ದೇವಭೂಮಿ ದ್ವಾರಕಾ (ಗುಜರಾತ್): ಅಂತಾರಾಷ್ಟ್ರೀಯ ಕಡಲ ಗಡಿ ರೇಖೆಯನ್ನು (ಐಎಂಬಿಎಲ್) ದಾಟಿದ ಆರೋಪದ ಮೇಲೆ ವಿವಿಧ ಘಟನೆಗಳ ಅಡಿ ಗುಜರಾತ್‌ನ 12 ಮೀನುಗಾರರನ್ನು ಪಾಕಿಸ್ತಾನ ಕಡಲ ಭದ್ರತಾ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ. ಬಂಧಿತ ಮೀನುಗಾರರು ಎರಡು ದೋಣಿಗಳಲ್ಲಿ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದರು. ಮೀನುಗಾರರನ್ನು ಕರಾಚಿಗೆ ಕರೆದೊಯ್ದು ಅಲ್ಲಿ ವಿಚಾರಣೆ ನಡೆಸಲಾಗುತ್ತದೆ ಎಂದು ವರದಿಯಾಗಿದೆ.
ಹೆಚ್ಚಿನ ವಿವರ: ಮೊನ್ನೆ ಫೆಬ್ರವರಿ 1 ರಂದು ಗುಜರಾತ್‌ನ ಸಮುದ್ರ ತೀರದಿಂದ ಮೀನುಗಾರಿಕೆಗೆ ತೆರಳಿದ್ದ ಭಾರತೀಯ ಮೀನುಗಾರರನ್ನು ವಶಕ್ಕೆ ಪಡೆದಿದೆ. ನೆರೆಯ ದೇಶವು ತನ್ನ ಆಪರೇಷನ್ ಮುಸ್ತಾದ್‌ನ ಭಾಗವಾಗಿ 'ಸತ್ಯಾವತಿ' ಎಂಬ ಬೋಟ್‌ನಲ್ಲಿದ್ದ ಇಬ್ಬರು ಮೀನುಗಾರರನ್ನು ವಶಕ್ಕೆ ತೆಗೆದುಕೊಂಡಿದೆ. ನಂತರ ಮೀನುಗಾರರನ್ನು ವಿಚಾರಣೆಗಾಗಿ ಕರಾಚಿಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ:ಪಿತೂರಿ ಪ್ರಕರಣ : ಮಲಯಾಳಂ ನಟ ದಿಲೀಪ್ ಸೇರಿ ಐವರಿಗೆ ಜಾಮೀನು ಮಂಜೂರು ಮಾಡಿದ ಕೇರಳ ಹೈಕೋರ್ಟ್!
ಇದಕ್ಕೂ ಮುನ್ನ ಪಾಕಿಸ್ತಾನ ಎರಡು ಭಾರತೀಯ ದೋಣಿಗಳನ್ನು ಹೈಜಾಕ್ ಮಾಡಿದೆ ಎನ್ನಲಾಗಿದೆ. ಅದೇ ವೇಳೆ ಮತ್ತೊಂದು ಬೋಟ್ ಹೈಜಾಕ್ ಮಾಡಿದ ಪಡೆ ಪೋರಬಂದರ್ ಕರಾವಳಿಯ ಬಳಿ ಮೂವರು ಮೀನುಗಾರರನ್ನು ಬಂಧಿಸಿದೆ.
ಮತ್ತೊಂದು ಘಟನೆಯಲ್ಲಿ ಓಖಾ ಕರಾವಳಿಯಲ್ಲಿ 'ತುಳಸಿ ಮೈಯಾ' ಎಂಬ ಹೆಸರಿನ ದೋಣಿಯಿಂದ ಏಳು ಮಂದಿ ಮೀನುಗಾರರನ್ನು ವಶಕ್ಕೆ ಪಡೆದಿದೆ.