ETV Bharat / bharat

ಪಿಎಫ್​ಐ ಪ್ರತಿಭಟನೆಯಲ್ಲಿ ಕೇಳಿ ಬಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ - NIA raids on PFI

ಪುಣೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪಿಎಫ್​ಐ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಗಿದೆ.

pakistan-zindabad-slogans-heard-in-pune-during-pfi-protest
ಪಿಎಫ್​ಐ ಪ್ರತಿಭಟನೆಯಲ್ಲಿ ಕೇಳಿ ಬಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ
author img

By

Published : Sep 24, 2022, 4:14 PM IST

Updated : Sep 24, 2022, 4:28 PM IST

ಪುಣೆ (ಮಹಾರಾಷ್ಟ್ರ): ಎನ್​ಐಎ ಮತ್ತು ಸಿಬಿಐ ದಾಳಿ ಖಂಡಿಸಿ ನಡೆಸುತ್ತಿದ್ದ ಪಿಎಫ್​ಐ ಪ್ರತಿಭಟನೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮೊಳಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಶುಕ್ರವಾರ ನಡೆದ ಪಿಎಫ್​ಐ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಈ ಘೋಷಣೆ ಕೇಳಿ ಬಂದಿದೆ.

ಇದನ್ನೂ ಓದಿ: ಲಖನೌದಲ್ಲಿ ಆರು ಪಿಎಫ್​ಐ ಕಾರ್ಯಕರ್ತರ ಬಂಧನ.. ಎನ್​ಐಎ ಕೇರಳ ಕೋರ್ಟ್​ಗೆ ಸಲ್ಲಿಸಿದ ವರದಿಯಲ್ಲೇನಿದೆ?

ಉಗ್ರರ ನಂಟು, ಉಗ್ರ ಚಟುವಟಿಕೆಗೆ ಪ್ರೋತ್ಸಾಹ ಶಂಕೆ ಮೇರೆ ಕೇಂದ್ರ ತನಿಖಾ ದಳಗಳು ಇತ್ತೀಚೆಗೆ ಪಿಎಫ್​ಐ ಮುಖಂಡರ ನಿವಾಸಿಗಳು ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿವೆ. ಇದನ್ನು ಖಂಡಿಸಿ ಪುಣೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪಿಎಫ್​ಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ, ಅನೇಕ ಕಾರ್ಯಕರ್ತರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ದೇಶ್ಯಾದ್ಯಂತ ಎನ್​ಐಎ ಬಳಿಕ ಸಿಬಿಐ ದಾಳಿ.. ಕೇಂದ್ರಾಡಳಿತ, 20 ರಾಜ್ಯಗಳು ಸೇರಿ 56 ಕಡೆಯಲ್ಲಿ ಶೋಧ

ಅಲ್ಲದೇ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಯಾವುದೇ ಅನುಮತಿ ಪಡೆಯದೇ ಪಿಎಫ್​ಐ ಕಾರ್ಯಕರ್ತರು ಜಮಾಯಿಸಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ರಿಯಾಜ್​ ಸೈಯದ್​ ಸೇರಿ ಸುಮಾರು 70 ಕಾರ್ಯಕರ್ತರ ವಿರುದ್ಧ ಪೊಲೀಸರು ಕೇಸ್​ ದಾಖಲಿಸಿದ್ದಾರೆ. ಜೊತೆಗೆ ಇಂದು ಬೆಳಗ್ಗೆ ಕೆಲ ಕಾರ್ಯಕರ್ತರನ್ನೂ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಭಯೋತ್ಪಾದಕ ಸಂಘಟನೆಗಳಿಗೆ ಮುಸ್ಲಿಂ ಯುವಕರನ್ನು ನೇಮಿಸುವುದು ಪಿಎಫ್‌ಐ ಕೆಲಸ: ಎನ್‌ಐಎ

Last Updated : Sep 24, 2022, 4:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.