ETV Bharat / bharat

'ವಿಶ್ವಾಸ' ಗೆದ್ದ ಇಮ್ರಾನ್​ ಖಾನ್​: ಪಾಕ್​ನಲ್ಲಿ​ ಪ್ರತಿಪಕ್ಷಗಳಿಗೆ ಮುಖಭಂಗ - ಪಾಕ್​ ಪ್ರಧಾನಿ

ಪಾಕ್​ ಪ್ರಧಾನಿ ಸಂಸತ್​ನಲ್ಲಿ ವಿಶ್ವಾಸ ಮತ ಯಾಚಿಸಿ ಗೆದ್ದು ಬೀಗಿದ್ದಾರೆ. ಇದರಿಂದ ಪ್ರತಿಪಕ್ಷಗಳಿಗೆ ಮುಖಭಂಗವಾಗಿದೆ.

imran khan
ಇಮ್ರಾನ್​ ಖಾನ್
author img

By

Published : Mar 6, 2021, 1:13 PM IST

Updated : Mar 6, 2021, 2:30 PM IST

ನವದೆಹಲಿ: ಹಣಕಾಸು ಸಚಿವ ಅಬ್ದುಲ್​ ಹಫೀಜ್​ ಶೇಖ್​ ಸಂಸತ್​ ಚುನಾವಣೆಯಲ್ಲಿ ಸೋಲು ಕಂಡಿದ್ದ ಹಿನ್ನೆಲೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಸಂಸತ್​ನಲ್ಲಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಮ್ರಾನ್​ ಆಪ್ತರು ಆಗಿದ್ದ ಶೇಖ್​ ಮಾಜಿ ಪ್ರಧಾನಿ ಪಿಡಿಎಂ ಅಭ್ಯರ್ಥಿ ಯುಸೂಫ್​ ರಾಜಾ ಗಿಲಾನಿ ಎದುರು ಹೀನಾಯವಾಗಿ ಸೋತಿದ್ದಾರೆ. ಇತ್ತ ವಿರೋಧ ಪಕ್ಷಗಳು ಪ್ರಧಾನಿ ಇಮ್ರಾನ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಟೀಕಿಸಿದ್ದರು. ಈ ಹಿನ್ನೆಲೆ ಫಲಿತಾಂಶ ಬಂದ ನಂತರ ಮಾತನಾಡಿದ್ದ ವಿದೇಶಾಂಗ ಸಚಿವ ಖುರೇಶಿ, ವಿಶ್ವಾಸ ಮತ ಯಾಚಿಸಲು ಇಮ್ರಾನ್​ ಖಾನ್​ ನಿರ್ಧರಿಸಿದ್ದಾರೆ ಎಂದಿದ್ದರು.

ಇಸ್ಲಾಮಿಕ್ ಸಂವಿಧಾನದ 91 ನೇ ವಿಧಿಯ 7 ನೇ ವಿಧಿಯ ಅಡಿಯಲ್ಲಿ ಪ್ರಧಾನಿ ವಿಶ್ವಾಸ ಮತ ಯಾಚಿಸಿದ ಇಮ್ರಾನ್​ ಗೆದ್ದು ಬೀಗಿದ್ದಾರೆ. ಈ ಹಿಂದೆ ಬೆನಿಜಿರ್​ ಭಟ್ಟೋ,ಸವಾಜ್​ ಷರೀಫ್​,ಚೌಧರಿ ಸುಜಾತ್​,ಶೌಕತ್​ ಅಜೀಜ್​, ಜಫರುಲ್ಲಾ ಜಮಾಲಿ,ಯುಸೂಫ್​ ರಾಜಾ ಗಿಲಾನಿ ಸಹ ವಿಶ್ವಾಸ ಮತ ಯಾಚಿಸಿದ್ದರು.

ಇಮ್ರಾನ್​ ಖಾನ್​ ಸ್ವಯಂ ಪ್ರೇರಿತವಾಗಿ ವಿಶ್ವಾಸ ಮತ ಯಾಚಿಸಿ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದಾರೆ.

Last Updated : Mar 6, 2021, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.