ಶ್ರೀನಗರ, ಜಮ್ಮು ಮತ್ತು ಕಾಶ್ಮೀರ: ಭಾರತ ಪಾಕ್ ಅಂತಾರಾಷ್ಟ್ರೀಯ ಗಡಿ ಅರ್ನಿಯಾ ಸೆಕ್ಟರ್ ಸಮೀಪದ ಟೋಫ್ ಗ್ರಾಮದಲ್ಲಿ ಬುಧವಾರ ನಡೆದ ಶಸ್ತ್ರಾಸ್ತ್ರ ಮರು ಪಡೆಯುವಿಕೆ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಭಯೋತ್ಪಾದಕನೊಬ್ಬನನ್ನು ಕೊಲ್ಲಲಾಗಿದ್ದು, ಪೊಲೀಸ್ ಕಾನ್ಸ್ಟೇಬಲ್ ಗಾಯಗೊಂಡಿದ್ದಾರೆ.
ಜಮ್ಮು ಜಿಲ್ಲೆಯ ಅರ್ನಿಯಾ ಸೆಕ್ಟರ್‌ನಲ್ಲಿ ಗುಪ್ತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವಾಗ ಪಾಕಿಸ್ತಾನದ ಎಲ್‌ಇಟಿ ಕಮಾಂಡರ್ವೊಬ್ಬ ಮಾಜಿ ಸೈನಿಕನಿಂದ ರೈಫಲ್ ಕಸಿದುಕೊಂಡು ಪೊಲೀಸ್ ಪಾರ್ಟಿಯ ಮೇಲೆ ಗುಂಡು ಹಾರಿಸಿದಾಗ ಕಾನ್ಸ್ಟೇಬಲ್ ಒಬ್ಬರು ಗಾಯಗೊಂಡಿದ್ದಾರೆ. ಈ ವೇಳೆ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಮಾತನಾಡಿ, ಟೋಫ್ ಗ್ರಾಮದ ಕೋಟ್ ಭಾಲ್ವಾಲ್ ಜೈಲಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಮೊಹಮ್ಮದ್ ಅಲಿ ಹುಸೇನ್ ಅಲಿಯಾಸ್ ಖಾಸಿಂ ಎಂಬ ಹೆಸರಿನ ಪಾಕಿಸ್ತಾನಿ ಭಯೋತ್ಪಾದಕ ಮತ್ತು ಜಹಾಂಗೀರ್ ಎಂಬ ಪೊಲೀಸ್ ಕಾನ್ಸ್ಟೇಬಲ್ ಗಾಯಗೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ವೇಳೆ ಭಯೋತ್ಪಾದಕ ಸಾವನ್ನಪ್ಪಿದ್ದಾನೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಮೂವರ ಹೈಬ್ರಿಡ್ ಉಗ್ರರ ಸೆರೆ.. ನಾಗರಿಕರ ಹತ್ಯೆ ಮಾಡಿದ್ದ ಕೀಚಕರು