಕ್ಕೆ ಬಂದಿದ್ದರು.

ಇವರ ಜೊತೆ ಸುಮಾರು 97 ಪಾಕ್​ ಪ್ರಜೆಗಳು ಸಹ ಬಂದಿದ್ದರು. ಆದರೆ, ಕೊರೊನಾ ಹಿನ್ನೆಲೆ ದೇಶದಲ್ಲಿ ಲಾಕ್​ಡೌನ್​ ಜಾರಿಯಾಗಿತ್ತು. ಆಗ ಇವರು ತಮ್ಮ ಸ್ವಗ್ರಾಮಕ್ಕೆ ತೆರಳವುದಕ್ಕೆ ಮೂಲ ದಾಖಲೆಗಳು ಇಲ್ಲದ ಕಾರಣ ಭಾರತ-ಪಾಕ್ ಗಡಿ ಭಾಗವಾದ ಅತ್ತಾರಿಯಲ್ಲಿ ಟೆಂಟ್​ಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ನಿಂಬು ಬಾಯಿ ತುಂಬು ಗರ್ಭಿಣಿಯಾಗಿದ್ದು, ಡಿಸೆಂಬರ್ 2 ರಂದು ಹೆರಿಗೆ ನೋವು ಕಾಣಿಸಿಕೊಂಡಿದೆ. ಪಕ್ಕದ ಪಂಜಾಬ್ ಗ್ರಾಮಗಳಿಂದ ಕೆಲವು ಮಹಿಳೆಯರು ನಿಂಬು ಬಾಯಿಗೆ ಹೆರಿಗೆಗೆ ಸಹಾಯ ಮಾಡಲು ಬಂದಿದ್ದರು. ಸ್ಥಳೀಯರು ಹೆರಿಗೆಗೆ ವೈದ್ಯಕೀಯ ಸೌಲಭ್ಯಗಳ ಜೊತೆಗೆ ಇತರ ಸಹಾಯವನ್ನೂ ಮಾಡಿದರು. ಆಗ ನಿಂಬು ಬಾಯಿಗೆ ಗಂಡು ಮಗು ಜನಿಸಿದೆ. ಈ ಮಗುವಿಗೆ ಪೋಷಕರು ‘ಬಾರ್ಡರ್​’ ಎಂದು ನಾಮಕರಣ ಮಾಡಿದ್ದಾರೆ.

ಲಾಕ್‌ಡೌನ್‌ಗೂ ಮುನ್ನ ಭಾರತಕ್ಕೆ ಭೇಟಿ ನೀಡಿದ್ದ ಪಾಕ್​ ಪ್ರಜೆಗಳು ಅಗತ್ಯ ದಾಖಲೆಗಳ ಕೊರತೆಯಿಂದಾಗಿ ಮನೆಗೆ ಮರಳಲು ಸಾಧ್ಯವಾಗದ ಹಿನ್ನೆಲೆ ಅತ್ತಾರಿ ಗಡಿಯಲ್ಲಿ ಸಿಲುಕಿಕೊಂಡಿದ್ದರು. 98 ಜನರಲ್ಲಿ 47 ಮಕ್ಕಳು ಸೇರಿದ್ದಾರೆ. ಇವರಲ್ಲಿ ಆರು ಮಕ್ಕಳು ಭಾರತದಲ್ಲೇ ಜನಿಸಿದ್ದಾರೆ.

ಬಲಮ್ ರಾಮ್ ಹೊರತಾಗಿ, ಅದೇ ಟೆಂಟ್‌ನಲ್ಲಿ ವಾಸಿಸುತ್ತಿದ್ದ ಇನ್ನೊಬ್ಬ ಪಾಕಿಸ್ತಾನಿ ಪ್ರಜೆ ಲಗ್ಯಾ ರಾಮ್​ ದಂಪತಿಗೆ 2020 ರಲ್ಲಿ ಜೋಧ್‌ಪುರದಲ್ಲಿ ಮಗು ಜನಿಸಿತ್ತು. ಭಾರತದಲ್ಲಿ ಜನಿಸಿದ್ದ ಕಾರಣ ಆ ಮಗುವಿಗೆ 'ಭರತ್' ಎಂದು ನಾಮಕರಣ ಮಾಡಿದ್ದರು. ಲಗ್ಯಾ ರಾಮ್​ ಜೋಧ್‌ಪುರದಲ್ಲಿರುವ ತನ್ನ ಸಹೋದರನನ್ನು ಭೇಟಿಯಾಗಲು ಬಂದಿದ್ದರು. ಆದರೆ ಅವರು ಸಹ ಅತ್ತಾರಿ ಗಡಿಯಲ್ಲೇ ಸಿಲುಕೊಂಡಿದ್ದಾರೆ.

ಇವರೆಲ್ಲರೂ ರಹೀಮ್ ಯಾರ್ ಖಾನ್ ಮತ್ತು ರಾಜನ್‌ಪುರ ಸೇರಿದಂತೆ ಪಾಕಿಸ್ತಾನದ ವಿವಿಧ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಪಾಕಿಸ್ತಾನಿ ರೇಂಜರ್‌ಗಳು ತಮ್ಮ ಪ್ರಜೆಗಳನ್ನು ಕರೆಸಿಕೊಳ್ಳಲು ನಿರಾಕರಿಸಿದ್ದರಿಂದ ಅವರು ಪ್ರಸ್ತುತ ಅತ್ತಾರಿ ಗಡಿಯಲ್ಲಿ ಟೆಂಟ್‌ನಲ್ಲಿ ವಾಸಿಸುತ್ತಿದ್ದಾರೆ.

ಈ ಕುಟುಂಬಗಳು ಅತ್ತಾರಿ ಅಂತಾರಾಷ್ಟ್ರೀಯ ಚೆಕ್ ಪೋಸ್ಟ್ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಬೀಡುಬಿಟ್ಟಿವೆ. ಸ್ಥಳೀಯರು ಇವರಿಗೆ ಮೂರು ಹೊತ್ತಿನ ಊಟ, ಔಷಧ, ಬಟ್ಟೆ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.