ETV Bharat / bharat

ಗುಜರಾತ್​ ಚುನಾವಣೆ: ತಮ್ಮ ಜೀವನದ ಮೊದಲ ಮತ ಚಲಾಯಿಸಿದ ಪಾಕಿಸ್ತಾನದ ಮಹಿಳೆ

ಗುಜರಾತ್​ನ ಜುನಾಗಢ ವ್ಯಕ್ತಿ ಮದುವೆಯಾದ ಪಾಕಿಸ್ತಾನದ ಮಹಿಳೆಯೊಬ್ಬರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ್ದಾರೆ.

pakistan-woman-vote-for-the-first-time-in-her-life-at-junagadh
ಗುಜರಾತ್​ ಚುನಾವಣೆ: ತಮ್ಮ ಜೀವನದ ಮೊದಲ ಮತ ಚಲಾಯಿಸಿದ ಪಾಕಿಸ್ತಾನದ ಮಹಿಳೆ
author img

By

Published : Dec 1, 2022, 6:05 PM IST

ಜುನಾಗಢ (ಗುಜರಾತ್​): ಗುಜರಾತ್​ ವಿಧಾನಸಭೆಗೆ ಇಂದು ಮೊದಲ ಹಂತದ ಮತದಾನ ನಡೆದಿದೆ. ಜುನಾಗಢದಲ್ಲಿ ಪಾಕಿಸ್ತಾನದ ಮಹಿಳೆಯೊಬ್ಬರು ಭಾರತದಲ್ಲಿ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಪಾಕಿಸ್ತಾನದ ಹೇಮಾಬೆನ್ ಅಹುಜಾ ಎಂಬುವವರೇ ಗುಜರಾತ್​ ಚುನಾವಣೆಯಲ್ಲಿ ಪಾಲ್ಗೊಂಡು ಮತದಾನ ಮಾಡಿದ ಮಹಿಳೆ. ಪಾಕಿಸ್ತಾನದ ಪ್ರಜೆಯಾಗಿದ್ದ ಹೇಮಾಬೆನ್ ಅಹುಜಾ ಕೆಲ ವರ್ಷಗಳ ಹಿಂದೆ ಜುನಾಗಢದ ಮನೀಶ್ ಅಹುಜಾ ಅವರನ್ನು ಮದುವೆಯಾಗಿದ್ದರು.

ಮದುವೆ ನಂತರ ಗಂಡನ ಮನೆಗೆ ಬಂದು ನೆಲೆಸಿರುವ ಹೇಮಾಬೆನ್​ 2021ರಲ್ಲಿ ಭಾರತದ ಪೌರತ್ವ ಪಡೆದಿದ್ದಾರೆ. ಗುರುವಾರ 89 ಕ್ಷೇತ್ರಗಳಿಗೆ ನಡೆದ ಮೊದಲ ಹಂತ ಚುನಾವಣೆ ಪ್ರಕ್ರಿಯೆಯಲ್ಲಿ ಹೇಮಾಬೆನ್ ಸಹ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಲ್ಲದೇ, ಹೇಮಾಬೆನ್ ತಮ್ಮ ಜೀವನದಲ್ಲಿ ಚಲಾಯಿಸಿದ ಮೊದಲ ಮತ ಎಂಬುವುದೇ ಗಮನಾರ್ಹ.

ಇದನ್ನೂ ಓದಿ: ಗುಜರಾತ್ ಚುನಾವಣೆ: ಮೊದಲ ಬಾರಿಗೆ ಮತ ಚಲಾಯಿಸಿದ ಸಿದ್ಧಿ ಬುಡಕಟ್ಟು ಸಮುದಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.